Top

ರಸ್ತೆ ಅಪಘಾತ: ಆರು ಮಕ್ಕಳು ಸೇರಿದಂತೆ 14 ಮಂದಿ ದುರ್ಮರಣ

ಮಣಿಕ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಪ್ರಯಾಗ್‌ ರಾಜ್‌-ಲಕ್ನೋ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ

ರಸ್ತೆ ಅಪಘಾತ: ಆರು ಮಕ್ಕಳು ಸೇರಿದಂತೆ 14 ಮಂದಿ ದುರ್ಮರಣ
X

ಲಕ್ನೋ: ಉತ್ತರ ಪ್ರದೇಶದ ಪ್ರತಾಪ್‌ ಗಢದಲ್ಲಿ ಗುರುವಾರ ತಡರಾತ್ರಿ ವಾಹನ ಮತ್ತು ಟ್ರಕ್ ನಡುವೆ ಅಪಘಾತ ಉಂಟಾಗಿರುವ ಪರಿಣಾಮ 6 ಮಕ್ಕಳು ಸೇರಿದಂತೆ 14 ಜನರು ಮೃತಪಟ್ಟಿದ್ದಾರೆ ಎಂದು ಎಎನ್‌ಐ ತಿಳಿಸಿದೆ.

ಮಣಿಕ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಪ್ರಯಾಗ್‌ ರಾಜ್‌-ಲಕ್ನೋ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.

ಮೃತರನ್ನು ದಿನೇಶ್ ಕುಮಾರ್ (40), ಪವನ್ ಕುಮಾರ್ (10), ದಯಾರಾಮ್ (40), ಅಮನ್ (7), ರಾಮ್‌ಸಮುಜ್ (40), ಅನ್ಶ್ (9), ಗೌರವ್ ಕುಮಾರ್ (10), ನಾನ್ ಭೈಯಾ (55), ಸಚಿನ್ (12), ಹಿಮಾಂಶು (12), ಮಿಥಿಲೇಶ್ ಕುಮಾರ್ (17), ಅಭಿಮನ್ಯು (28), ಪರಸ್ನಾಥ್ (40) ಮತ್ತು ಬೊಲೆರೊ ಬಬ್ಲು ಚಾಲಕ (22) ಎಂದು ಗುರುತಿಸಲಾಗಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಪಘಾತ ಸ್ಥಳಕ್ಕೆ ದಾವಿಸಿ ಸಾಧ್ಯವಿರುವ ಎಲ್ಲಾ ಸಹಾಯಗಳನ್ನು ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


Next Story

RELATED STORIES