Top

ಕಾಂಗ್ರೆಸ್​​ ತೊರೆದ ನಟಿ, ರಾಜಕಾರಣಿ ಖುಷ್ಬೂ; ಬಿಜೆಪಿಯತ್ತ ಒಲವು

ಖುಷ್ಬೂ ಸುಂದರ್‌ ಅವರನ್ನು ಎಐಸಿಸಿ ವಕ್ತಾರ ಸ್ಥಾನದಿಂದ ಕೈಬಿಡಲಾಗಿದ್ದು, ಈ ಆದೇಶವು ತಕ್ಷಣದಿಂದಲೇ ಅನ್ವಯ ಆಗಲಿದೆ ಎಂದು ಕಾಂಗ್ರೆಸ್​​ ಹೇಳಿದೆ.

ಕಾಂಗ್ರೆಸ್​​ ತೊರೆದ ನಟಿ, ರಾಜಕಾರಣಿ ಖುಷ್ಬೂ; ಬಿಜೆಪಿಯತ್ತ ಒಲವು
X

ನವದೆಹಲಿ: ನಟಿ, ರಾಜಕಾರಣಿ ಖುಷ್ಬೂ ಸುಂದರ್‌ ಅವರನ್ನು ಎಐಸಿಸಿ ವಕ್ತಾರ ಸ್ಥಾನದಿಂದ ಕೈಬಿಡಲಾಗಿದ್ದು, ಈ ಆದೇಶವು ತಕ್ಷಣದಿಂದಲೇ ಅನ್ವಯ ಆಗಲಿದೆ ಎಂದು ಕಾಂಗ್ರೆಸ್‌ ಹೇಳಿದೆ.

ಖುಷ್ಬೂ ಅವರು ಬಿಜೆಪಿಗೆ ಸೇರುವ ಸಾಧ್ಯತೆಗಳ ಬಗ್ಗೆ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಕಾಂಗ್ರೆಸ್‌ನ ಎಲ್ಲ ಸ್ಥಾನಗಳಿಗೆ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಭಾನುವಾರ ಸಂಜೆ ಖುಷ್ಬೂ ತಮಿಳುನಾಡಿನಿಂದ ದೆಹಲಿ ಸೇರಿದ್ದಾರೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಖುಷ್ಬೂ ಅವರು, ಪಕ್ಷದಲ್ಲಿ ವಾಸ್ತವದ ಸಂಪರ್ಕ ಇಲ್ಲದವರು ಅಥವಾ ಸಾರ್ವಜನಿಕವಾಗಿ ಗುರುತಿಸಿಕೊಳ್ಳದ ವ್ಯಕ್ತಿಗಳು ನಿಯಂತ್ರಣ ಹೇರುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದರೊಂದಿಗೆ ಖುಷ್ಬೂ ಅವರು ಆರು ವರ್ಷಗಳ ಕಾಂಗ್ರೆಸ್ ಜೊತೆಗಿನ ನಂಟು ಮುರಿದುಕೊಂಡಿದ್ದಾರೆ.

2019ರ ಲೋಕಸಭಾ ಚುನಾವಣೆಯ ಡಿಎಂಕೆ ಕಾಂಗ್ರೆಸ್‌ ಮೈತ್ರಿಯಲ್ಲಿ ಖುಷ್ಬೂ ಅವರಿಗೆ ಟಿಕೆಟ್‌ ಸಿಗಲಿಲ್ಲ, ಅಲ್ಲದೇ ರಾಜ್ಯಸಭೆಗೂ ಆಯ್ಕೆ ಮಾಡಲಿಲ್ಲ.

Next Story

RELATED STORIES