Top

ದೇಶಾದ್ಯಂತ ಕೋವಿಡ್​ 19 ಸೋಂಕಿತರ ಸಂಖ್ಯೆ 33 ಲಕ್ಷಕ್ಕೆ ಏರಿಕೆ

ದೇಶಾದ್ಯಂತ ಒಟ್ಟು ಸೋಂಕಿತರ ಸಂಖ್ಯೆ 33,10,235ಕ್ಕೆ ಏರಿಕೆಯಾಗಿದ್ರೆ, 1,023 ಮಂದಿ ಸಾವನ್ನಪ್ಪಿದ್ದಾರೆ.

ದೇಶಾದ್ಯಂತ ಕೋವಿಡ್​ 19 ಸೋಂಕಿತರ ಸಂಖ್ಯೆ 33 ಲಕ್ಷಕ್ಕೆ ಏರಿಕೆ
X

ನವದೆಹಲಿ: ದೇಶದಲ್ಲಿ ಕೋವಿಡ್​ 19 ಸೋಂಕಿತ ಸಂಖ್ಯೆ ದಿನ ದಿನೇ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 75,760 ಹೊಸ ಕೇಸ್​ಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 33,10,235ಕ್ಕೆ ಏರಿಕೆಯಾಗಿದ್ರೆ, 1,023 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ಇಲ್ಲಿಯವರೆಗೆ ಬಲಿಯಾದವರ ಸಂಖ್ಯೆ 60,472ಕ್ಕೆ ಬಂದು ನಿಂತಿದೆ.

24,61,191 ಮಂದಿ ಸೋಂಕಿತರ ಪೈಕಿ ಒಟ್ಟು ಗುಣಮುಖರಾದವರ ಸಂಖ್ಯೆ 25,23,772ಕ್ಕೆ ತಲುಪಿದೆ. ಪ್ರಸ್ತುತ ದೇಶದಲ್ಲಿನ್ನೂ 7,25,991ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಇನ್ನು ಕರ್ನಾಟಕದಲ್ಲಿ ನಿನ್ನೆ ಒಂದೇ ದಿನಕ್ಕೆ 8580 ಕೋವಿಡ್​-19 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ 300406 ಒಟ್ಟು ಸಕ್ರಿಯ ಪ್ರಕರಣಗಳಿದ್ದು,
ನಿನ್ನೆ ಸಾವನ್ನಪ್ಪಿದ್ದವರು 133 ಮಂದಿ. ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡವರು 7249 ಮಂದಿ.

ಬೆಂಗಳೂರಿನಲ್ಲಿಯೇ 3284 ಪ್ರಕರಣಗಳು ದೃಢಪಟ್ಟಿದ್ದರೆ, ಒಟ್ಟು 115371 ಸಕ್ರಿಯ ಪ್ರಕರಣಗಳಿದ್ದು, 31 ಮಂದಿ ಸಾವನ್ನಪ್ಪಿದ್ದಾರೆ. 2630 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.


Next Story

RELATED STORIES