Top

ಎಸ್​ಐಟಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಲಾಗಿದೆ - ಬಸವರಾಜ ಬೊಮ್ಮಾಯಿ

ಎಸ್​ಐಟಿಯಲ್ಲಿ ಹಿರಿಯ ಅಧಿಕಾರಿ ಇದ್ದಾರೆ. ಅವರು ಕ್ರಮ ಬದ್ದವಾಗಿ ಕೆಲಸ ಮಾಡುತ್ತಿದ್ದಾರೆ.

ಎಸ್​ಐಟಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಲಾಗಿದೆ - ಬಸವರಾಜ ಬೊಮ್ಮಾಯಿ
X

ಬೆಂಗಳೂರು: ಎಸ್​ಐಟಿ ತನ್ನ ಕಾರ್ಯ ಸಮರ್ಥವಾಗಿ ಮಾಡುತ್ತಿದೆ. ಕ್ರಮ ಬದ್ದವಾಗಿ, ಕಾನೂನಾತ್ಮಕವಾಗಿ ತನಿಖೆ ಮಾಡುತ್ತಿದ್ದಾರೆ. ತನಿಖೆಯಲ್ಲಿ ನಾನು ಮಧ್ಯೆ ಪ್ರವೇಶ ಮಾಡೋಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಬುಧವಾರ ಹೇಳಿದ್ದಾರೆ.

ರಮೇಶ್ ಜಾರಕಿಹೋಳಿ ಬಂಧನ ಯಾಕೆ ಇಲ್ಲ ಅನ್ನೊ ಕಾಂಗ್ರೆಸ್ ಟ್ವಿಟ್​ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್ ಅವರಿಗೆ ಬಂಧನ ಮಾಡಿ ಅಂತ ಕೇಳೋ ಯಾವ ನೈತಿಕತೆಯೂ ಇಲ್ಲ, ಮೇಟಿ ಕೇಸ್​ನಲ್ಲಿ ಕಾಂಗ್ರೆಸ್ ಅವರು ಏನ್ ಮಾಡಿದರು ಅಂತ ಗೊತ್ತಿದೆ. ಮೇಟಿ ಕೇಸ್​ನಲ್ಲಿ ಎಫ್​ಐಆರ್ ಕೂಡಾ ಹಾಕಿರಲಿಲ್ಲ ಕಾಂಗ್ರೆಸ್ ಸರ್ಕಾರ. ಏನು ಮಾಡದೇ ಕ್ಲೀನ್ ಚಿಟ್ ಕೊಡೋ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಿತು. ಸಿಡಿ ಮಾಡಿದವರನ್ನು ಕಾಂಗ್ರೆಸ್ ಸರ್ಕಾರದವರು ಕಂಡು ಹಿಡಿಯಲಿಲ್ಲ, ಮೊದಲು ಅವರ ಸರ್ಕಾರದಲ್ಲಿ ಏನ್ ಮಾಡಿದರು ಅಂತ ತಿರುಗಿ ನೋಡಿಕೊಳ್ಳಲಿ ಎಂದು ಸಚಿವರು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದಾರೆ.

ಟ್ವಿಟರ್​ನಲ್ಲಿ ಹಾಕೋದು, ಹೇಳಿಕೆ ಕೊಡೋದು ಪ್ರತಿಭಟನೆ ಮಾಡೋ ಮೂಲಕ ತನಿಖೆ ಮೇಲೆ ಯಾವುದೇ ಪರಿಣಾಮ ಬೀರೊಲ್ಲ, ಯಾರ ಒತ್ತಡಕ್ಕೂ ನಾವು ಮಣಿಯಿಲ್ಲ, ಯಾರ ಪರವೂ ನಾವು ಇಲ್ಲ, ಯಾರ ವಿರುದ್ದವೂ ನಾವು ಇಲ್ಲ. ಎಸ್​ಐಟಿಯಲ್ಲಿ ಹಿರಿಯ ಅಧಿಕಾರಿ ಇದ್ದಾರೆ. ಅವರು ಕ್ರಮ ಬದ್ದವಾಗಿ ಕೆಲಸ ಮಾಡುತ್ತಿದ್ದಾರೆ. ಅನವಶ್ಯಕವಾಗಿ ಮಾತಾಡಿ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದು ಗೃಹಮಂತ್ರಿ ಬಸವರಾಜ್​ ಬೊಮ್ಮಾಯಿ ಅವರು ಹೇಳಿದರು.

ರಮೇಶ್ ಜಾರಕಿಹೋಳಿರನ್ನ ವಶಕ್ಕೆ ಪಡೆಯುತ್ತೀರಾ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್​ಐಟಿ ಅಧಿಕಾರಿಗಳು ಅದನ್ನ ತೀರ್ಮಾನ ಮಾಡ್ತಾರೆ. ಈ ಬಗ್ಗೆ ನಾನು ಏನೇನು ಮಾತಾಡೋಲ್ಲ. ಎಸ್​ಐಟಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಲಾಗಿದೆ. ಎಲ್ಲಾ ವಿಚಾರ ಅವರು ಕಾನೂನು ಬದ್ದವಾಗಿ ನೋಡಿಕೊಳ್ತಾರೆ ಎಂದು ಗೃಹ ಸಚಿವರು ಹೇಳಿದ್ದಾರೆ.

Next Story

RELATED STORIES