Top

COVID 19 India Updates: ದೇಶದಾದ್ಯಂತ 24 ಗಂಟೆಗಳಲ್ಲಿ 11,666 ಹೊಸ ಕೋವಿಡ್‌ ಪ್ರಕರಣಗಳು ಪತ್ತೆ

ಕೇರಳದಲ್ಲಿ 72,476, ಮಹಾರಾಷ್ಟ್ರದಲ್ಲಿ 44,624, ಕರ್ನಾಟಕದಲ್ಲಿ 6,317 ಸಕ್ರಿಯ ಪ್ರಕರಣಗಳಿವೆ.

COVID 19 India Updates: ದೇಶದಾದ್ಯಂತ 24 ಗಂಟೆಗಳಲ್ಲಿ 11,666 ಹೊಸ ಕೋವಿಡ್‌ ಪ್ರಕರಣಗಳು ಪತ್ತೆ
X

ನವದೆಹಲಿ: ದೇಶದಾದ್ಯಂತ 24 ಗಂಟೆಗಳಲ್ಲಿ 11,666 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, 123 ಮಂದಿ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,07,01,193ಕ್ಕೆ ಏರಿಕೆಯಾಗಿದೆ. ಆ ಪೈಕಿ 1,53,847 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ದೇಶದಲ್ಲಿ ಚೇತರಿಕೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈವರೆಗೆ 1,03,73,606 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 1,73,740 ಸಕ್ರಿಯ ಪ್ರಕರಣಗಳಿವೆ. ಕೋವಿಡ್‌ 19 ಲಸಿಕೆ ಅಭಿಯಾನ ಈಗಾಗಲೇ ಮುಂದುವರಿದಿದ್ದು, ಈವರೆಗೆ 23,55,979 ಮಂದಿ ಲಸಿಕೆ ಪಡೆದಿದ್ದಾರೆ.

ಸದ್ಯ ಕೇರಳದಲ್ಲಿ 72,476, ಮಹಾರಾಷ್ಟ್ರದಲ್ಲಿ 44,624, ಕರ್ನಾಟಕದಲ್ಲಿ 6,317 ಸಕ್ರಿಯ ಪ್ರಕರಣಗಳಿವೆ.


Next Story

RELATED STORIES