Top

COVID 19 India Update: ದೇಶಾದ್ಯಂತ 63 ಲಕ್ಷ ಗಡಿ ದಾಟಿದ ಕೋವಿಡ್​ ಸೋಂಕಿತರ ಸಂಖ್ಯೆ

ಕಳೆದ 24 ಗಂಟೆಗಳಲ್ಲಿ 86,821 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 1,181 ಮಂದಿ ಸಾವನ್ನಪ್ಪಿದ್ದಾರೆ.

COVID 19 India Update: ದೇಶಾದ್ಯಂತ 63 ಲಕ್ಷ ಗಡಿ ದಾಟಿದ ಕೋವಿಡ್​ ಸೋಂಕಿತರ ಸಂಖ್ಯೆ
X

ಬೆಂಗಳೂರು: ದೇಶದಾದ್ಯಂತ ಕೋವಿಡ್‌-19 ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 63 ಲಕ್ಷ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 86,821 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 1,181 ಮಂದಿ ಸಾವನ್ನಪ್ಪಿದ್ದಾರೆ.

63,12,585 ಪ್ರಕರಣಗಳ ಪೈಕಿ 9,40,705 ಸಕ್ರಿಯ ಪ್ರಕರಣಗಳಿದ್ದು, 52,73,202 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿಯ ತನಕ 98,678 ಮಂದಿ ಸಾವಿಗೀಡಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಮಹಾರಾಷ್ಟ್ರದಲ್ಲಿ 2,59,462 ಸಕ್ರಿಯ ಪ್ರಕರಣಗಳು, ಕರ್ನಾಟಕದಲ್ಲಿ 1,07,635 ಪ್ರಕರಣಗಳು, ಆಂಧ್ರ ಪ್ರದೇಶದಲ್ಲಿ 58,445 ಹಾಗೂ ಉತ್ತರ ಪ್ರದೇಶದಲ್ಲಿ 50,883 ಸಕ್ರಿಯ ಪ್ರಕರಣಗಳಿರುವುದಾಗಿ ಆರೋಗ್ಯ ಸಚಿವಾಲಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಕರ್ನಾಟಕದಲ್ಲಿ ಒಟ್ಟು 5,92,911 ಪ್ರಕರಣಗಳು ಪತ್ತೆಯಾಗಿವೆ. 1,077,37 ಸಕ್ರಿಯ ಪ್ರಕರಣಗಳಿವೆ. 4,763,78 ಮಂದಿ ಇಲ್ಲಿಯವರೆಗೆ ಗುಣಮುಖರಾದ್ದಾರೆ. 8,777 ಮಂದಿ ಸಾವನ್ನಪ್ಪಿದ್ದಾರೆ.

Next Story

RELATED STORIES