Top

ಚಿತ್ರ ಮಂದಿರ ಅಂದ್ರೆ ಕ್ಲೋಸ್ಡ್, ಎಸಿ ಇರೋ ಜಾಗ, ಬಹಳ ಬೇಗನೆ ಸೋಂಕು ಹರಡಲಿದೆ

ಮತ್ತೊಮ್ಮೆ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ಮಾಡುತ್ತೇನೆ

ಚಿತ್ರ ಮಂದಿರ ಅಂದ್ರೆ ಕ್ಲೋಸ್ಡ್, ಎಸಿ ಇರೋ ಜಾಗ, ಬಹಳ ಬೇಗನೆ ಸೋಂಕು ಹರಡಲಿದೆ
X

ಬೆಂಗಳೂರು: ಕೇಂದ್ರ ಸರ್ಕಾರ ಚಿತ್ರ ಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಸೂಚಿಸಿದೆ ಬಳಿಕ ರಾಜ್ಯ ಕ್ರಮಕೈಗೊಳ್ಳಲು ಸೂಚಿಸಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರು ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ತಾಂತ್ರಿಕ ಸಲಹಾ ಸಮಿತಿ ಸಲಹೆ ಪ್ರಕಾರ ನಾವು ಎಸ್​ಪಿಓ ಬಿಡುಗಡೆ ಮಾಡಿದ್ದೇವೆ. ಫೆ.28 ವರೆಗೂ ಶೇ.50ರಷ್ಟು ತುಂಬಬಹುದು. ನೆರೆಯ ಕೇರಳದಲ್ಲಿ ಪ್ರತೀ ದಿನ 5 ಸಾವಿರ ಕೇಸ್ ದಾಖಲಾಗುತ್ತಿದೆ. ಮನರಂಜನೆಗಿಂತ ಮುಖ್ಯ ಜನರ ಆರೋಗ್ಯ ಎಂದಿದ್ದಾರೆ.

ಇನ್ನು ಮತ್ತೊಮ್ಮೆ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ಮಾಡುತ್ತೇನೆ. ಅವರ ಸಲಹೆ ಮೇರೆಗೆ ಅಂತಿಮ ನಿರ್ಧಾರ ಮಾಡುತ್ತೇನೆ. ಚಿತ್ರ ಮಂದಿರ ಅಂದ್ರೆ ಕ್ಲೋಸ್ಡ್, ಎಸಿ ಇರೋ ಜಾಗ. ಬಹಳ ಬೇಗನೆ ಸೋಂಕು ಹರಡಲಿದೆ. ರಾಜಕಾರಣದ ಸಭೆ ಸರಿ ಅಂತ ನಾವು ಹೇಳಿಲ್ಲ. ಆದರೆ, ಹೊರಗಡೆ ಮಾಡುತ್ತಿದ್ದಾರೆ. ಆದರೆ, ಅದೂ ಸರಿ ಅಂತ ಹೇಳಲ್ಲ. ನಿಯಂತ್ರಣ ಮಾಡೋದು ನಮ್ಮ ಸರ್ಕಾರದ ಜವಾಬ್ದಾರಿ. ನಾನು ಮಂತ್ರಿಯಾಗಿ ಏಕಾಏಕಿ ನಿರ್ಧಾರ ಸಾಧ್ಯವಾಗಲ್ಲ. ಸಿಎಂ ಮತ್ತು ತಾಂತ್ರಿಕ ಸಲಹಾ ಸಮಿತಿ ಸಭೆ ಸೇರಿ ಮುಂದೆ ನಿರ್ಧಾರ ಮಾಡುತ್ತೇವೆ ಎಂದು ಸಚಿವ ಡಾ.ಕೆ ಸುಧಾಕರ್ ಅವರು ಹೇಳಿದ್ದಾರೆ.

Next Story

RELATED STORIES