Top

ಎನ್​ಐಎ ನಮ್ಮನ್ನ ಕರೆಸಿದ್ದೇ ಆಶ್ಚರ್ಯವಾಗಿದೆ - ಶಾಸಕ ರಿಜ್ವಾನ್​ ಅರ್ಷದ್​

ಎನ್​ಐಎ ನಮ್ಮನ್ನ ಕರೆಸಿದ್ದೇ ಆಶ್ಚರ್ಯವಾಗಿದೆ. ಯಾಕಂದ್ರೆ ಘಟನೆ ದಿನ ನಾವು ಅಲ್ಲಿಗೆ ಹೋಗಿರಲಿಲ್ಲ

ಎನ್​ಐಎ ನಮ್ಮನ್ನ ಕರೆಸಿದ್ದೇ ಆಶ್ಚರ್ಯವಾಗಿದೆ -  ಶಾಸಕ ರಿಜ್ವಾನ್​ ಅರ್ಷದ್​
X

ಬೆಂಗಳೂರು: ಹಿರಿಯ ಪೊಲೀಸರ ಅಧಿಕಾರಿಗಳ ಸಲಹೆಯಂತೆ ಅಲ್ಲಿಗೆ ಹೋಗಿದ್ದೆವು. ನಾನು, ಜಮೀರ್ ಅಹ್ಮದ್ ತೆರಳಿದ್ದೆವು. ಈ ಬಗ್ಗೆ ಎನ್​ಐಎ ಅಧಿಕಾರಿಗಳು ವಿಚಾರಣೆ ಮಾಡಿದರು ಎಂದು ಶಿವಾಜಿನಗರ ಶಾಸಕ ರಿಜ್ವಾನ್​ ಅರ್ಷದ್​ ಅವರು ಗುರುವಾರ ಹೇಳಿದ್ದಾರೆ.

ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜೆ. ಹಳ್ಳಿ ಗಲಭೆ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸ್ಥಳಕ್ಕೆ ಭೇಟಿ ನೀಡಿದ್ರೆ ಆಗಿನ ವಾತಾವರಣ ಹೇಗಿತ್ತು. ಅದನ್ನ ಹೇಳಿದರೆ ನಮ್ಮ ತನಿಖೆಗೆ ಅನುಕೂಲವಾಗಲಿದೆ ಎಂದರು. ನಾವು ನಮಗೆ ಗೊತ್ತಿರುವ ಮಾಹಿತಿ ನೀಡಿದ್ದೇವೆ ಇದನ್ನ ಬಿಟ್ಟರೆ ಬೇರೇನು ಕೇಳಿಲ್ಲ ಎಂದು ಅವರು ತಿಳಿಸಿದರು.

ಸದ್ಯ ಮಾಧ್ಯಮಗಳಲ್ಲಿ ಬೇರೆ ಬೇರೆ ರೀತಿ ಬಿಂಬಿಸಲಾಗುತ್ತಿದೆ. ನಮಗೆ ಅಲ್ಲಿ ಯಾವುದೇ ತನಿಖೆ ಮಾಡಿಲ್ಲ, ನಮ್ಮಿಂದ ಕೆಲವೊಂದು ಅಭಿಪ್ರಾಯ ಪಡೆದಿದ್ದಾರೆ. ಕೆಲವೊಂದು ರಿಸ್ಕ್ ನಾವು ತೆಗೆದುಕೊಳ್ಳಬೇಕು. ಅವರು ನಮ್ಮನ್ನ ಯಾಕೆ ಕರೆದ್ರೋ ಗೊತ್ತಿಲ್ಲ, ಆದ್ರೂ ನಾವು ಹೋಗಿ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ ಎಂದರು.

ಎನ್​ಐಎ ನಮ್ಮನ್ನ ಕರೆಸಿದ್ದೇ ಆಶ್ಚರ್ಯವಾಗಿದೆ. ಯಾಕಂದ್ರೆ ಘಟನೆ ದಿನ ನಾವು ಅಲ್ಲಿಗೆ ಹೋಗಿರಲಿಲ್ಲ, ಹಿರಿಯ ಪೊಲೀಸ್ ಅಧಿಕಾರಿಗಳೇ ಕರೆದರು ಅದಕ್ಕೆ ಅಲ್ಲಿಗೆ ಹೋಗಿದ್ದು ಅಷ್ಟೇ. ಅವರು ಕರೆಯದೆ ಇದ್ದರೆ ನಾವೇಕೆ ಹೋಗುತ್ತಿದ್ದೆವು(?) ಇದರ ಬಗ್ಗೆ ಕೆಲವು ಅಭಿಪ್ರಾಯ ಎನ್​ಐಎ ಕೇಳಿದೆ ಅಷ್ಟೇ. ತನಿಖಾ ಸಂಸ್ಥೆಯಾಗಿರೋದರಿಂದ ನಾವು ಅಭಿಪ್ರಾಯ ತಿಳಿಸಿದ್ದೇವೆ ಎಂದಿದ್ದಾರೆ.

ಇನ್ನು ತನಿಖೆ ನಡೆಯುತ್ತಿದೆ, ಈಗಲೇ ಏನು ಹೇಳೋಕೆ ಆಗಲ್ಲ. ತನಿಖೆ ಎಲ್ಲಿಗೆ ಹೋಗುತ್ತೆ ನೊಡೋಣ. ಸರಿಯಾದ ತನಿಖೆ ನಡೆಯಬೇಕು. ನಿಜವಾದ ಅಪರಾಧಿಗಳು ಸಿಗಬೇಕು. ನಿರಪರಾಧಿಗಳಿಗೆ ಶಿಕ್ಷೆಯಾಗಬಾರದು ಇದಷ್ಟೇ ನಮ್ಮ ಉದ್ದೇಶ. ಯಾರಿಗೂ ವಿನಾಕಾರಣ ತೊಂದರೆಯಾಗಬಾರದು. ಪಕ್ಷಾತೀತವಾಗಿ ತನಿಖೆ ನಡೆಯಲಿ ಎಂದು ಹೇಳಿದರು.

ಸಂಪತ್​ರಾಜ್ ಹೆಸರು ನಮ್ಮ ಮುಂದೇನು ಹೇಳಲಿಲ್ಲ. ನಮ್ಮ ಶಾಸಕರ ಮನೆಯೇ ಧ್ವಂಸ ಆಗಿರೋದು. ಏನೋ ತನಿಖೆ ಮಾಡಿ ಇನ್ನೇನೋ ಮಾಡುವುದು ಬೇಡ. ಇಂತಹ ಘಟನೆಗಳು ನಡೆಯಬಾರದು ಎಂದು ಕಾಂಗ್ರೆಸ್​​ ಶಾಸಕ ರಿಜ್ವಾನ್​ ಅರ್ಷದ್​ ಸ್ಪಷ್ಟನೆ ನೀಡಿದರು.

Next Story

RELATED STORIES