Top

ಡಾ. ರಾಜ್​ಕುಮಾರ್ ಪ್ರತಿಮೆ ಬಗ್ಗೆ ನಾನು ಏನು ಹೇಳಿಲ್ಲ - ಶಾಸಕ ಎನ್​.ಎ ಹ್ಯಾರಿಸ್​ ಸ್ಪಷ್ಟನೆ

ಫೇಸ್​ಬುಕ್​ನಲ್ಲಿ ಅಲ್ಲಿ ಇಲ್ಲಿ ಕಟ್ ಮಾಡಿ ವಿಡಿಯೋ ಹಾಕಿರ್ತಾರೆ

ಡಾ. ರಾಜ್​ಕುಮಾರ್ ಪ್ರತಿಮೆ ಬಗ್ಗೆ ನಾನು ಏನು ಹೇಳಿಲ್ಲ - ಶಾಸಕ ಎನ್​.ಎ ಹ್ಯಾರಿಸ್​ ಸ್ಪಷ್ಟನೆ
X

ಬೆಂಗಳೂರು: 20ರಂದು ರಿಕೌಂಟಿಂಗ್ ಅಂತ ಹೇಳಿದ್ದಾರೆ. ಅಲ್ಲಿವರೆಗೆ ನಾವು ಏನೂ ಹೇಳೋಕೆ ಆಗಲ್ಲ ಎಂದು ಕಾಂಗ್ರೆಸ್​ ಶಾಸಕ ಎನ್​.ಎ ಹ್ಯಾರಿಸ್​ ಬುಧವಾರ ಹೇಳಿದರು.

ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣ್​ದೀಪ್ ಸಿಂಗ್​​ ​ಸುರ್ಜೇವಾಲಾ ಬಳಿ ನಲಪಾಡ್ ವಿಷಯ ಪ್ರಸ್ತಾಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಲ್ಲವೂ ಒಳ್ಳೆಯದಾಗುತ್ತೆ ಎಂಬ ವಿಶ್ವಾಸವಿದೆ. ನಾನು ಯೂತ್ ಕಾಂಗ್ರೆಸ್​ನಿಂದ ಬಂದವನು. ಪದಾಧಿಕಾರಿಯಾಗಿ ಈ ಮಟ್ಟಕ್ಕೆ ಬಂದಿದ್ದೇನೆ ಎಂದಿದ್ದಾರೆ.

ಪ್ರಜಾಪ್ರಭುತ್ವಕ್ಕೆ ಅನುಸಾರವಾಗಿ ನಡೆಯುತ್ತೆ. ಪಕ್ಷ ಏನು ಮಾಡುತ್ತೆ ನೊಡೋಣ. ಪ್ರಜಾಪ್ರಭುತ್ವಕ್ಕೆ ಧಕ್ಕೆ ಬರದಂತೆ ನೋಡಿಕೊಳ್ತಾರೆ ಎಂದು ಹ್ಯಾರಿಸ್​ ಅವರು ಪಕ್ಷದ ಮೇಲೆಯೇ ಬಾರ ಹಾಕಿದ್ದಾರೆ.​

ಡಾ. ರಾಜ್​ಕುಮಾರ್ ಪ್ರತಿಮೆ ಬಗ್ಗೆ ನಾನು ಏನು ಹೇಳಿಲ್ಲ

ಡಾ.ರಾಜ್ ಪ್ರತಿಮೆ ಬಗ್ಗೆ ಹೇಳಿಕೆ ವಿಚಾರದ ಪ್ರತಿಕ್ರಿಯೆ ನೀಡಿದ ಅವರು, ಇಲ್ಲಾ... ಇಲ್ಲಾ...ನಾನು ಏನೂ ಹೇಳಿಲ್ಲವಲ್ಲ. ಸಾರಿ..ಸಾರಿ ನಾನು ಏನೂ ಹೇಳಿಲ್ಲ. ರಾಜ್ ಕುಮಾರ್ ಬಗ್ಗೆ ಗೌರವದಿಂದ ಮಾತನಾಡಿದ್ದೇನೆ. ಪಾರ್ಕ್​ನಲ್ಲಿ ಆಫೀಸ್ ಮಾಡಿಕೊಳ್ಳೋಕೆ ಅವಕಾಶವಿಲ್ಲ. ಸ್ಟ್ಯಾಚ್ಯು ಇಟ್ಟು ಆಫೀಸ್ ಮಾಡೋಕೆ ಹೊರಟಿದ್ದಾರೆ. ಅದಕ್ಕೆ ಪಾರ್ಕ್​ನಲ್ಲಿ ಅವಕಾಶವಿಲ್ಲ ಅಂದಿದ್ದೇನೆ. ರಾಜ್ ಕುಮಾರ್ ಅವರ ಬಗ್ಗೆ ಅಭಿಮಾನವಿದೆ. ಫೇಸ್​ಬುಕ್​ನಲ್ಲಿ ಅಲ್ಲಿ ಇಲ್ಲಿ ಕಟ್ ಮಾಡಿ ವಿಡಿಯೋ ಹಾಕಿರ್ತಾರೆ ಎಂದು ಶಾಸಕ ಹ್ಯಾರಿಸ್​ ಅವರು ವೈರಲ್​ ವಿಡಿಯೋ ಸ್ಪಷ್ಟನೆ ನೀಡಿದ್ದಾರೆ.

Next Story

RELATED STORIES