Top

COVID 19 India Updates: ದೇಶಾದ್ಯಂತ 1 ಲಕ್ಷ ಗಡಿ ದಾಟಿದ ಕೊರೊನಾ​ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ

ದೇಶದಾದ್ಯಂತ ಕೋವಿಡ್‌-19 ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 64 ಲಕ್ಷ ಗಡಿ ದಾಟಿದೆ.

COVID 19 India Updates: ದೇಶಾದ್ಯಂತ 1 ಲಕ್ಷ ಗಡಿ ದಾಟಿದ ಕೊರೊನಾ​ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ
X

ನವದೆಹಲಿ: ದೇಶದಾದ್ಯಂತ ಕೋವಿಡ್‌-19 ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 64 ಲಕ್ಷ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 79,476 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 1,069 ಮಂದಿ ಸಾವನ್ನಪ್ಪಿದ್ದಾರೆ.

64,73,545 ಪ್ರಕರಣಗಳ ಪೈಕಿ 9,44,996 ಸಕ್ರಿಯ ಪ್ರಕರಣಗಳಿದ್ದು, 54,27,707 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿಯ ತನಕ 1,00,842 ಮಂದಿ ಸಾವಿಗೀಡಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಮಹಾರಾಷ್ಟ್ರದಲ್ಲಿ 2,60,876 ಸಕ್ರಿಯ ಪ್ರಕರಣಗಳು, ಕರ್ನಾಟಕದಲ್ಲಿ 1,11,386 ಪ್ರಕರಣಗಳು, ಆಂಧ್ರ ಪ್ರದೇಶದಲ್ಲಿ 56897 ಹಾಗೂ ಉತ್ತರ ಪ್ರದೇಶದಲ್ಲಿ 50,883 ಸಕ್ರಿಯ ಪ್ರಕರಣಗಳಿರುವುದಾಗಿ ಆರೋಗ್ಯ ಸಚಿವಾಲಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.


ಕರ್ನಾಟಕದಲ್ಲಿ ಒಟ್ಟು 6,20,630 ಪ್ರಕರಣಗಳು ಪತ್ತೆಯಾಗಿವೆ. 1,11,386, ಸಕ್ರಿಯ ಪ್ರಕರಣಗಳಿವೆ. 4,99,506 ಮಂದಿ ಇಲ್ಲಿಯವರೆಗೆ ಗುಣಮುಖರಾದ್ದಾರೆ. 9,119 ಮಂದಿ ಸಾವನ್ನಪ್ಪಿದ್ದಾರೆ.

Next Story

RELATED STORIES