Top

COVID 19 India Updates: ಕಳೆದ 24 ಗಂಟೆಯಲ್ಲಿ 40,715 ಹೊಸ ಪ್ರಕರಣಗಳು ಪತ್ತೆಯಾಗಿವೆ

ದೇಶದಲ್ಲಿ 3,45,377 ಸಕ್ರಿಯ ಪ್ರಕರಣಗಳಿವೆ.

COVID 19 India Updates: ಕಳೆದ 24 ಗಂಟೆಯಲ್ಲಿ 40,715 ಹೊಸ ಪ್ರಕರಣಗಳು ಪತ್ತೆಯಾಗಿವೆ
X

ದೆಹಲಿ: ಕೊರೊನಾ ಎರಡನೇ ಅಲೆ ದೇಶದಾದ್ಯಂತ ದಿನೇ ದಿನೇ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಇಂದು ದಿಢೀರ್​ ಕುಸಿತ ಕಂಡಿದ್ದು, ನಿನ್ನೆ 46,951 ಪ್ರಕರಣಗಳು ವರದಿಯಾಗಿದ್ದವು. ಮಂಗಳವಾರ 40,715 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಸದ್ಯ ಈವರೆಗೆ ದೇಶದ ಒಟ್ಟಾರೆ ಸೋಂಕಿತರ ಸಂಖ್ಯೆ 1,16,86,796ಕ್ಕೆ ಏರಿಕೆ ಆಗಿದೆ. ಇನ್ನು ಈ 24 ಗಂಟೆಗಳಲ್ಲಿ 199 ಮಂದಿ ಪ್ರಾಣಕಳೆದುಕೊಂಡಿದ್ದು, ಒಟ್ಟು ಸಾವಿನ ಸಂಖ್ಯೆ 1,60,166 ಆಗಿದೆ. 29,785 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ದೇಶದಲ್ಲಿ ಈ ವರೆಗೆ 1,11,81,253 ಜನ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಸದ್ಯ ದೇಶದಲ್ಲಿ 3,45,377 ಸಕ್ರಿಯ ಪ್ರಕರಣಗಳಿವೆ. ಈ ವರೆಗೆ ದೇಶದಲ್ಲಿ 4,84,94,594 ಮಂದಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ.

Next Story

RELATED STORIES