Top

COVID 19 India Updates: ದೇಶಾದ್ಯಂತ ಕಳೆದ 24 ಗಂಟೆಯಲ್ಲಿ 61,267 ಹೊಸ ಪ್ರಕರಣಗಳು ಪತ್ತೆ, 884 ಮಂದಿ ಸಾವು

ದೇಶದಾದ್ಯಂತ ಕೋವಿಡ್‌-19 ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 66 ಲಕ್ಷ ಗಡಿ ದಾಟಿದೆ

COVID 19 India Updates: ದೇಶಾದ್ಯಂತ ಕಳೆದ 24 ಗಂಟೆಯಲ್ಲಿ 61,267 ಹೊಸ ಪ್ರಕರಣಗಳು ಪತ್ತೆ, 884 ಮಂದಿ ಸಾವು
X

ನವದೆಹಲಿ: ದೇಶದಾದ್ಯಂತ ಕೋವಿಡ್‌-19 ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 66 ಲಕ್ಷ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 61,267 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 884 ಮಂದಿ ಸಾವನ್ನಪ್ಪಿದ್ದಾರೆ.

66,85,083 ಪ್ರಕರಣಗಳ ಪೈಕಿ 9,19,023 ಸಕ್ರಿಯ ಪ್ರಕರಣಗಳಿದ್ದು, 56,62,491 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿಯ ತನಕ 1,03,569 ಮಂದಿ ಸಾವಿಗೀಡಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.


ಕರ್ನಾಟಕದಲ್ಲಿ ಒಟ್ಟು 6,40,661 ಪ್ರಕರಣಗಳು ಪತ್ತೆಯಾಗಿವೆ. 1,15,574 ಸಕ್ರಿಯ ಪ್ರಕರಣಗಳಿವೆ. 5,15,782 ಮಂದಿ ಇಲ್ಲಿಯವರೆಗೆ ಗುಣಮುಖರಾದ್ದಾರೆ. 9,286 ಮಂದಿ ಸಾವನ್ನಪ್ಪಿದ್ದಾರೆ.

Next Story

RELATED STORIES