Top

ಉತ್ತರಖಂಡದ ಹಿಮನದಿ ಸ್ಪೋಟ: 15 ಮಂದಿ ರಕ್ಷಣೆ, 14 ಜನ ಮೃತದೇಹ ಪತ್ತೆ

ಹಿಮನದಿ ಸ್ಫೋಟದಿಂದ ಪ್ರವಾಹ ಉಂಟಾಗಿತ್ತು. 125 ಮಂದಿ ಕಣ್ಮರೆಯಾಗಿದ್ದರು.

ಉತ್ತರಖಂಡದ ಹಿಮನದಿ ಸ್ಪೋಟ: 15 ಮಂದಿ ರಕ್ಷಣೆ, 14 ಜನ ಮೃತದೇಹ ಪತ್ತೆ
X

ಡೆಹ್ರಾಡೂನ್‌: ಉತ್ತರಾಖಂಡದಲ್ಲಿ ನಿನ್ನೆ ಸಂಭವಿಸಿದ ಭೀಕರ ಹಿಮನದಿ ಸ್ಫೋಟದ ನಂತರ ಕಾಣೆಯಾದವರ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಸದ್ಯ ಈವರೆಗೂ 15 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, 14 ಮಂದಿಯ ಮೃತದೇಹ ಪತ್ತೆ ಆಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕರ್ಣ‍ಪ್ರಯಾಗ್ ಮಾರ್ಗದಿಂದ ಏಳು ಹಾಗೂ ತಪೋವನ ಪ್ರದೇಶದಿಂದ ಮೂರು ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ತಪೋವನದ ಸುರಂಗವೊಂದರಿಂದ ಹನ್ನೇರೆಡು ಮಂದಿಯನ್ನು ರಕ್ಷಿಸಲಾಗಿದೆ ಎಂದು ಉತ್ತರಾಖಂಡದ ಡಿಜಿಪಿ ಅಶೋಕ್ ಕುಮಾರ್ ಅವರು ಹೇಳಿದ್ದಾರೆ.

ಗಾಬರಿ ಆಗುವ ಅಗತ್ಯವಿಲ್ಲ. ಹಿಮನದಿ ಸ್ಫೋಟ ಭಾನುವಾರ ಸಂಭವಿಸಿದೆ. ರೈನಿ ವಿದ್ಯುತ್ ಯೋಜನೆ ಪ್ರದೇಶದಲ್ಲಿನ ಪ್ರವಾಹ, ಬಂಡೆಗಳು ಮತ್ತು ಭಗ್ನ ಅವಶೇಷಗಳು ತಪೋವನ ಪ್ರದೇಶದಲ್ಲಿ ಹಾನಿಗೆ ಕಾರಣವಾಗಿವೆ. ಎಲ್ಲವೂ ನಿನ್ನೆ ನಡೆದಿದೆ ಎಂದು ತಿಳಿಸಿದರು.

ಹಿಮನದಿ ಸ್ಫೋಟದಿಂದ ಪ್ರವಾಹ ಉಂಟಾಗಿತ್ತು. 125 ಮಂದಿ ಕಣ್ಮರೆಯಾಗಿದ್ದರು.


Next Story

RELATED STORIES