Top

ಪಾಕ್​ ಅಪ್ರಚೋದಿತ ದಾಳಿ: ಯೋಧರೊಬ್ಬರು ಹುತಾತ್ಮ

ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆ ಹಿನ್ನೆಲೆ ಈ ವರ್ಷ ಒಟ್ಟು ನಾಲ್ವರು ಸೈನಿಕರು ಮೃತಪಟ್ಟಿದ್ದಾರೆ

ಪಾಕ್​ ಅಪ್ರಚೋದಿತ ದಾಳಿ: ಯೋಧರೊಬ್ಬರು ಹುತಾತ್ಮ
X

ಜಮ್ಮು ಮತ್ತು ಕಾಶ್ಮೀರ: ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಪಕ್ಕ ಪಾಕಿಸ್ತಾನ ಸೇನೆಯು ನಿನ್ನೆ (ಬುಧವಾರ) ನಡೆಸಿದ ಗುಂಡಿನ ದಾಳಿಗೆ ಯೋಧರೊಬ್ಬರು ಹುತಾತ್ಮರಾಗಿದ್ದಾರೆ ಎಂದು ರಕ್ಷಣಾ ವಕ್ತಾರ ಮಾಹಿತಿ ನೀಡಿದ್ದಾರೆ.

ರಾಜಸ್ಥಾನದ ಜೋಧ್‌ಪುರ ಮೂಲದ ನಿವಾಸಿ ಸಿಪಾಯಿ ಲಕ್ಷ್ಮಣ್‌ ಅವರು ಹುತಾತ್ಮರಾಗಿದ್ದು, ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆ ಹಿನ್ನೆಲೆ ಈ ವರ್ಷ ಒಟ್ಟು ನಾಲ್ವರು ಸೈನಿಕರು ಮೃತಪಟ್ಟಿದ್ದಾರೆ.

ಸುಂದರ್‌ಬನಿಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆಯು ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘಿಸಿದೆ. ಇದಕ್ಕೆ ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡಿದೆ. ಈ ಘಟನೆಯಲ್ಲಿ ಲಕ್ಷ್ಮಣ್‌ ಗಂಭೀರವಾಗಿ ಗಾಯಗೊಂಡಿದ್ದರು. ಸಿಪಾಯಿ ಲಕ್ಷ್ಮಣ್‌ ಅವರು ಬಲಶಾಲಿ ಹಾಗೂ ಪ್ರಾಮಾಣಿಕ ಯೋಧರಾಗಿದ್ದರು. ಅವರ ತ್ಯಾಗಕ್ಕೆ ದೇಶ ಸದಾ ಋಣಿಯಾಗಿರುತ್ತೆ ಎಂದು ಎಂದು ರಕ್ಷಣಾ ವಕ್ತಾರರು ಹೇಳಿದ್ದಾರೆ.

Next Story

RELATED STORIES