ಯುವರತ್ನನ ಚಾಲೆಂಜ್ ಸೀಕ್ವರಿಸಿದ ಸ್ಯಾಂಡಲ್ವುಡ್ ಸೆಲೆಬ್ರೆಟೀಸ್
ನೀನಾನೆ ನಾ, ಊರಿಗೊಬ್ಬ ರಾಜ ಹಾಡುಗಳು ಸೌಂಡ್ ಮಾಡ್ತಿರುವಾಗಲೇ ಯುವರತ್ನ ಚಿತ್ರದ ಮತ್ತೊಂದು ಸಾಂಗ್ ಸಿನಿಪ್ರಿಯರ ಗಮನ ಸೆಳೆದಿದೆ

ಪವರ್ಸ್ಟಾರ್ ಪುನೀತ್ ರಾಜ್ಕುಮಾರ್, ಸದ್ಯ ಸ್ಯಾಂಡಲ್ವುಡ್ನ ಸೆಲೆಬ್ರೆಟಿಗಳಿಗೆಲ್ಲಾ ಚಾಲೆಂಜ್ವೊಂದನ್ನ ಕೊಟ್ಟಿದ್ದಾರೆ. ಗ್ರೀನ್ ಇಂಡಿಯಾ ಚಾಲೆಂಜ್ ಆಯ್ತು. ಫಿಟ್ನೆಸ್ ಚಾಲೆಂಜ್ ಆಯ್ತು.
ಟೀಸರ್, ಸಾಂಗ್ಸ್ ಮೂಲಕವೇ ಸಖತ್ ಸೌಂಡ್ ಮಾಡುತ್ತಿರೋ ಯುವರತ್ನ ಸಿನಿಮಾ, ಇದೇ ಏಪ್ರಿಲ್ 1ರಂದು ಥಿಯೇಟರ್ ಅಂಗಳದಲ್ಲಿ ಸದ್ದು ಮಾಡಲಿದೆ. ಈಗಾಗಲೇ ಪವರ್ ಆಫ್ ಯೂತ್, ನೀನಾನೆ ನಾ, ಊರಿಗೊಬ್ಬ ರಾಜ ಹಾಡುಗಳು ಸೌಂಡ್ ಮಾಡ್ತಿರುವಾಗಲೇ ಯುವರತ್ನ ಚಿತ್ರದ ಮತ್ತೊಂದು ಸಾಂಗ್ ಸಿನಿಪ್ರಿಯರ ಗಮನ ಸೆಳೆದಿದೆ. ಅದೇ ಪಾಠಾಶಾಲಾ ಸಾಂಗ್.
ಈ ಹಿಂದೆ ಪವರ್ಸ್ಟಾರ್ ಅಭಿನಯದ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಹಾಡಿನಲ್ಲಿ ಜೀವನದ ಮೌಲ್ಯಗಳನ್ನ ತೋರಿಸಲಾಗಿತ್ತು. ಇದೀಗ ಶಿಕ್ಷಣ ಮತ್ತು ಗುರುವಿನ ಬಗ್ಗೆ ರೆಡಿಯಾಗಿರೋ ಹಾಡು ಪಾಠಾಶಾಲಾ. ಈ ಹಾಡಿಗೂ ಸ್ವತಃ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಹಾಡಿದ್ದಾರೆ. ಎಸ್ಎಸ್ ತಮನ್ ಮ್ಯೂಸಿಕ್ ಈ ಹಾಡಿಗಿದೆ.
ಪಾಠಶಾಲಾ ಸಾಂಗ್ ದಿನದಿಂದ ದಿನಕ್ಕೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೀಗ ಯುವರತ್ನ ಟೀಂ ಕಡೆಯಿಂದ, ಈ ಹಾಡಿಗೆ ಸಂಬಂಧಫಟ್ಟಂತೆ ಮೈ ಗುರು ಚಾಲೆಂಜ್ ಶುರುವಾಗಿದೆ. ಪ್ರತಿಯೊಬ್ಬರ ಜೀವನದಲ್ಲೂ ಒಬ್ಬರು ಗುರು ಅಂತ ಇದ್ದೇ ಇರ್ತಾರೆ. ಅವರ ಹೆಸರನ್ನ, ಪೋಟೋ ಸಮೇತ ಸೊಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದೇ ಈ ಚಾಲೆಂಜ್. ಮೊದಲಿಗೆ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ತಮ್ಮ ಶಿಕ್ಷಕಿಯೊಬ್ಬರ ಫೋಟೋ ಹಂಚಿಕೊಂಡಿದ್ದು,ಶ್ರೀಮುರಳಿ, ರಕ್ಷಿತ್ ಶೆಟ್ಟಿಯನ್ನ ನಾಮಿನೇಟ್ ಮಾಡಿದ್ದಾರೆ.
ಸದ್ಯ ಈ ಚಾಲೆಂಜ್ ಸೆಲೆಬ್ರೆಟಿಗಳಿಂದ ಸೆಲೆಬ್ರೆಟಿಗಳಿಗೆ ನಾಮಿನೇಟ್ ಆಗ್ತಾನೇ ಇದೆ. ಸದ್ಯ ಹೊಂಬಾಳೆ ಫಿಲ್ಮ್ನ ಕಾರ್ತಿಕ್ ಗೌಡ, ನಿರ್ದೇಶಕ ಸಂತೋಷ್ ಆನಂದ್ರಾಮ್, ಧ್ರುವಾ ಸರ್ಜಾ, ಪವರ್ ಒಡೆಯರ್ ಹೀಗೆ ಸಾಕಷ್ಟು ಸೆಲೆಬ್ರೆಟಿಗಳು ಚಾಲೆಂಜ್ ಅಕ್ಸೆಪ್ಟ್ ಮಾಡಿದ್ದು, ತಮ್ಮ ಜೀವನದ ಗುರುಗಳ ಫೋಟೋ ಶೇರ್ ಮಾಡಿದ್ದಾರೆ.
ಸದ್ಯ ಯುವರತ್ನ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ಅಪ್ಪು ಅಭಿಮಾನಿಗಳು ಸಿನಿಮಾಗಾಗಿ ಕಾತುರದಿಂದ ಕಾಯ್ತಿದ್ದಾರೆ. ಏಪ್ರಿಲ್ 1ಕ್ಕೆ ಹಬ್ಬ ಮಾಡೋಕ್ಕೆ ರೆಡಿಯಾಗಿದ್ದಾರೆ.