Top

COVID 19 India Updates: ದೇಶದಲ್ಲಿ 3,95,192 ಸಕ್ರಿಯ ಪ್ರಕರಣಗಳಿವೆ

ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 53,476 ಕೋವಿಡ್‌ 19 ಹೊಸ ಪ್ರಕರಣಗಳು ಪತ್ತೆಯಾಗಿದೆ.

COVID 19 India Updates: ದೇಶದಲ್ಲಿ 3,95,192 ಸಕ್ರಿಯ ಪ್ರಕರಣಗಳಿವೆ
X

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 53,476 ಕೋವಿಡ್‌ 19 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 251 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಸದ್ಯ ಇದರೊಂದಿಗೆ ಸೋಂಕಿತರ ಸಂಖ್ಯೆ 1,17,87,534ಕ್ಕೆ ಏರಿಕೆಯಾಗಿದೆ. ಆ ಪೈಕಿ 1,60,692 ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಇದುವರೆಗೆ 1,12,31,650 ಮಂದಿ ಗುಣಮುಖರಾಗಿದ್ದಾರೆ.

ಇನ್ನು ದೇಶದಲ್ಲಿ 3,95,192 ಸಕ್ರಿಯ ಪ್ರಕರಣಗಳಿವೆ.

ಮಹಾರಾಷ್ಟ್ರ 2,48,604, ಕೇರಳ 24,578, ಪಂಜಾಬ್‌ 20,522, ಕರ್ನಾಟಕ 16,905, ಚಂಡೀಗಡ 11,934, ಮಧ್ಯಪ್ರದೇಶ 10,047, ತಮಿಳುನಾಡಿನಲ್ಲಿ 9,746 ಸಕ್ರಿಯ ಪ್ರಕರಣಗಳು ವರದಿಯಾಗಿವೆ.

Next Story

RELATED STORIES