ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಶುಭ ಕೋರಿದ ರಾಹುಲ್ ಗಾಂಧಿ
ಭಾರತ ಮೂಲದ ಅಮೆರಿಕದ ಮೊದಲ ಉಪಾಧ್ಯಕ್ಷೆ ಆಗಿ ಪದಗ್ರಹಣ ಮಾಡಿರುವ ಕಮಲಾ ಹ್ಯಾರಿಸ್ ಅವರಿಗೂ ಶುಭಾಶಗಳನ್ನು ಕೋರಿದ್ದಾರೆ

X
Admin 221 Jan 2021 5:48 AM GMT
ನವದೆಹಲಿ: ವಿಶ್ವದ ದೊಡ್ಡಣ್ಣ ಅಮೆರಿಕ ದೇಶದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಜೋ ಬೈಡನ್ ಅವರಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಇಂದು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಅಮೆರಿಕ ಪ್ರಜಾಪ್ರಭುತ್ವದಲ್ಲಿ ಹೊಸ ಅಧ್ಯಾಯದ ಆರಂಭವಾಗಿದೆ ಎಂದು ಅವರು ತಿಳಿಸಿದರು.
ಅದುವಲ್ಲದೇ ಭಾರತ ಮೂಲದ ಅಮೆರಿಕದ ಮೊದಲ ಉಪಾಧ್ಯಕ್ಷೆ ಆಗಿ ಪದಗ್ರಹಣ ಮಾಡಿರುವ ಕಮಲಾ ಹ್ಯಾರಿಸ್ ಅವರಿಗೂ ಶುಭಾಶಗಳನ್ನು ಕೋರಿದ್ದಾರೆ.
Congratulating the USA on a new chapter of their democracy.
— Rahul Gandhi (@RahulGandhi) January 20, 2021
Best wishes to President Biden and Vice-President Harris.#InaugurationDay
ಅಮೆರಿಕದ ಉಪಾಧ್ಯಕ್ಷೆ ಸ್ಥಾನ ವಹಿಸುತ್ತಿರುವ ದಕ್ಷಿಣ ಏಷ್ಯಾದ ಮೊದಲ ಮಹಿಳಾ ಉಪಾಧ್ಯಕ್ಷೆ ಹಾಗೂ ಮೊದಲ ಕಪ್ಪುವರ್ಣೀಯ ಎಂಬ ಹಿರಿಮೆಗೂ ಕಮಲಾ ಹ್ಯಾರಿಸ್ ಪಾತ್ರವಾಗಿದ್ದಾರೆ.
Next Story