Top

ದೆಹಲಿಯಲ್ಲಿ ಜೋರಾದ ರೈತರ ಪ್ರತಿಭಟನೆ: ಕೆಂಪುಕೋಟೆ ಮೇಲೆ ರೈತರ ಧ್ವಜಾರೋಹಣ

ಅಪ್ಸರಾ ಬಾರ್ಡರ್ ಕಡೆಗೆ ರೈತರ ರ್ಯಾಲಿಗೆ ಅವಕಾಶ ನೀಡಿತ್ತು. ಆದರೆ, ರೈತರು ಚಿಂತಮಣಿ ಚೌಕ್ ಬಳಿ ಬ್ಯಾರಿಕೇಡ್ ಮುರಿದು ನುಗ್ಗಿದ್ದಾರೆ.

ದೆಹಲಿಯಲ್ಲಿ ಜೋರಾದ ರೈತರ ಪ್ರತಿಭಟನೆ: ಕೆಂಪುಕೋಟೆ ಮೇಲೆ ರೈತರ ಧ್ವಜಾರೋಹಣ
X

ನವದೆಹಲಿ: ರೈತರು ನಡೆಸುತ್ತಿದ್ದ ಟ್ರ್ಯಾಕ್ಟರ್ ರ್ಯಾಲಿಯೂ ಹಿಂಸಾಚಾರಕ್ಕೆ ತಿರುಗಿದ್ದು ಈ ಮಧ್ಯೆ ಐಟಿಒ ಬಳಿ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಲಾಠಿಚಾರ್ಜ್ ಸಂದರ್ಭದಲ್ಲಿ ಸಾಕಷ್ಟು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ನಿಗದಿತ ಮಾರ್ಗ ಬದಲಿಸಿ ರೈತರ ಟ್ರಾಕ್ಟರ್‌ಗಳು ಬೇರೆ ಕಡೆ ತೆರಳಲು ಮುಂದಾದಾಗ ಪೊಲೀಸರು ತಡೆದಿದ್ದಾರೆ. ಈ ವೇಳೆ ಘರ್ಷಣೆ ಸಂಭವಿಸಿದ್ದು, ಕೆಲ ರೈತರು ಮುಂಚೆಯೇ ನಿರ್ಧಾರವಾಗಿದ್ದ ಮಾರ್ಗದಲ್ಲಿ ತೆರಳಲು ನಿರಾಕರಿಸಿ ದೆಹಲಿಯ ಐಟಿಒ ಕಡೆಗೆ ತಲುಪಿದ್ದರು. ಪೊಲೀಸ್ ಕೇಂದ್ರ ಕಚೇರಿ ಬ್ಯಾರಿಕೇಡ್ ಹಾಕಿದ ಪೊಲೀಸರು, ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸುವ ಮೂಲಕ ತಿಲಕ್ ಬ್ರಿಡ್ಜ್ ಕಡೆಗೆ ತೆರಳದಂತೆ ತಡೆದರು.

ಸದ್ಯ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಐಟಿಒ ಸೇರಿದಂತೆ ಹಲವು ಮೆಟ್ರೋ ನಿಲ್ದಾಣಗಳನ್ನು ಸ್ಥಗಿತಗೊಳಿಸಲಾಗಿದ್ದು, ಲುಟೆನ್ಸ್, ಚಿಂತಮಣಿ ಚೌಕ್ ಸೇರಿ ಹಲವೆಡೆ ಹಿಂಸಾಚಾರದ ಬಗ್ಗೆ ವರದಿಯಾಗಿದೆ. ಈ ಮಧ್ಯೆ, ಕೆಂಪುಕೋಟೆ ಮೇಲೆ ರೈತರು ಧ್ವಜಾರೋಹಣ ಮಾಡಿದ್ದಾರೆ.

ಅಪ್ಸರಾ ಬಾರ್ಡರ್ ಕಡೆಗೆ ರೈತರ ರ್ಯಾಲಿಗೆ ತೆರಳಲು ಮಾರ್ಗ ನಿಗದಿ ಮಾಡಲಾಗಿತ್ತು. ಆದರೆ, ರೈತರು ಚಿಂತಮಣಿ ಚೌಕ್ ಬಳಿ ಬ್ಯಾರಿಕೇಡ್ ಮುರಿದು ನುಗ್ಗಿದ್ದರಿಂದ ಗುಂಪು ಚದುರಿಸಲು ಪೊಲೀಸರು ಲಾಠಚಾರ್ಜ್ ನಡೆಸಿದ್ದಾರೆ. ಆನಂತರ ಅಶ್ರುವಾಯು ಪ್ರಯೋಗ ಮಾಡಿದ್ದಾರೆ.

Next Story

RELATED STORIES