ಜನ ಪ್ರೀತಿ ಮಾಡುವವರೆಗೆ ನಾಯಕತ್ವ ಇರುತ್ತೆ - ಮಾಜಿ ಸಿಎಂ ಸಿದ್ದರಾಮಯ್ಯ
ಜನ ಪ್ರೀತಿ ಮಾಡುವವರೆಗೆ ನಾಯಕತ್ವ ಇರುತ್ತೆ. ಅಲ್ಲಿಯವರೆಗೆ ನಾಯಕತ್ವ ಯಾರು ಏನು ಮಾಡೋಕೆ ಆಗಲ್ಲ, ಪ್ರೀತಿ ವಿಶ್ವಾಸದ ಮೇಲೆ ನಾಯಕತ್ವ ಇರುತ್ತೆ.

ನವದೆಹಲಿ: ಒಂದು ವರ್ಷದಿಂದ ದೆಹಲಿಗೆ ಬಂದಿರಲಿಲ್ಲ, ಕಳೆದ ವಾರ ರಾಹುಲ್ಗಾಂಧಿ ಅವರಿಗೆ ಕರೆ ಮಾಡಿದ್ದೆ. ಭೇಟಿಗೆ ಸಮಯ ಕೇಳಿದ್ದೆ ಇಂದು ಸಮಯ ಕೊಟ್ಟಿದ್ದಾರೆ. ಹೀಗಾಗಿ ಬಂದು ಭೇಟಿ ಮಾಡುತ್ತಿದ್ದೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.
ದೆಹಲಿ ಮಾಧ್ಯಮದವರೊಟ್ಟಿಗೆ ಮಾತನಾಡಿದ ಅವರು, ಕುಲಶಾಸ್ತ್ರ ಅಧ್ಯಯನ ಪೂರ್ಣ ಆಗಿಲ್ಲ, ಕುರುಬರು ಮೀಸಲಾತಿ ಕೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಅದನ್ನ ಕೊಡಬೇಕು. ಈಶ್ವರಪ್ಪ ಇಲ್ಲಿ ಕೇಳಬೇಕು ಅದನ್ನು ಬಿಟ್ಟು ಅಲ್ಲಿ ಜನರನ್ನು ಎತ್ತಿ ಕಟ್ಟುತ್ತಿದ್ದಾರೆ. ಈಗ ಚಳುವಳಿ ಅಗತ್ಯ ಇರಲಿಲ್ಲ ಎಂದು ಸಿದ್ದರಾಮಯ್ಯ ಅವರು ಈಶ್ವರಪ್ಪಗೆ ಟಾಂಗ್ ಕೊಟ್ಟಿದ್ದಾರೆ.
ಇನ್ನು ಕುಲಶಾಸ್ತ್ರ ಅಧ್ಯಯನದ ವರದಿ ಬರಬೇಕು. ವರದಿ ಸಿಗದೆ ಏನು ಮಾಡಲು ಸಾಧ್ಯವಿಲ್ಲ, ಈಶ್ವರಪ್ಪ ಹಿರಿಯ ಸಚಿವರಾಗಿದ್ದಾರೆ. ಸರ್ಕಾರ ಈಶ್ವರಪ್ಪನ ಮಾತು ಕೇಳಲ್ವಾ(?) ಯಾರ ಮೇಲೆ ಒತ್ತಡ ಹಾಕಲು ಪ್ರತಿಭಟನೆ ಮಾಡುತ್ತಿದ್ದಾರೆ(?) ಈಗ ಪಾದಯಾತ್ರೆ ಅಗತ್ಯ ಇರಲಿಲ್ಲ ಎಂದರು.
ಜನ ಪ್ರೀತಿ ಮಾಡುವವರೆಗೆ ನಾಯಕತ್ವ ಇರುತ್ತೆ. ಅಲ್ಲಿಯವರೆಗೆ ನಾಯಕತ್ವ ಯಾರು ಏನು ಮಾಡೋಕೆ ಆಗಲ್ಲ, ಪ್ರೀತಿ ವಿಶ್ವಾಸದ ಮೇಲೆ ನಾಯಕತ್ವ ಇರುತ್ತೆ. ಎಸ್ಟಿಗೆ ಸೇರಿಸಬೇಕಾಗಿರೋದು ಕೇಂದ್ರ ಸರ್ಕಾರ. ಸಂವಿಧಾನ ತಿದ್ದುಪಡಿ ಮಾಡಬೇಕು. ಈಶ್ವರಪ್ಪ ಈ ಕೆಲಸ ಮಾಡಬೇಕು. ಚಳುವಳಿ ಯಾಕೆ ಮಾಡುತ್ತಿದ್ದಾರೆ. ಅವರದೇ ಸರ್ಕಾರದ ಇದೆಯಲ್ಲ, ರಾಜ್ಯ ಸರ್ಕಾರ ಶಿಫಾರಸು ಮಾಡಲಿ. ನಾನು ಎಸ್ಟಿಗೆ ಸೇರಸಬೇಡಿ ಅಂತಾ ಹೇಳಿಲ್ಲ, ಇದೊಂದು ಭಾವನಾತ್ಮಕ ವಿಚಾರ. ಹೀಗಾಗಿ ಜನರು ಭಾಗಿಯಾಗುತ್ತಿದ್ದಾರೆ ಆದರೆ ಈಗ ಚಳುವಳಿ ಅಗತ್ಯ ಇರಲಿಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.