Top

ಮಧ್ಯಪ್ರದೇಶದ ಖಾಂಡವಾ ಬಿಜೆಪಿ ಸಂಸದ ನಂದಕುಮಾರ್ ಸಿಂಗ್​ ಚೌಹಾಣ್​ ವಿಧಿವಶ

ನಂದಕುಮಾರ್ ಅವರ ಹೆಂಡತಿ, ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಮಧ್ಯಪ್ರದೇಶದ ಖಾಂಡವಾ ಬಿಜೆಪಿ ಸಂಸದ ನಂದಕುಮಾರ್ ಸಿಂಗ್​ ಚೌಹಾಣ್​ ವಿಧಿವಶ
X

ನವದೆಹಲಿ: ಬಿಜೆಪಿ ಲೋಕಸಭಾ ಸದಸ್ಯ ನಂದಕುಮಾರ್‌ ಸಿಂಗ್‌ ಚೌಹಾಣ್‌(68) ಸೋಮವಾರ ರಾತ್ರಿ ವಿಧಿವಶರಾದರು. ಕೋವಿಡ್​ 19 ವೈರಸ್‌ ಸೋಂಕಿಗೆ ತಗುಲಿದ್ದ ಅವರಿಗೆ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ನಂದಕುಮಾರ್ ಅವರು‌ ಮಧ್ಯ ಪ್ರದೇಶದ ಖಾಂಡವಾ ಕ್ಷೇತ್ರದ ಸಂಸದರಾಗಿದ್ದರು.

ನಂದಕುಮಾರ್ ಅವರ ಹೆಂಡತಿ, ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದು, ಶಹಪುರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ನಂದಕುಮಾರ್ ಅವರ ಮಗ ಹರ್ಷವರ್ಧನ್‌ ಸಿಂಗ್​ ಚೌಹಾಣ್‌ ಪ್ರತಿಕ್ರಿಯೆ ನೀಡಿದ್ದಾರೆ.

1978ರಲ್ಲಿ ಶಹಪುರ ಮುನ್ಸಿಪಲ್‌ ಕೌನ್ಸಿಲ್‌ನಿಂದ ರಾಜಕೀಯ ಜೀವನ ಆರಂಭಿಸಿದ ಅವರು, ಮಧ್ಯ ಪ್ರದೇಶದ ವಿಧಾನಸಭೆ ಆಯ್ಕೆಯಾದರು. 1985 ಮತ್ತು 1996ರಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದರು. ಖಾಂಡವಾ ಲೋಕಸಭಾ ಕ್ಷೇತ್ರದಿಂದ 1996ರಿಂದ ಆರು ಬಾರಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. 2018ರ ಏಪ್ರಿಲ್‌ 18ರ ವರೆಗೂ ಮಧ್ಯ ಪ್ರದೇಶ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು.

Next Story

RELATED STORIES