Top

COVID 19 India Updates: ದೇಶಾದ್ಯಂತ ಒಂದೇ ದಿನದಲ್ಲಿ 67,708 ಸೋಂಕಿತರು ಪತ್ತೆ

ದೇಶದಾದ್ಯಂತ ಕೋವಿಡ್‌-19 ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 73 ಲಕ್ಷ ಗಡಿ ದಾಟಿದೆ

COVID 19 India Updates: ದೇಶಾದ್ಯಂತ ಒಂದೇ ದಿನದಲ್ಲಿ 67,708 ಸೋಂಕಿತರು ಪತ್ತೆ
X

ನವದೆಹಲಿ: ದೇಶದಾದ್ಯಂತ ಕೋವಿಡ್‌-19 ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 73 ಲಕ್ಷ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 67,708 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 680 ಮಂದಿ ಸಾವನ್ನಪ್ಪಿದ್ದಾರೆ.

73,07,098 ಪ್ರಕರಣಗಳ ಪೈಕಿ 8,12,390 ಸಕ್ರಿಯ ಪ್ರಕರಣಗಳಿದ್ದು, 63,83,442 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿಯ ತನಕ 1,11,266 ಮಂದಿ ಸಾವಿಗೀಡಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಇದುವರೆಗೆ 15,54,389 ಕೇಸ್​ ಪತ್ತೆಯಾಗಿದ್ದು, 40,859 ಮಂದಿ ಸಾವಿಗೀಡಾಗಿದ್ದಾರೆ. ಆಂಧ್ರಪ್ರದೇಶದಲ್ಲಿ 7,64,570 ಲಕ್ಷ ಜನರಿಗೆ ಸೋಂಕು ತಗುಲಿದ್ದು, ಈವರೆಗೆ 6,319 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ 6,70,392 ಲಕ್ಷ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಆ ಪೈಕಿ 10,423 ಮಂದಿ ಮೃತಪಟ್ಟಿದ್ದಾರೆ.

ಕರ್ನಾಟಕದಲ್ಲಿ ಒಟ್ಟು 7,26,106 ಪ್ರಕರಣಗಳು ಪತ್ತೆಯಾಗಿವೆ. 1,13,459 ಸಕ್ರಿಯ ಪ್ರಕರಣಗಳಿವೆ. 6,02,505 ಮಂದಿ ಇಲ್ಲಿಯವರೆಗೆ ಗುಣಮುಖರಾದ್ದಾರೆ. 10,123 ಮಂದಿ ಸಾವನ್ನಪ್ಪಿದ್ದಾರೆ.

Next Story

RELATED STORIES