Top

ಜನ ಸಂಘ ಇದ್ದಾಗ ಇವ್ನು ಇದ್ನಾ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

23ರಂದು ಬಸನಗೌಡ ತುರ್ವಿಹಾಳ ಕಾಂಗ್ರೆಸ್ ಸೇರ್ತಾರೆ ಅವರೇ ಮಸ್ಕಿಗೆ ಸಂಭಾವ್ಯ ಅಭ್ಯರ್ಥಿ.

ಜನ ಸಂಘ ಇದ್ದಾಗ ಇವ್ನು ಇದ್ನಾ - ಪ್ರತಿಪಕ್ಷ ನಾಯಕ  ಸಿದ್ದರಾಮಯ್ಯ
X

ಬೆಂಗಳೂರು: 23ರಂದು ಬಸನಗೌಡ ತುರ್ವಿಹಾಳ ಕಾಂಗ್ರೆಸ್ ಸೇರ್ತಾರೆ ಅವರೇ ಮಸ್ಕಿಗೆ ಸಂಭಾವ್ಯ ಅಭ್ಯರ್ಥಿ. ಹೀಗಾಗಿ 23 ರಂದು ಮಸ್ಕಿಯಲ್ಲಿ ಪಕ್ಷದ ಕಾರ್ಯಕರ್ತರ ಜೊತೆ ಸಭೆ ನಡೆಸುತ್ತೇವೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಅಂದು ಮಸ್ಕಿಯಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಬೈ ಎಲೆಕ್ಷನ್​ನಲ್ಲಿ ಆಡಳಿತ ಪಕ್ಷಕ್ಕೆ ಎರಡು ಲಾಭ. ಆಡಳಿತ ದುರುಪಯೋಗ ಮಾಡುತ್ತಾರೆ. ಯಾವ ಪಕ್ಷ ಅಧಿಕಾರದಲ್ಲಿರುತ್ತೆ ಅವರೇ ಗೆಲ್ಲೋದು. ನಾನು ಸಿಎಂ ಆಗಿದ್ದಾಗ ಹಾಗೇ ಆಗಿತ್ತು. ಒಂದು ಕ್ಷೇತ್ರ ಬಿಟ್ಟು ಉಳಿದಲ್ಲಾ ಗೆದ್ದಿದ್ದೆವು. ಶಿರಾದಲ್ಲಿ ನಾವು ಹಣದ ಕೊರತೆಯಿಂದ ಸೋತೆವು. ಬಿಜೆಪಿಯವರು ಸಿಕ್ಕಾಪಟ್ಟೆ ಹಣ ಹಂಚಿದ್ದರು ಎಂದರು.

ಇನ್ನು ಬಸವಕಲ್ಯಾಣಕ್ಕೆ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಕಾಂಗ್ರೆಸ್​ಗೆ ಅಭ್ಯರ್ಥಿ ಕೊರತೆಯಿಲ್ಲ. ಬೈ ಎಲೆಕ್ಷನ್ ಸಾರ್ವತ್ರಿಕ ಚುನಾವಣೆಗೆ ಅನ್ವಯವಾಗಲ್ಲ ಎಂದಿದ್ದಾರೆ.

ಗೋ ಹತ್ಯೆ ಮಸೂದೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಗೋ ಮಾಂಸ ಹೆಚ್ಚು ರಪ್ತು ಮಾಡ್ತಾರೆ. ಅದು ಯಾವ ಪಕ್ಷದವರು ಅಂತ ಮೊದಲು ಹೇಳಲಿ. ಆಮೇಲೆ ಗೋ ಹತ್ಯೆ ನಿಷೇಧ ಮಾಡಲಿ. ಇಲ್ಲಿ ಸಿ.ಟಿ ರವಿ ಬುರುಡೆ ಬಿಡುವುದು ಬೇಡ ಎಂದು ಸಿದ್ದರಾಮಯ್ಯ ಅವರು ಸಿ.ಟಿ ವಿರುದ್ಧ ಗರಂ ಆದರು.

ಸದ್ಯ ಆರ್​ಎಸ್​ಎಸ್ ಈಸ್ ಮೈ ಫಸ್ಟ್ ಪೊಲಿಟಿಕಲ್ ಅಪೋನೆಂಟ್. ಆರ್​ಆರ್​ಎಸ್​ ಬಗ್ಗೆ ನನಗೆ ಗೊತ್ತಿಲ್ಲ ಎನ್ನುವ ಸಿ.ಟಿ.ರವಿ, ಅವರು ಹೆಗ್ಡೆವಾರ್ ಜೊತೆ ಇದ್ನಾ(?) ಅವರು ಆರ್​ಆರ್​ಎಸ್​ನ ಫೌಂಡರ್, ಮೆಂಬರ್ರಾ(?) ಹೆಗ್ಡೆವಾರ್ ಕಾಂಗ್ರೆಸ್​ನಲ್ಲಿ ಇದ್ದವರು. ಗೋಲ್ವಾಲ್ಕರ್ ಆರ್​ಎಸ್​ಎಸ್​ ಎರಡನೇ ಸರಸಂಗಚಾಲಕರು. ಇವರು ಎಲ್ಲಿದ್ದರು, ಕಾಂಗ್ರೆಸ್​ನಲ್ಲಿ ತಾನೇ. ಜನ ಸಂಘ ಇದ್ದಾಗ ಸಿಟಿ ರವಿ ಎಲ್ಲಿದ್ದ(?) ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಸಿ.ಟಿ ರವಿಗೆ ತಿರುಗೇಟು ನೀಡಿದ್ದಾರೆ.

ಲವ್​ ಜಿಹಾದ್​ಗಾಗಿ ಮತಾಂತರ ನಿಷೇಧ ಕಾನೂನು ಜಾರಿ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅವರಿನ್ನೂ ಮನುಸ್ಮೃತಿಯಲ್ಲೇ ಇದ್ದಾರೆ. ಸಂವಿಧಾನದ ಬಗ್ಗೆ ಅವರಿಗೆ ಗೌರವ ಇಲ್ಲ. ನಾನು ಯಾರನ್ನ ಮದುವೆ ಆಗಬೇಕು ಅಂತ ಹೇಳಕ್ಕೆ ನೀವ್ಯಾರು(?) ಅವರು ಹೇಳಿರೋರನ್ನ ಮದುವೆ ಆಗೋಕೆ ಸಾಧ್ಯವೇ(?) ಮದುವೆ ಆಗೋದು ಅವರ ವೈಯುಕ್ತಿಕ ವಿಚಾರ. ಯಾರು ಯಾರ ಮೇಲೆ ಬಲವಂತ ಮಾಡೋಕೆ ಆಗಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು.

Next Story

RELATED STORIES