Top

ದೇಶದ ಐದು ರಾಜ್ಯಗಳಿಗೆ ಚುನಾವಣೆ ದಿನಾಂಕ ಘೋಷಣೆ

ಪುದುಚೇರಿ (ಕೇಂದ್ರಾಡಳಿತ ಪ್ರದೇಶ), ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಹಾಗೂ ಅಸ್ಸಾಂ ರಾಜ್ಯಗಳಿಗೆ ಚುನಾವಣೆ

ದೇಶದ ಐದು ರಾಜ್ಯಗಳಿಗೆ ಚುನಾವಣೆ ದಿನಾಂಕ ಘೋಷಣೆ
X

ನವದೆಹಲಿ: 2021-22 ಪ್ರಸಕ್ತ ಸಾಲಿನಲ್ಲಿ ಒಂದು ಕೇಂದ್ರಾಡಳಿ ಪ್ರದೇಶ ಸೇರಿದಂತೆ ದೇಶದ ಒಟ್ಟು ನಾಲ್ಕು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣೆ ಆಯೋಗದ ಮುಖ್ಯ ಚುನಾವಣಾಧಿಕಾರಿ ಸುನಿಲ್​ ಆರೋರಾ ಅವರು ತಿಳಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುದುಚೇರಿ (ಕೇಂದ್ರಾಡಳಿತ ಪ್ರದೇಶ), ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಹಾಗೂ ಅಸ್ಸಾಂ ರಾಜ್ಯಗಳಿಗೆ ಚುನಾವಣೆ ನಡೆಯಲಿದೆ.

ಅಸ್ಸಾಂನಲ್ಲಿ ಮಾರ್ಚ್​ 27ರಂದು ಮೊದಲ ಹಂತ, ಏಪ್ರಿಲ್​ 1ರಂದು ಎರಡನೇ ಹಂತ, ಏಪ್ರಿಲ್​ 6ರಂದು ಕೊನೆ ಹಂತದ ಮತದಾನ ನಡೆಯಲಿದೆ. ತಮಿಳುನಾಡು, ಕೇರಳ ಹಾಗೂ ಪುದುಚೇರಿಯಲ್ಲಿ ಸಹ ಏಪ್ರಿಲ್​ 6ರಂದು ಒಂದೇ ಹಂತದಲ್ಲಿ ಚುನಾವಣೆ ಜರುಗಲಿದೆ. ಪಶ್ಷಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮಾರ್ಚ್​ 27ರಂದು ಹಂತ, ಏಪ್ರಿಲ್​ 1ರಂದು ಎರಡನೇ ಹಂತ, ಏಪ್ರಿಲ್​ 6 ಮೂರನೇ ಹಂತದ, 10 ನಾಲ್ಕನೇ ಹಂತ, 17ರಂದು ಐದನೇ ಹಂತ, 22ರಂದು ಆರನೇ ಹಂತ, 26ರಂದು ಏಳನೇ ಹಂತ, 29ರಂದು ಎಂಟು ಹಂತದ ಮತದಾನ ನಡೆಯಲಿದೆ.

ಮಾರ್ಚ್​ 27ಕ್ಕೆ ಚುನಾವಣೆ ಶುರುವಾಗಲಿದೆ

ಮೇ 2ರಂದು ಐದು ರಾಜ್ಯಗಳ ಫಲಿತಾಂಶ

Next Story

RELATED STORIES