Top

ಕೇಂದ್ರ ಬಜೆಟ್​ ಬಗ್ಗೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಪ್ರತಿಕ್ರಿಯೆ

ನಾಡಿನ ಜನರ ಪರವಾಗಿ ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರಧಾನಿ ಮೋದಿಯವರಿಗೆ ಅಭಿನಂದನೆ

ಕೇಂದ್ರ ಬಜೆಟ್​ ಬಗ್ಗೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಪ್ರತಿಕ್ರಿಯೆ
X

ಬೆಂಗಳೂರು: ಕೇಂದ್ರ ಬಜೆಟ್ ಆರ್ಥಿಕತೆ ಚೈತನ್ಯ ಒದಗಿಸುವ ಬಜೆಟ್ ಆಗಿದ್ದು, ಇದು ಮಧ್ಯಮ ಹಾಗೂ ಬಡ ವರ್ಗಗಳ ಪರವಾದ ಬಜೆಟ್ ಆಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಸೋಮವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಕೋವಿಡ್-19ನಿಂದಾಗಿ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ. ಕೃಷಿ ಕೈಗಾರಿಕೆ, ಮೂಲಸೌಕರ್ಯ ಬಲಗೊಳಿಸುವ ಬಜೆಟ್ ಆಗಿದೆ. ರೈತರ ಆದಾಯ ದ್ವಿಗುಣಗೊಳಿಸುವ ಬಜೆಟ್ ಆಗಿದೆ. 14778 ಕೋಟಿ ರೂ. ಬೆಂಗಳೂರು ಮೆಟ್ರೋಗೆ ಹಣ ಒವದಗಿಸಲಾಗಿದೆ. 2.23 ಲಕ್ಷ ಕೋಟಿ ರೂ. ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಲಾಗಿದೆ ಎಂದು ಕೇಂದ್ರದ ಬಜೆಟ್​ಅನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಕೇಂದ್ರದ ವಿತ್ತ ಸಚಿಗೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಬಸವಳಿದ ಆರ್ಥ ವ್ಯವಸ್ಥೆಗೆ ಸಂಜೀವಿನಿ ಆಗಿದೆ. ಸಂಕ್ರಾಮಿಕ ರೋಗದ ಸಂಕಷ್ಟದ ನಡುವೆ ಇದಕ್ಕಿಂತಲೂ ಉತ್ತಮ ಬಜೆಟ್ ಮಂಡನೆ ಅಸಾಧ್ಯ. ಲಸಿಕೆ ಅಭಿಯಾನಕ್ಕೆ 35,000 ಕೋಟಿ ರೂ. ಒದಗಿಸಿದ್ದಾರೆ ಎಂದು ಹೇಳಿದರು.

ಇನ್ನೂ ಹೆಚ್ಚಿನ ಹಣ ಬೇಕಾದರೆ ಲಸಿಕೆಗೆ ಒದಗಿಸೋದಾಗಿ ಹೇಳಿರೋದು ಸಂತೋಷದ ಸಂಗತಿ. ರೈತರ ಆದಾಯ ದ್ವಿಗುಣಗೊಳಿಸಲು ಈ ಬಜೆಟ್ ಭೂಮಿಕೆಯಾಗಿದೆ. ಬೆಂಗಳೂರು ಮೆಟ್ರೋಗೆ 14,778 ಕೋಟಿ ರೂ. ಒದಗಿಸಲಾಗಿದೆ. ಇದು ನಮ್ಮವರೇ ಆದ ಅರ್ಥ ಸಚಿವೆ ನೀಡಿರುವ ಕೊಡುಗೆ, ನಾಡಿನ ಜನರ ಪರವಾಗಿ ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸುವೆ ಎಂದು ಸಿಎಂ ಬಿಎಸ್​ವೈ ಹೇಳಿದರು.

Next Story

RELATED STORIES