Top

ಸಿಎಂ ಬಿಎಸ್​ವೈಗೆ ಎರಡು ವರ್ಷ ಅವಕಾಶ ಕೊಟ್ಟಿದ್ದೆ ಹೆಚ್ಚಾಯ್ತು

ನಮ್ಮ ಹೈಕಮಾಂಡ್ ಅಷ್ಟೇನು ವೀಕ್ ಆಗಿಲ್ಲ

ಸಿಎಂ ಬಿಎಸ್​ವೈಗೆ ಎರಡು ವರ್ಷ ಅವಕಾಶ ಕೊಟ್ಟಿದ್ದೆ ಹೆಚ್ಚಾಯ್ತು
X

ಬೆಂಗಳೂರು: ಯಾರ್ಯಾರ ನಾಯಕತ್ವ ಎಷ್ಟಿದೆ ಗೊತ್ತಾಗುತ್ತೆ. ನೀವು ಅವರನ್ನೇ ಕೇಳಬೇಕು. ಅವರು ರಾಜ್ಯಪಾಲರ ಭೇಟಿ ಮಾಡಿದರು. ಅದು ನನಗೇನೂ ಗೊತ್ತಿರಲಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬುಧವಾರ ಹೇಳಿದರು.

ಸಚಿವ ಕೆ.ಎಸ್​ ಈಶ್ವರಪ್ಪ ಮತ್ತೆ ಉಲ್ಟಾ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಏಪ್ರಿಲ್​ 17ರ ನಂತರ ಬಹಳ ಮಂದಿ ರೊಚ್ಚಿಗೇಳ್ತಾರೆ. ಸೂರ್ಯ ಚಂದ್ರ ಇರುವ ವರೆಗೆ ಹೇಗೆ ಮುಖ್ಯಮಂತ್ರಿ ಆಗೋಕೆ ಸಾಧ್ಯ(?) ಯಡಿಯೂರಪ್ಪನವರಿಗೆ 370 ಆ್ಯಕ್ಟ್ ಏನಾದ್ರೂ ಕೊಟ್ಟವರಾ(?) ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟಂತೆ ಎಂದರು.

ಸಿಎಂ ಬಿ.ಎಸ್​ ಯಡಿಯೂರಪ್ಪ ಅವರು ಎರಡು ವರ್ಷ ಅವಕಾಶ ಕೊಟ್ಟಿದ್ದಾರೆ. ಅದೇ ಅವರಿಗೆ ಹೆಚ್ಚಾಯ್ತು ಎಂದು ಸಿಎಂ ಬಿಎಸ್​ವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅದ್ಯಾವಾಗ ಯಡಿಯೂರಪ್ಪನವರ ವಕ್ತಾರರಾಗಿದ್ದಾರೆ. ಅವರು ನಮಗೆ ಸ್ವೀಪ್ ಆಗುತ್ತೆ ಅಂತ ಕನಸು ಕಾಣ್ತಿರಬಹುದು. ನಮ್ಮ ಹೈಕಮಾಂಡ್ ಅಷ್ಟೇನು ವೀಕ್ ಆಗಿಲ್ಲ, ಬಿಎಸ್​ವೈ ಅವರಿಗೆ ಸುಪ್ರೀಂ ಸ್ಟೇ ಕೊಟ್ಟಿದೆ. ಇದು ಬಹಳ ನಿರಾಳ ಅಂತ ಕೆಲವು ಮಾಧ್ಯಮಗಳು ಹಾಕ್ತಿವೆ ಎಂದು ಯತ್ನಾಳ್ ಅವರು ಮಾತನಾಡಿದ್ದಾರೆ.

Next Story

RELATED STORIES