Top

ವಿಶ್ವಾಸ ಮತಯಾಚಿಸಲು ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ನಿರ್ಧಾರ

ಆಡಳಿತಾರೂಢ ಪಕ್ಷದ ಉಪಾಧ್ಯಕ್ಷ ಶಾಹ್‌ ಮಹಮೂದ್‌ ಖುರೇಶಿ, ವಿಶ್ವಾಸ ಮತಯಾಚಿಸಲು ಪ್ರಧಾನಿ ನಿರ್ಧಾರಿಸಿದ್ದಾರೆ ಎಂದು ತಿಳಿಸಿದ್ದಾರೆ.

ವಿಶ್ವಾಸ ಮತಯಾಚಿಸಲು ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ನಿರ್ಧಾರ
X

ಪಾಕಿಸ್ತಾನ ಪ್ರಧಾನಿ ಮಂತ್ರಿ ಇಮ್ರಾನ್​ ಖಾನ್ (ಪೋಟೋ ಕೃಪೆ-ಎಎಫ್​ಪಿ) 

ಪಾಕಿಸ್ತಾನ: ಸಂಸತ್​ ಚುನಾವಣೆಯಲ್ಲಿ ಹಣಕಾಸು ಸಚಿವ ಸೋಲು ಕಂಡಿರುವ ಹಿನ್ನೆಲೆ ಪಾಕ್​ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಸಂಸತ್ತಿನಲ್ಲಿ ವಿಶ್ವಾಸ ಮತಯಾಚಿಸಲು ನಿರ್ಧರಿಸಿದ್ದಾರೆ.

ಚುನಾವಣೆಯಲ್ಲಿ ಮಾಜಿ ಪ್ರಧಾನಿ ಯುಸೂಫ್‌ ರಾಜಾ ಗಿಲಾನಿ ವಿರುದ್ಧ ಇಮ್ರಾನ್‌ ಖಾನ್‌ ಅವರ ಆಪ್ತ ಮತ್ತು ಹಣಕಾಸು ಸಚಿವ ಅಬ್ದುಲ್‌ ಹಫೀಜ್‌ ಶೇಖ್ ಬುಧವಾರ ಸೋಲುಂಡಿದ್ದಾರೆ. ಪಾಕಿಸ್ತಾನ್ ತೆಹ್ರೀಕ್‌-ಇ-ಇನ್ಸಾಫ್‌ ಅಧ್ಯಕ್ಷರೂ ಆಗಿರುವ ಇಮ್ರಾನ್‌ ಖಾನ್‌ ಸ್ವತಃ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದರು.

ಪಾಕಿಸ್ತಾನ್ ಪೀಪಲ್ಸ್‌ ಪಾರ್ಟಿಯ ಹಿರಿಯ ಮುಖಂಡ ಗಿಲಾನಿ, ವಿರೋಧ ಪಕ್ಷಗಳ ಮೈತ್ರಿಯಾಗಿರುವ ಪಾಕಿಸ್ತಾನ್‌ ಡೆಮಾಕ್ರಟಿಕ್‌ ಮೂವ್ಮೆಂಟ್‌ನ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದರು.

ಗಿಲಾನಿ ಗೆಲುವು ಕಾಣುತ್ತಿದ್ದಂತೆ ಇಮ್ರಾನ್‌ ಖಾನ್‌ಗೆ ವಿರೋಧ ಪಕ್ಷದ ಮುಖಂಡರಿಂದ ಟೀಕೆ ವ್ಯಕ್ತವಾಗಿದೆ ಜೊತೆಗೆ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸುವಂತೆ ಒತ್ತಾಯಿಸಿದ್ದಾರೆ.

ಫಲಿತಾಂಶ ಘೋಷಣೆಯಾಗಿದ ಕೆಲವು ಗಂಟೆಗಳ ಬಳಿಕ ಮಾತನಾಡಿದ ವಿದೇಶಾಂಗ ಸಚಿವ ಹಾಗೂ ಆಡಳಿತಾರೂಢ ಪಕ್ಷದ ಉಪಾಧ್ಯಕ್ಷ ಶಾಹ್‌ ಮಹಮೂದ್‌ ಖುರೇಶಿ ಅವರು, ವಿಶ್ವಾಸ ಮತಯಾಚಿಸಲು ಪ್ರಧಾನಿ ನಿರ್ಧಾರಿಸಿದ್ದಾರೆ ಎಂದು ಪ್ರಕರಣೆಯಲ್ಲಿ ತಿಳಿಸಿದ್ದಾರೆ.

Next Story

RELATED STORIES