ರಾಜಸ್ಥಾನ: ಆಯುಷ್ ನೀತಿ 2020ಕ್ಕೆ ಅನುಮೋದನೆ
ಆಯುಷ್ನೀತಿ 2020ಕ್ಕೆ ಅಂಗೀಕಾರ
X
Admin 210 Feb 2021 9:44 AM GMT
ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ಗೆಹ್ಲೋಟ್ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಚಿವ ಸಂಪುಟ ಸಭೆ ನಡೆದಿದೆ. ಈ ವೇಳೆ ಆಯುಷ್ ನೀತಿ 2020ಕ್ಕೆ ಅಂಗೀಕಾರ ಮಾಡಲಾಗಿದ್ದು ನೀಡಿದ್ದು, ಈ ಮೂಲಕ ಆಯುರ್ವೇದ, ಯುನಾನಿ, ಹೋಮಿಯೋಪತಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಉತ್ತೇಜನ ನೀಡಲು ಮುಂದಾಗಿದೆ.
ರಾಜ್ಯ ಆಯುಷ್ ನೀತಿ ಅಡಿಯಲ್ಲಿ ಆಯುಷ್ ಚಿಕಿತ್ಸಾ ವಿಧಾನಗಳ ಮೂಲಕ ವಿವಿಧ ಕಾಯಿಲೆಗಳ ಚಿಕಿತ್ಸೆಗಾಗಿ ಗುಣಾತ್ಮಕ ಸೇವೆಗಳನ್ನು ಉತ್ತೇಜಿಸಲಾಗುವುದು. ಆಯುಷ್ ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಮತ್ತು ಉತ್ತಮ ಗುಣಮಟ್ಟದ ಆಯುಷ್ ಔಷಧಿಗಳನ್ನು ತಯಾರಿಸಲು ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದು ಅಶೋಕ್ಗೆಹ್ಲೋಟ್ಅವರ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯ ರಸ್ತೆ ಮಾರ್ಗದ ಬಸ್ಗಳಲ್ಲಿ ಟಿಕೆಟ್ ರಹಿತ ಪ್ರಯಾಣಕ್ಕೆ ಹೆಚ್ಚುವರಿ ದಂಡ ವಿಧಿಸಲು ಸಂಪುಟ ತೀರ್ಮಾನ ಮಾಡಿದೆ.
Next Story