ನಮ್ಮ ದೇಶದ ಫೆಡರಲ್ ವ್ಯವಸ್ಥೆ ಖಂಡಿಸಲು ಅವರ್ಯಾರು
ಸಿದ್ಧರಾಮಯ್ಯ ಕೂಡ ಇದನ್ನ ಖಂಡಿಸಬೇಕು. ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು

ಬೆಂಗಳೂರು: ನಮ್ಮ ದೇಶದಲ್ಲಿ ನಡೆಯುತ್ತಿರೋ ರೈತರ ಹೋರಾಟ ಇದು. ಅವರಿಗೆ ಪ್ರಶ್ನೆ ಕೇಳುತ್ತೇನೆ. ಗಣರಾಜ್ಯೋತ್ಸವ ದಿನ ಕೆಂಪು ಕೋಟೆ ಮೇಲೆ ರಾಷ್ಟ್ರ ಧ್ವಜ ಕಿತ್ತೊಗೆಯಲಾಗಿದೆ. ಬೇರೆಯ ಧ್ವಜವನ್ನ ಹಾರಿಸಲಾಗಿದೆ. ನಮ್ಮ ದೇಶದ ಆಸ್ತಿ ನಷ್ಟ ಮಾಡಲಾಗಿದೆ. ವಿದೇಶಿ ಪಾಪ್ ಗಾಯಕಿ ರಿಹಾನ್ನಾ ಹೇಳಿಕೆ ಸರಿಯಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಪರಿಷತ್ ಸದಸ್ಯ ಎನ್ ರವಿಕುಮಾರ್ ಅವರು ಹೇಳಿದ್ದಾರೆ.
ದೆಹಲಿ ರೈತರ ಹೋರಾಟ ವಿಚಾರದಲ್ಲಿ ಪಾಪ್ ಗಾಯಕಿ ರಿಹಾನ್ನಾ ಹಸ್ತಕ್ಷೇಪ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಇವರೆಲ್ಲ ದೇಶದ್ರೋಹ ಮಾಡುತ್ತಿದ್ದಾರೆ. ನಮ್ಮ ದೇಶದ ನಟ, ನಟಿಯರು, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸೇರಿದಂತೆ ಎಲ್ಲರೂ ಖಂಡಿಸಿದ್ದಾರೆ ಎಂದರು.
ನಮ್ಮ ದೇಶದ ಫೆಡರಲ್ ವ್ಯವಸ್ಥೆ ಖಂಡಿಸಲು ಅವರ್ಯಾರು(?) ನಮ್ಮ ದೇಶದ ಬಗ್ಗೆ ಮೂಗು ತೂರಿಸಲು ಅವರಿಗೆ ಯಾವುದೇ ಹಕ್ಕಿಲ್ಲ. ನಮ್ಮ ದೇಶದ ವಿಪಕ್ಷ ನಾಯಕರಾದ ರಾಹುಲ್ ಗಾಂಧಿಯನ್ನ ಮೊದಲು ಖಂಡಿಸಬೇಕು. ಮುಖವಾಡ ಹಾಕಿಕೊಂಡಿರೋ ರೈತ ನಾಯಕರನ್ನ ಖಂಡಿಸುತ್ತೇನೆ. ಸಿದ್ಧರಾಮಯ್ಯ ಕೂಡ ಇದನ್ನ ಖಂಡಿಸಬೇಕು. ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಅವರು ಒತ್ತಾಯ ಮಾಡಿದ್ದಾರೆ.