ಭೂತಾನ್ಗೆ ಕೋವಿಡ್ 19 ಲಸಿಕೆಯನ್ನು ಉಡುಗೊರೆಯಾಗಿ ನೀಡಿದ ಭಾರತ
ಲಸಿಕೆಯನ್ನು ಉಡುಗೊರೆಯಾಗಿ ಪಡೆದ ಮೊದಲ ರಾಷ್ಟ್ರ ಎಂಬ ಗೌರವಕ್ಕೆ ಭೂತಾನ್ ಸೇರಿದೆ.

ಮಹಾರಾಷ್ಟ್ರ: ನಮ್ಮ ನೆರೆಯ ರಾಷ್ಟ್ರ ಭೂತಾನ್ಗೆ ಉಡುಗೊರೆಯಾಗಿ ಭಾರತ ಕೋವಿಡ್-19 ಲಸಿಕೆಯನ್ನು ರವಾನಿಲಾಗಿದ್ದು, ಇಂದು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 150,000 ಲಕ್ಷ ಕೊರೊನಾ ಲಸಿಕೆಯ 'ಕೋವಿಶೀಲ್ಡ್' ಡೋಸೇಜ್ಗಳನ್ನು ಕಳುಹಿಸಿಕೊಡಲಾಯಿತು.
Maharashtra: The first consignment of 1.5 lakh dosages of Covishield vaccine being dispatched to Thimphu in Bhutan from Chhatrapati Shivaji Maharaj International Airport, Mumbai. pic.twitter.com/V2WtQkvoBt
— ANI (@ANI) January 19, 2021
ಲಸಿಕೆಯನ್ನು ಉಡುಗೊರೆಯಾಗಿ ಪಡೆದ ಮೊದಲ ರಾಷ್ಟ್ರ ಎಂಬ ಗೌರವಕ್ಕೆ ಭೂತಾನ್ ಪಾತ್ರವಾಗಿದೆ.
ಕೋವಿಡ್-19 ಕಠಿಣ ಕಾಲಘಟ್ಟದಲ್ಲೂ ಭೂತಾನ್ಗೆ 2.8 ಕೋಟಿ ರೂ.ಗಿಂತಲೂ ಹೆಚ್ಚು ಮೌಲ್ಯದ ಪಿಪಿಇ ಕಿಟ್, ಎನ್95 ಮಾಸ್ಕ್ ಸೇರಿದಂತೆ ಅಗತ್ಯ ಔಷಧಿ ಹಾಗೂ ವೈದ್ಯಕೀಯ ಸಾಮಾಗ್ರಿಗಳನ್ನು ಭಾರತ ಒದಗಿಸಿದೆ.
ಕೆಲವು ದಿನಗಳ ಹಿಂದೆಯಷ್ಟೇ ವಿಶ್ವದ ಅತಿ ದೊಡ್ಡ ಕೋವಿಡ್-19 ಲಸಿಕೆ ವಿತರಣೆ ಅಭಿಯಾನಕ್ಕೆ ಚಾಲನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೂತಾನ್ ಪ್ರಧಾನಿ ಲೊಟೆ ಶೆರಿಂಗ್ ಅಭಿನಂದಿಸಿದ್ದರು.
ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆಯನ್ನು ಪುಣೆಯ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿದೆ.
#WATCH | First consignment of 1.5 lakh dosages of Covishield vaccine being dispatched to Bhutan from Chhatrapati Shivaji Maharaj International Airport in Mumbai. pic.twitter.com/mKtARLv27T
— ANI (@ANI) January 20, 2021