Top

ಶಿವಮೊಗ್ಗ ಸ್ಟೋಟ ಪ್ರಕರಣ: ತನಿಖೆಗಾಗಿ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಒತ್ತಾಯ

ಸ್ಫೋಟದ ತೀವ್ರತೆಯ ಪರಿಣಾಮ ಶಿವಮೊಗ್ಗ ಜಿಲ್ಲೆಯಲ್ಲಿ ಅಲ್ಲದೇ, ಅಕ್ಕ-ಪಕ್ಕದ ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳ ಹಳ್ಳಿಗಳಲ್ಲೂ ಕಾಣಿಸಿಕೊಂಡಿತ್ತು

ಶಿವಮೊಗ್ಗ ಸ್ಟೋಟ ಪ್ರಕರಣ: ತನಿಖೆಗಾಗಿ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಒತ್ತಾಯ
X

ನವದೆಹಲಿ: ಶಿವಮೊಗ್ಗದ ಕಲ್ಲು ಗಣಿಕಾರಿಕೆ ಸ್ಥಳದಲ್ಲಿ ಸಂಭವಿಸಿರುವ ಸ್ಫೋಟ ಬಹುದೊಡ್ಡ ದುರಂತವಾಗಿದೆ. ಈ ಪ್ರಕರಣವನ್ನು ಆಳವಾದ ತನಿಖೆಗಾಗಿ ಒಳಪಡಿಸಬೇಕು. ಇದರೊಂದಿಗೆ ಬರುವ ದಿನಗಳಲ್ಲಿ ಇಂತಹ ದುರ್ಘಟನೆಗಳು ನಡೆಯದಂತೆ ತಪ್ಪಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರು ಒತ್ತಾಯಿಸಿದ್ದಾರೆ.

ಈ ಸಂಬಂಧ ತಮ್ಮ ಅಧಿಕೃತ ಟ್ವಿಟರ್​ ಖಾತೆ ಬರೆದುಕೊಂಡಿರುವ ಅವರು, ಘಟನೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸಿ, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದು, ಇಂತಹ ಘಟನೆಗಳು ಬಗ್ಗೆ ಆಳವಾದ ತನಿಖೆ ನಡೆಯಬೇಕು. ಇದರಿಂದ ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಪುನರಾವರ್ತನೆ ಆಗುವುದನ್ನು ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ನಿನ್ನೆ (ಜ.21, ಗುರುವಾರ) ರಾತ್ರಿ 10.30ರ ಸುಮಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಜಲ್ಲಿ ಕ್ರಷರ್‌ ಬಳಿ ಸಂಗ್ರಹಿಸಿಟ್ಟಿದ್ದ ಒಂದು ಟ್ರಕ್‌ ಲೋಡ್‌ನಷ್ಟು ಸ್ಫೋಟಕ ಸಾಮಗ್ರಿಗಳು ಸ್ಫೋಟಗೊಂಡು ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸ್ಫೋಟದ ತೀವ್ರತೆ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೇ, ಅಕ್ಕ-ಪಕ್ಕದ ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳ ಹಳ್ಳಿಗಳಲ್ಲೂ ಕಾಣಿಸಿಕೊಂಡಿತ್ತು.

Next Story

RELATED STORIES