Top

ಫ್ರಾನ್ಸ್​​ನಿಂದ ಭಾರತಕ್ಕೆ ಮತ್ತೆ ಮೂರು ರಫೇಲ್​ ಯುದ್ಧವಿಮಾನ ಆಗಮನ: ವಾಯುಸೇನೆಗೆ ಆನೆ ಬಲ

ಫ್ರಾನ್ಸ್​ನಿಂದ 59 ಸಾವಿರ ಕೋಟಿ ರೂ. ವೆಚ್ಚದಲ್ಲಿ ಒಟ್ಟು 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲಾಗಿದೆ

ಫ್ರಾನ್ಸ್​​ನಿಂದ ಭಾರತಕ್ಕೆ ಮತ್ತೆ ಮೂರು ರಫೇಲ್​ ಯುದ್ಧವಿಮಾನ ಆಗಮನ: ವಾಯುಸೇನೆಗೆ ಆನೆ ಬಲ
X

ಚಿತ್ರ ಕೃಪೆ : ಭಾರತೀಯ ವಾಯುಸೇನೆ ಟ್ವಿಟ್​

ನವದೆಹಲಿ: ಫ್ರಾನ್ಸ್‌ನ ಡಾಸೊ ಏವಿಯೇಷನ್‌ ಕಂಪನಿ ನಿರ್ಮಿತ ಮೂರು ರಫೇಲ್‌ ಯುದ್ಧ ವಿಮಾನಗಳು ಬುಧವಾರ ಗುಜರಾತ್‌ನ ಜಾಮ್‌ನಗರ್ ವಾಯುನೆಲೆಗೆ ಬಂದು ಸೇರಿದ್ದು, ಫ್ರಾನ್ಸ್​ನಿಂದ ಹೊರಟು ಸುಮಾರು ಏಳು ಸಾವಿರ ಕಿ.ಮೀ ಕ್ರಮಿಸಿ ಮೂರನೇ ಹಂತದಲ್ಲಿ ಭಾರತಕ್ಕೆ ತಲುಪಿರುವ ಯುದ್ಧ ವಿಮಾನಗಳು ವಾಯುಪಡೆಯ ಬಲವನ್ನು ಮತ್ತಷ್ಟು ಹೆಚ್ಚಿಸಿವೆ.

ಈ ಸಂಬಂಧ ತಮ್ಮ ಅಧಿಕೃತ ಟ್ವಿಟ್​ ಮಾಡಿರುವ ಭಾರತೀಯ ವಾಯುಸೇನೆಯು, 'ಮೂರನೇ ಹಂತದ ಮೂರು ರಫೇಲ್‌ ಯುದ್ಧವಿಮಾನಗಳು ಐಎಎಫ್‌ ವಾಯುನೆಲೆಗೆ ಬಂದಿಳಿದಿವೆ. ಅವುಗಳು ತಡೆರಹಿತವಾಗಿ ಏಳು ಸಾವಿರ ಕಿ.ಮೀ ದೂರ ಕ್ರಮಿಸಿ ಇಲ್ಲಿಗೆ ತಲುಪಿವೆ. ಯುಎಇಯಲ್ಲಿ ಇರುವ ಫ್ರಾನ್ಸ್‌ನ ವಾಯುನೆಲೆಯಲ್ಲಿ ಇಂಧನ ತುಂಬಿಸಿಕೊಳ್ಳುವುದಕ್ಕಾಗಿ ಒಂದು ಸಲ ನಿಲುಗಡೆ ಮಾಡಲಾಗಿದೆ. ಯುಎಇ ವಾಯುಪಡೆ ಒದಗಿಸಿದ ಇಂಧನ ಬೆಂಬಲವನ್ನು ಭಾರತೀಯ ವಾಯುಪಡೆ ಪ್ರಶಂಸಿಸುತ್ತದೆ' ಎಂದು ತಿಳಿಸಿದೆ.

ಫ್ರಾನ್ಸ್‌ನ ಡಾಸೊ ಏವಿಯೇಷನ್‌ ಕಂಪನಿ ನಿರ್ಮಿತ ರಫೇಲ್‌ ಯುದ್ಧವಿಮಾನಗಳನ್ನು ಕಳೆದ ವರ್ಷ ಸೆಪ್ಟೆಂಬರ್​​ 10ರಂದು ಭಾರತ ವಾಯುಪಡೆಗೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಎರಡನೇ ಹಂತದ ರಫೇಲ್‌ ಯುದ್ಧ ವಿಮಾನಗಳ ಸಹ ಕಳೆದ ವರ್ಷ ನವೆಂಬರ್‌ನಲ್ಲಿ ಬಂದು ತಲುಪಿದ್ದವು.

'ಭಾರತವು ಫ್ರಾನ್ಸ್​ನಿಂದ 59 ಸಾವಿರ ಕೋಟಿ ರೂ. ವೆಚ್ಚದಲ್ಲಿ ಒಟ್ಟು 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲಾಗಿದೆ. 2023ರ ಒಳಗೆ ಎಲ್ಲಾ 36 ರಫೇಲ್ ಯುದ್ಧ ವಿಮಾನಗಳು ಭಾರತದಲ್ಲಿರಲಿವೆ' ಎಂದು ಏರ್‌ ಚೀಫ್ ಮಾರ್ಷಲ್ ಆರ್.ಕೆ.ಎಸ್. ಭದೌರಿಯಾ ತಿಳಿಸಿದ್ದಾರೆ.

Next Story

RELATED STORIES