Top

ಮುಂಗಾರು ಅಧಿವೇಶನಕ್ಕೆ ಸಿಎಂ ಬಿ.ಎಸ್​ ಯಡಿಯೂರಪ್ಪ ಭರ್ಜರಿ ಸಿದ್ಧತೆ

  • ಸೆಪ್ಟೆಂಬರ್ 21 ರಿಂದ ಮುಂಗಾರು ಅಧಿವೇಶನ ಆರಂಭ.
  • ಮುಂಗಾರು ಅಧಿವೇಶನದಲ್ಲಿ ಮುಗಿಬೀಳಲು ಸಜ್ಜಾದ ವಿಪಕ್ಷಗಳು.
  • ವಿಪಕ್ಷಗಳ ಆರೋಪಗಳಿಗೆ ಉತ್ತರ ನೀಡೋಕೆ ಸಿಎಂ ಸಿದ್ಧತೆ.

ಮುಂಗಾರು ಅಧಿವೇಶನಕ್ಕೆ ಸಿಎಂ ಬಿ.ಎಸ್​ ಯಡಿಯೂರಪ್ಪ ಭರ್ಜರಿ ಸಿದ್ಧತೆ
X

ಬೆಂಗಳೂರು: ಸಿಎಂ ಬಿ.ಎಸ್​ ಯಡಿಯೂರಪ್ಪ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಸಾಧನೆಗಳಿಗಿಂತ ಸವಾಲುಗಲನ್ನು ಎದುರಿಸಿದ್ದೇ ಹೆಚ್ಚು. ವಿಪಕ್ಷಗಳ ಸಾಲು ಸಾಲು ಆರೋಪಗಳ ಮದ್ಯ ಆಡಳಿತ ನಡೆಸುತ್ತಿರುವ ಬಿಎಸ್​ವೈ ಅಧಿವೇಶನಕ್ಕೆ ಸಜ್ಜಾಗುತ್ತಿದ್ದಾರೆ. ಪ್ರವಾಹ ಪರಿಹಾರ, ಕೊರೊನಾ ಹಾವಳಿ ನಿಭಾಯಿಸುವಲ್ಲಿ ವೈಫಲ್ಯ ಸೇರಿದಂತೆ ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಸರ್ಕಾರದ ಮೇಲೆ ಮುಗಿಬೀಳಲು ಸಜ್ಜಾಗಿವೆ. ಹೀಗಾಗಿ ವಿರೋಧ ಪಕ್ಷಗಳಿಗೆ ಸರಿಯಾದ ಉತ್ತರ ನೀಡಲು ಸಿಎಂ ಈಗಾಗಲೇ ಪೂರ್ವಸಿದ್ಧತೆ ಆರಂಭಿಸಿದ್ದಾರೆ.

ಸೆಪ್ಟೆಂಬರ್ 21 ರಿಂದ ಮುಂಗಾರು ಅಧಿವೇಶನ ಆರಂಭ ಹಿನ್ನೆಲೆ, ವಿಪಕ್ಷಗಳ ಆರೋಪಗಳಿಗೆ ಸಮಗ್ರವಾಗಿ ಉತ್ತರಿಸಲು ಸಿದ್ದರಾಗುತ್ತಿದ್ದಾರೆ. ಸಿಎಂ ಯಡಿಯೂರಪ್ಪ. ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ. ಪರಿಹಾರದ ಹಣ ಸಂತ್ರಸ್ಥರ ಕೈಗೆ ಇನ್ನೂ ಸಿಕ್ಕಿಲ್ಲ. ಕೊರೊನಾ ನಿಭಾಯಿಸೋದರಲ್ಲೇ ಸಿಕ್ಕಾಪಟ್ಟೆ ದುಡ್ಡು ಮಾಡಿದ್ದಾರೆ ಎಂಬ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಈಗಾಗಲೇ ಆರೋಪ ಮಾಡಿದ್ದಾರೆ. ಅಧಿವೇಶನದಲ್ಲಿ ವಿಪಕ್ಷಗಳು ಸರ್ಕಾರದ ಮೇಲೆ ಇದೇ ವಿಚಾರಗಳನ್ನು ಮುಂದಿಟ್ಟುಕೊಂಡು ಮುಗಿಬೀಳಲು ಸಜ್ಜಾಗಿವೆ. ಹೀಗಾಗಿ ಎಚ್ಚೆತ್ತುಕೊಂಡಿರುವ ಸಿಎಂ ಯಡಿಯೂರಪ್ಪ, ವಿಪಕ್ಷಗಳ ಆರೋಪಕ್ಕೆ ಸಮರ್ಥವಾಗಿ ಉತ್ತರ ನೀಡಲು ಈಗಿನಿಂದಲೇ ಸಿದ್ದತೆ ನಡೆಸಿದ್ದಾರೆ.

ಸಂಪುಟ ಸಚಿವರಿಗೆ ಸೂಚನೆ ನೀಡಿರುವ ಸಿಎಂ ಬಿಎಸ್​ವೈ, ಸೆಪ್ಟೆಂಬರ್ 21ರಿಂದ ಅಧಿವೇಶನ ಆರಂಭ ವಾಗುತ್ತಿದೆ. ಅಧಿವೇಶನದಲ್ಲಿ ವಿಪಕ್ಷಗಳು ಸರ್ಕಾರದ ವಿರುದ್ಧ ಆರೋಪ ಮಾಡುವ ಸಾಧ್ಯತೆ ಇದೆ. ಹೀಗಾಗಿ ಸಮಗ್ರವಾಗಿ ಉತ್ತರಿ ಸಲು ಎಲ್ಲರೂ ಸಜ್ಜಾಗಬೇಕು. ಕೊರೊನಾ ತಡೆಗೆ ಕೈಗೊಂಡ ಕ್ರಮಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಉತ್ತರ ನೀಡಬೇಕು.

ಅಂಕಿ-ಅಂಶಗಳ ಮೂಲಕ ಉತ್ತರ ಕೊಡಲು ಸಜ್ಜಾಗಿ,ಪ್ರಗತಿ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಂಕಿ-ಅಂಶಗಳ ಮೂಲಕ ಉತ್ತರಿಸಲು ರೆಡಿಯಾಗಿ.

ಇಲಾಖಾವಾರು ಪ್ರಗತಿ ಪರಿಶೀಲನೆ ಸಭೆ ನಡೆಸಿ. ಜಿಲ್ಲೆಗಳಲ್ಲಿ ಕೆಡಿಪಿ ಸಭೆ ನಡೆಸಿ, ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನ ಹರಿಸಿ. ಪ್ರಮುಖವಾಗಿ ವೈದ್ಯಕೀಯ, ಆರೋಗ್ಯ, ಶಿಕ್ಷಣ ಹಾಗೂ ಬಿಬಿಎಂಪಿ ಯಿಂದ ಮಾಡಿರೋ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ಇಟ್ಟುಕೊಳ್ಳಿ ಎಂದು ಸೂಚನೆ ಕೊಟ್ಟಿದ್ದಾರೆ. ಇಂದು ನಡೆದ ಸಂಪುಟ ಸಭೆಯಲ್ಲಿ ಅಧಿವೇಶನದಲ್ಲಿ ವಿಪಕ್ಷಗಳಿಗೆ ಉತ್ತರ ನೀಡುವ ಬಗ್ಗೆ ಗಂಭೀರ ಚರ್ಚೆ ನಡೆಸಿರುವ ಸಿಎಂ, ಸಚಿವರಿಗೆ ಖಡಕ್ ಸೂಚನೆಗಳನ್ನು ನೀಡಿದ್ದಾರೆ.

ಸದ್ಯ ಆರೋಪಗಳ ಸುಳಿಯಲ್ಲಿ ಸಿಲುಕಿರುವ ಯಡಿಯೂರಪ್ಪ ಸರ್ಕಾರ ವಿಪಕ್ಷಗಳಿಗೆ ಸಮರ್ಥ ಉತ್ತರ ನೀಡಿ ಬಾಯಿ ಮುಚ್ಚಿಸೋ ಪ್ಲ್ಯಾನ್ ಮಾಡಿದೆ. ಸರ್ಕಾರವನ್ನು ಅದೆಷ್ಟರ ಮಟ್ಟಿಗೆ ವಿಪಕ್ಷಗಳು ಒಂಟಿಗಾಲಲ್ಲಿ ನಿಲ್ಲಿಸುತ್ತವೆಯೋ ಎಂಬುದು ಕಲಾಪದಲ್ಲಿ ಬಹಿರಂಗವಾಗಲಿದೆ.

Next Story

RELATED STORIES