Top

COVID 19 India Updates: ದೇಶದಲ್ಲಿ 71 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ

ದೇಶದಾದ್ಯಂತ ಕೋವಿಡ್‌-19 ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 71 ಲಕ್ಷ ಗಡಿ ದಾಟಿದೆ

COVID 19 India Updates: ದೇಶದಲ್ಲಿ 71 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ
X

ನವದೆಹಲಿ: ದೇಶದಾದ್ಯಂತ ಕೋವಿಡ್‌-19 ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 71 ಲಕ್ಷ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 66,732 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 816 ಮಂದಿ ಸಾವನ್ನಪ್ಪಿದ್ದಾರೆ.

71,20,539 ಪ್ರಕರಣಗಳ ಪೈಕಿ 8,61,853 ಸಕ್ರಿಯ ಪ್ರಕರಣಗಳಿದ್ದು, 61,49,536 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿಯ ತನಕ 1,09,150 ಮಂದಿ ಸಾವಿಗೀಡಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಇದುವರೆಗೆ 15,28,226 ಕೇಸ್​ ಪತ್ತೆಯಾಗಿದ್ದು, 40,349 ಮಂದಿ ಸಾವಿಗೀಡಾಗಿದ್ದಾರೆ. ಆಂಧ್ರಪ್ರದೇಶದಲ್ಲಿ 7,52,832 ಲಕ್ಷ ಜನರಿಗೆ ಸೋಂಕು ತಗುಲಿದ್ದು, ಈವರೆಗೆ 6,224 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ 6,51,370 ಲಕ್ಷ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಆ ಪೈಕಿ 10,187 ಮಂದಿ ಮೃತಪಟ್ಟಿದ್ದಾರೆ.

ಕರ್ನಾಟಕದಲ್ಲಿ ಒಟ್ಟು 7,10,309 ಪ್ರಕರಣಗಳು ಪತ್ತೆಯಾಗಿವೆ. 1,20,270 ಸಕ್ರಿಯ ಪ್ರಕರಣಗಳಿವೆ. 5,80,054 ಮಂದಿ ಇಲ್ಲಿಯವರೆಗೆ ಗುಣಮುಖರಾದ್ದಾರೆ. 9,966 ಮಂದಿ ಸಾವನ್ನಪ್ಪಿದ್ದಾರೆ.

Next Story

RELATED STORIES