Top

ಹಿಂದುಳಿದವರು, ಸಾಮಾಜಿಕವಾಗಿ ಶೋಷಣೆಗೆ ಒಳಗಾದವರಿಗೆ ಮೀಸಲಾತಿ ಸಿಗಬೇಕು

ಯಾರೇ ಮೀಸಲಾತಿ ಕೇಳಿದ್ರೂ ನಾನು ವಿರೋಧ ಮಾಡಲ್ಲ, ಯಾರೇ ಬೇಕಾದರೂ ಮೀಸಲಾತಿಗಾಗಿ ಹೋರಾಟ ಮಾಡಬಹುದು

ಹಿಂದುಳಿದವರು, ಸಾಮಾಜಿಕವಾಗಿ ಶೋಷಣೆಗೆ ಒಳಗಾದವರಿಗೆ ಮೀಸಲಾತಿ ಸಿಗಬೇಕು
X

ಬೆಂಗಳೂರು: ನಾನು ಯಾವುದೇ ಸಂಘಟನೆ ಕುರಿತು ಮಾತನಾಡಿಲ್ಲ, ನಾನು ಹೇಳದ ವಿಚಾರದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.

ನಾನು ಹಿಂದ ಸಂಘಟನೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಹಿಂದ ಸಂಘಟನೆ ಮಾಡುವ ಬಗ್ಗೆ ಪಾಸಿಟಿವ್ ಮಾತಾಡಲ್ಲ, ನೆಗೆಟಿವ್ ಸಹ ಮಾತಾಡಲ್ಲ. ಹಿಂದುಳಿದವರು, ಸಾಮಾಜಿಕವಾಗಿ ಶೋಷಣೆಗೆ ಒಳಗಾದವರಿಗೆ ಮೀಸಲಾತಿ ಸಿಗಬೇಕು ಎಂದರು.

ಇನ್ನು ಭಾರತದ ಸಂವಿಧಾನ ಸಹ ಇದನ್ನು ಹೇಳಿದೆ. ಯಾರೇ ಮೀಸಲಾತಿ ಕೇಳಿದ್ರೂ ನಾನು ವಿರೋಧ ಮಾಡಲ್ಲ, ಯಾರೇ ಬೇಕಾದರೂ ಮೀಸಲಾತಿಗಾಗಿ ಹೋರಾಟ ಮಾಡಬಹುದು ಎಂದು ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಹಿಂದ ಸಂಘಟನೆಯ ಅಗತ್ಯವಿದೆ ಅಂತ ಪ್ರತಿಪಾದಿಸಿದ್ದಾರೆ.

ಇನ್ನು ಕುರುಬ ಸಮಾಜದಿಂದ ಗ್ರಾಮ ಪಂಚಾಯತಿಯಲ್ಲಿ ಗೆದ್ದವರಿಗೆ ಸನ್ಮಾನ ಮಾಡಲು ಸಮಾವೇಶ ಮಾಡ್ತಾ ಇದ್ದಾರೆ. ನಾನು ಕುರುಬ ಎಸ್​ಟಿ ಹೋರಾಟ ಮತ್ತು ಸಚಿವ ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Next Story

RELATED STORIES