Top

ಇವರೇನು ಹರಿಶ್ಚಂದ್ರರ ಮಕ್ಕಳೇ - ಮಲ್ಲಿಕಾರ್ಜುನ್​ ಖರ್ಗೆ ಅಕ್ರೋಶ

ಸಂವಿಧಾನವನ್ನು ಇವರು ಒಪ್ಪಲ್ಲ. ಪ್ರಜಾಪ್ರಭುತ್ವವನ್ನೂ ಇವರು ಒಪ್ಪಲ್ಲ.

ಇವರೇನು ಹರಿಶ್ಚಂದ್ರರ ಮಕ್ಕಳೇ - ಮಲ್ಲಿಕಾರ್ಜುನ್​ ಖರ್ಗೆ ಅಕ್ರೋಶ
X

ಬೆಂಗಳೂರು: ಬಾಂಗ್ಲಾ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ದೆ ಅಂತ ಪ್ರಧಾನಿ ಮೋದಿಯವರು ಹೇಳಿದ್ದರು. ಬಾಂಗ್ಲಾ ಹೋರಾಟದಲ್ಲೇ ಅವರು ಭಾಗವಹಿಸಿರಲಿಲ್ಲ, ಬರೀ ಸುಳ್ಳು ಹೇಳಿಕೊಂಡೇ ಹೊರಟಿದ್ದಾರೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್​ ಖರ್ಗೆ ಅವರು ಸೋಮವಾರ ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಪ್ರಧಾನಿ ಮೋದಿಯವರು ಮಾತನಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತಾನಾಡಿದ ಅವರು, ಪಾಪ ಅವರು ಇನ್ನೊಂದು ಹೇಳಬೇಕಿತ್ತು. ದೇಶದ ಸ್ವಾತಂತ್ರ್ಯದಲ್ಲಿ ಪಾಲ್ಗೊಂಡಿದ್ದೆ ಎನ್ನಬೇಕಿತ್ತು. ಆದರೆ, ಹಾಗೇ ಹೇಳಲಿಲ್ಲವಷ್ಟೇ(!) ಎಂದು ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಇನ್ನು ದೇಶವಿಭಜನೆಯನ್ನ ಮಾಡುತ್ತಿದ್ದಾರೆ. ಜಾತಿಜಾತಿಗಳ ನಡುವೆ ಧ್ವೇಷ ಮೂಡಿಸುತ್ತಿದ್ದಾರೆ. ಧರ್ಮ ಮುಂದಿಟ್ಟುಕೊಂಡೇ ಅಧಿಕಾರಕ್ಕೆ ಬಂದವರು. ದೇಶದ ಅಭಿವೃದ್ಧಿಯ ಬಗ್ಗೆ ಎಲ್ಲೂ ಮಾತನಾಡಲಿಲ್ಲ, ದೇಶವನ್ನ ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಟೀಕಿಸಿದ್ದಾರೆ.

ಸದ್ಯ ಕೇರಳ, ಬಸವಕಲ್ಯಾಣದಲ್ಲಿ ಆರ್​ಎಸ್​ಎಸ್​ ಐಡಿಯಾಲಜಿ ಮಾಡುತ್ತಿದ್ದಾರೆ. ಇದೊಂದು ವಿಷ ವಿದ್ದಂತೆ. ವಿಷವನ್ನ ಎಲ್ಲಾದ್ರೂ ಟೆಸ್ಟ್ ಮಾಡೋಕೆ ಸಾಧ್ಯವಾಗುತ್ತಾ(?) ಒಂದು ತೊಟ್ಟು ಕುಡಿದರೆ ಸಾಕು ಸಾಯುತ್ತಾರೆ. ಹೋಗಲಿ ಅಂತ ಒಮ್ಮೆ ಅವಕಾಶ ಕೊಟ್ಟರೆ ಮುಗೀತು. ಎಲ್ಲವೂ ಮುಗಿದಂತೆಯೇ ಸರಿ. ಸಂವಿಧಾನವನ್ನು ಇವರು ಒಪ್ಪಲ್ಲ. ಪ್ರಜಾಪ್ರಭುತ್ವವನ್ನೂ ಇವರು ಒಪ್ಪಲ್ಲ. ಹಿಂದೆಯೂ ಅದನ್ನೇ ಹೇಳಿದ್ದೆ, ಈಗಲೂ ಅದನ್ನೇ ಹೇಳ್ತೇನೆ. ಇವರು ದೇಶ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ನಾವು ದೇಶ ಒಗ್ಗಟ್ಟು ಮೂಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಕಾಂಗ್ರೆಸ್​ ಹಿರಿಯಮುಖಂಡ ಮಲ್ಲಿಕಾರ್ಜುನ್​ ಖರ್ಗೆ ಅವರು ಆರ್​ಎಸ್​ಎಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೇಶವನ್ನ ಛಿದ್ರ ಛಿದ್ರ ಮಾಡುತ್ತಿದ್ದಾರೆ. ನಾವು ಬಹಳಷ್ಟು ದಿನ ಅಧಿಕಾರ ಮಾಡುತ್ತೇವೆ ಅಂದುಕೊಂಡಿದ್ದಾರೆ. ಆದರೆ ಜನ ಎಷ್ಟು ದಿನ ಅಂತ ಸುಮ್ಮನೆ ಬಿಡ್ತಾರೆ. ಇಂದಲ್ಲ ನಾಳೆ ಅವರಿಗೆ ಬುದ್ಧಿ ಕಲಿಸ್ತಾರೆ. ಹೋದ ಕಡೆಯೆಲ್ಲ ಭ್ರಷ್ಟಸರ್ಕಾರ ಇವೆ ಅಂತಾರೆ. ಇವರ ಪಕ್ಷದಲ್ಲೇ ಭ್ರಷ್ಟರು ತುಂಬಿಕೊಂಡಿದ್ದಾರೆ. ಇವರೇನು ಹರಿಶ್ಚಂದ್ರರ ಮಕ್ಕಳೇ(?) ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಡ್ವಾಣಿ, ಮುರುಳಿಮನೋಹರ್ ಜೋಶಿ ಏನಾದರು. ಇವರೆಲ್ಲ 75 ವರ್ಷ ಆಯ್ತು ಅಂತ ಮೂಲೆಗೆ ಕೂರಿಸಿದರು. ಕೇರಳದಲ್ಲಿ ಶ್ರೀಧರನ್​ಗೆ 85 ವರ್ಷ. ಅಲ್ಲಿ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದಾರೆ. ಹೇಳುವುದು ಒಂದು, ಮಾಡುವುದು ಮತ್ತೊಂದು. ಇದು ಬಿಜೆಪಿ ನಾಯಕರ ಸಿದ್ಧಾಂತ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಲ್ಲಿಕಾರ್ಜುನ್​ ಖರ್ಗೆ ಅವರು ಗುಡುಗಿದ್ದಾರೆ.

Next Story

RELATED STORIES