Top

COVID 19 India Upadates: ದೇಶಾದ್ಯಂತ ಒಂದೇ ದಿನದಲ್ಲಿ 73,272 ಮಂದಿಗೆ ಸೋಂಕು

ದೇಶದಾದ್ಯಂತ ಕೋವಿಡ್‌-19 ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 69 ಲಕ್ಷ ಗಡಿ ದಾಟಿದೆ.

COVID 19 India Upadates: ದೇಶಾದ್ಯಂತ ಒಂದೇ ದಿನದಲ್ಲಿ 73,272 ಮಂದಿಗೆ ಸೋಂಕು
X

ನವದೆಹಲಿ: ದೇಶದಾದ್ಯಂತ ಕೋವಿಡ್‌-19 ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 69 ಲಕ್ಷ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 73,272 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 926 ಮಂದಿ ಸಾವನ್ನಪ್ಪಿದ್ದಾರೆ.

69,79,424 ಪ್ರಕರಣಗಳ ಪೈಕಿ 8,83,185 ಸಕ್ರಿಯ ಪ್ರಕರಣಗಳಿದ್ದು, 59,88,823 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿಯ ತನಕ 1,07,416 ಮಂದಿ ಸಾವಿಗೀಡಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಇದುವರೆಗೆ 15,06.018 ಕೇಸ್​ ಪತ್ತೆಯಾಗಿದ್ದು, 40186 ಮಂದಿ ಸಾವಿಗೀಡಾಗಿದ್ದಾರೆ. ಆಂಧ್ರಪ್ರದೇಶದಲ್ಲಿ 7,44,864 ಲಕ್ಷ ಜನರಿಗೆ ಸೋಂಕು ತಗುಲಿದ್ದು, ಈವರೆಗೆ 6,159 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ 6,46,128 ಲಕ್ಷ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಆ ಪೈಕಿ 10,120 ಮಂದಿ ಮೃತಪಟ್ಟಿದ್ದಾರೆ.

ಕರ್ನಾಟಕದಲ್ಲಿ ಒಟ್ಟು 6,79,356 ಪ್ರಕರಣಗಳು ಪತ್ತೆಯಾಗಿವೆ. 1,17,143 ಸಕ್ರಿಯ ಪ್ರಕರಣಗಳಿವೆ. 5,52,519 ಮಂದಿ ಇಲ್ಲಿಯವರೆಗೆ ಗುಣಮುಖರಾದ್ದಾರೆ. 9,675 ಮಂದಿ ಸಾವನ್ನಪ್ಪಿದ್ದಾರೆ.

Next Story

RELATED STORIES