ನಾಳೆಯಿಂದ 13 ನೇ ಏರೋ ಇಂಡಿಯಾ 2021 ಆರಂಭ
ಕರಾಮತ್ತು ಪ್ರದರ್ಶಿಸಲು ಸಿದ್ಧವಾದ ಲೋಹದ ಹಕ್ಕಿಗಳು.

ಬೆಂಗಳೂರು: ಬಾನಂಗಳದಲ್ಲಿ ಉಕ್ಕಿನ ಹಕ್ಕಿಗಳ ಕಲರವಕ್ಕೆ ಕ್ಷಣಗಣನೆ ಆರಂಭವಾಗಿದೆ. ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಾಳೆಯಿಂದ 3 ದಿನಗಳ ಕಾಲ ವೈಮಾನಿಕ ಪ್ರದರ್ಶನಕ್ಕೆ ನಡೆಯಲಿದೆ. ದೇಶ ವಿದೇಶದಿಂದ ಆಗಮಿಸಿರೋ ಯುದ್ಧ ವಿಮಾನಗಳು ಫುಲ್ ರಿಹರ್ಸಲ್ ನಡೆಸಿ ಏರ್ ಶೋ ನಲ್ಲಿ ವೈಮಾನಿಕ ಪ್ರದರ್ಶನ ನೀಡಲು ಸಜ್ಜಾಗಿ ನಿಂತಿವೆ.
ನಾಳೆಯಿಂದ ಆರಂಭವಾಗಲಿರುವ ಏರ್ ಶೋ ಗೆ ಕ್ಷಣಗಣನೆ ಶುರುವಾಗಿದೆ. ಎಲ್ಲರ ಚಿತ್ತ ಈಗ ಬೆಂಗಳೂರಿನ ಯಲಹಂಕ ವಾಯು ನೆಲೆಯತ್ತ ನೆಟ್ಟಿದೆ. ನಾಳೆಯಿಂದ ಮೂರು ದಿನಗಳ ಕಾಲ ಏರ್ ಶೋ ನಡೆಯಲಿದ್ದು ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿವೆ. ಇನ್ನೂ 13ನೇ ಆವೃತ್ತಿಯ ಏರ್ ಶೋನಲ್ಲಿ 41 ಯುದ್ದ ವಿಮಾನಗಳು ಪಾಲ್ಗೊಳ್ಳಲಿವೆ.
ವೈಮಾನಿಕ ಪ್ರದರ್ಶನ ನೀಡೋಕೆ ಕೊನೆಯ ಹಂತದ ತಾಲೀಮು ಕೂಡ ಇಂದು ನಡೆದಿದೆ. ನಾಳೆ ಬೆಳಗ್ಗೆ 9:30ಕ್ಕೆ 13 ನೇ ಆವೃತ್ತಿಯ ಏರ್ ಶೋ ಉದ್ಘಾಟನೆ ಆಗಮಿದ್ದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಗಾಟಿಸಲಿದ್ದಾರೆ. ಏರ್ ಶೋ ಹಿನ್ನಲೆ ಖಾಸಗಿ ಹೊಟೇಲ್ನಲ್ಲಿ ಇಂದು ಏರ್ ಶೋ ಕರ್ಟನ್ ರೈಸರ್ ಕಾರ್ಯಕ್ರಮ ಕೂಡ ನಡೆಯಿತು.
ಇನ್ನೂ ಈ ಬಾರಿಯ ಸೆಂಟ್ರರ್ ಆಫ್ ಅಟ್ರ್ಯಾಕ್ಷನ್ ಅಂದ್ರೆ ಚಿನೂಕ್ ಯುದ್ದ ವಿಮಾನ. ಇದೇ ಮೊದಲ ಬಾರಿಗೆ ಏರ್ ಶೋ ನಲ್ಲಿ ಪಾಲ್ಗೊಳ್ಳುತ್ತಿದೆ. ಜೊತೆಗೆ ಭಾರತಿಯ ವಾಯುನೆಲೆಯ ಹೆಲಿಕಾಪ್ಟರ್ಗಳಾದ ಸಾರಂಗ ಸೂರ್ಯ ಕಿರಣ್ ಇದೇ ಮೊದಲ ಬಾರಿಗೆ ಒಟ್ಟಿಗೆ ಪ್ರದರ್ಶನ ನೀಡೋದು ವಿಶೇಷವಾಗಿದೆ. ಮುನ್ನಾ ದಿನವಾದ ಇದು ಯುದ್ದ ವಿಮಾನಗಳ ತಾಲೀಮು ನಡೆದಿದ್ದು ರಾಷ್ಟ್ರ ಧ್ವಜ, ಡಿಫೆನ್ಸ್ ಪ್ಲಾಗ್ ಹಾಗೂ ಏರ್ ಪೋರ್ಸ್ ಪ್ಲಾಗ್ಗೆ ನಮನ ಸಲ್ಲಿಸೋದರ ಮೂಲಕ ತಾಲೀಮು ಆರಂಭಿಸಲಾಗಿತ್ತು. ಫುಲ್ ಡ್ರೆಸ್ ರಿಹರ್ಸಲ್ ದಿನವೇ ಆಕಾಶದಲ್ಲಿ ಹೃದಯವನ್ನು ಚಿತ್ರಿಸಿ ಸಾರಂಗ, ಸೂರ್ಯಕಿರಣ್ ಹೆಲಿಕಾಪ್ಟರ್ ಗಳು ಸಾರ್ವಜನಿಕರನ್ನು ಅಟ್ರಾಕ್ಟ್ ಮಾಡಿದ್ವು.
ನಾಳಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೆಚ್ಎಎಲ್ನ ಆತ್ಮನಿರ್ಭರ ಫಾರ್ಮೇಶನ್ ಫ್ಲೈಟ್ ವೈಮಾನಿಕ ಪ್ರದರ್ಶನ ನಡೆಯಲಿದೆ. ಹುಟ್ಟು, ಸ್ವದೇಶಿ, ಸಹಭಾಗಿತ್ವ ಎಂಬ ಥೀಮ್ ಅಡಿಯಲ್ಲಿ ಈ ಆತ್ಮನಿರ್ಭರ ಪಾರ್ಮೇಶನ್ ಫ್ಲೈಟ್ ವೈಮಾನಿಕ ಪ್ರದರ್ಶನ ನಡೆಯೋದು ಈ ಬಾರಿಯ ವಿಶೇಷವಾಗಿದೆ.
ಇನ್ಮೂ ಪ್ರತಿ ವರ್ಷ 5 ದಿನಗಳ ಕಾಲ ಏರ್ ಶೋ ಕಾರ್ಯಕ್ರಮ ನಡೆಯುತ್ತಿತ್ತು. ಆದರೆ, ಕೋವಿಡ್ ಹಿನ್ನಲೆ ಈ ಬಾರಿ 3 ದಿನಕ್ಕೆ ಸೀಮಿತಗೊಳಿಸಲಾಗಿದ್ದು ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಪ್ರತಿ ದಿನದ ಪ್ರವೇಶ ಮಿತಿ 15,000 ಆಗಿದ್ದು ಡಿಸ್ ಫ್ಲೇ ಏರಿಯಾದಲ್ಲಿ ಪ್ರತಿದಿನ ಕೇವಲ 3,000 ಜನರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಕೋವಿಡ್ ಟೆಸ್ಟ್ ವರದಿ ನೆಗಟಿವ್ ಬಂದವರಿಗಷ್ಟೇ ಪ್ರವೇಶ ಇದ್ದು, ಉಳಿದವರು ಏರೊ ಇಂಡಿಯಾ ಮೊಬೈಲ್ ಆಪ್ಡೌನ್ ಲೋಡ್ ಮಾಡಿಕೊಂಡು ಹೈಬ್ರೀಡ್ ಮಾದರಿಯ ಏರ್ ಶೋ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ