COVID 19 India Updates: ದೇಶದಾದ್ಯಂತ ಒಂದೇ ದಿನ 13,742 ಮಂದಿಗೆ ಕೋವಿಡ್ 19 ಧೃಡ
ದೇಶದಲ್ಲಿ 1,46,907 ಸಕ್ರಿಯ ಪ್ರಕರಣಗಳಿವೆ.

X
Admin 224 Feb 2021 5:15 AM GMT
ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 13,742 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ಪತ್ತೆಯಾಗಿದ್ದು, 104 ಮಂದಿ ಮೃತಪಟ್ಟಿದ್ದಾರೆ. 14,037 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದರೊಟ್ಟಿಗೆ ಈವರೆಗೆ ಸೋಂಕಿತರಾದವರ ಸಂಖ್ಯೆ 1,10,30,176 ಆಗಿದೆ. ಈ ಪೈಕಿ 1,56,567 ಮಂದಿ ಸಾವನ್ನಪ್ಪಿದ್ದು, 1,07,26,702 ಸೋಂಕಿತರು ಚೇತರಿಕೆಯಾಗಿದ್ದಾರೆ.
ಇನ್ನು ದೇಶದಲ್ಲಿ 1,46,907 ಸಕ್ರಿಯ ಪ್ರಕರಣಗಳಿವೆ. ಕೇರಳ, ಮಹಾರಾಷ್ಟ್ರ ಸೇರಿದಂತೆ ಇತರೆ ಕೆಲವು ರಾಜ್ಯಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆ ಆಗುತ್ತಿದೆ.
Next Story