Top

'ದೇಶದ ಸಾರ್ವಭೌಮತ್ವ ಮತ್ತು ಹಿತಾಸಕ್ತಿ ಕಾಪಾಡಲು ಭಾರತೀಯ ವಾಯುಪಡೆ ಬದ್ಧ' - ಐಎಎಫ್​ ಮುಖ್ಯಸ್ಥ

ಈ ಪರಿಸ್ಥಿತಿಯಲ್ಲೂ ಕೂಡ ಸಂಪೂರ್ಣ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಸಾಮರ್ಥ್ಯ ನಮ್ಮ ಯೋಧರಿಗಿದೆ ಎನ್ನುವ ಭರವಸೆಯನ್ನು ಈ ಮೂಲಕ ನೀಡುತ್ತೇನೆ.

ದೇಶದ ಸಾರ್ವಭೌಮತ್ವ ಮತ್ತು ಹಿತಾಸಕ್ತಿ ಕಾಪಾಡಲು ಭಾರತೀಯ ವಾಯುಪಡೆ ಬದ್ಧ -  ಐಎಎಫ್​ ಮುಖ್ಯಸ್ಥ
X

ನವದೆಹಲಿ: ಯಾವುದೇ ಸಂದರ್ಭದಲ್ಲಿ ದೇಶದ ಸಾರ್ವಭೌಮತ್ವ ಮತ್ತು ಹಿತಾಸಕ್ತಿ ಕಾಪಾಡಲು ಭಾರತೀಯ ವಾಯುಪಡೆ ಬದ್ಧವಾಗಿದೆ ಎಂದು ವಾಯುಪಡೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು ಗುರುವಾರ ಹೇಳಿದ್ದಾರೆ.

88ನೇ ವಾಯುಪಡೆ ದಿನಾಚರಣೆ ಪ್ರಯುಕ್ತ ಮಾತನಾಡಿರುವ ಅವರು, ಭಾರತೀಯ ವಾಯುಪಡೆ 89ನೇ ವರ್ಷಕ್ಕೆ ಕಾಲಿಡುತ್ತಿದ್ದು, ಐಎಎಫ್ ಬದಲಾವಣೆ ಕಾಣುತ್ತಿದೆ. ನಾವು ಏರೋಸ್ಪೇಸ್ ಶಕ್ತಿಯನ್ನು ಬಳಸಿಕೊಳ್ಳುತ್ತೇವೆ ಹಾಗೂ ಸಮಗ್ರ ಮಲ್ಡಿ ಡೊಮೇನ್ ಕಾರ್ಯಾಚರಣೆಗಳನ್ನು ನಡೆಸುತ್ತೇವೆ ಎಂದು ತಿಳಿಸಿದರು.

ಸದ್ಯ ಈ ವರ್ಷ ನಿಜಕ್ಕೂ ಅಭೂತಪೂರ್ವವಾಗಿದ್ದು, ಕೊರೊನಾ ವೈರಸ್​ ವಿಶ್ವದಾದ್ಯಂತ ಹರಡುತ್ತಿದೆ ಕೊರೊನಾವನ್ನು ಭಾರತ ದಿಟ್ಟವಾಗಿ ಎದುರಿಸುತ್ತಿದೆ. ಈ ಪರಿಸ್ಥಿತಿಯಲ್ಲೂ ಕೂಡ ಸಂಪೂರ್ಣ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಸಾಮರ್ಥ್ಯ ನಮ್ಮ ಯೋಧರಿಗಿದೆ ಎನ್ನುವ ಭರವಸೆಯನ್ನು ಈ ಮೂಲಕ ನೀಡುತ್ತೇನೆ ಎಂದರು.

ಉತ್ತರದ ಗಡಿ ಪ್ರದೇಶದಲ್ಲಿ ಇತ್ತೀಚೆಗೆ ಉಂಟಾಗಿದ್ದ ಪರಿಸ್ಥಿತಿಯನ್ನು ಉತ್ತಮವಾಗಿ ಎದುರಿಸುದ ಯೋಧನರ್ನು ಈ ಮೂಲಕ ಪ್ರಶಂಸಿಸುತ್ತೇನೆ ಎಂದು ಹೇಳಿದರು.

Next Story

RELATED STORIES