ಜ.31ಕ್ಕೆ ವಿಶ್ವದ ಎತ್ತರ ಕಟ್ಟಡ 'ಬುರ್ಜ್ ಖಲೀಫ'ದಲ್ಲಿ ಕಿಚ್ಚೋತ್ಸವ
ಫ್ಯಾಂಟಮ್ ಟೈಟಲ್ ಬದಲು ವಿಕ್ರಾಂತ್ ರೋಣ ಹೆಸರು ಎಂದು ಚಿತ್ರಕ್ಕೆ ಶಿರ್ಷಿಕೆ

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ರಂಗಿತರಂಗ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನ್ನಲ್ಲಿ ಸೆಟ್ಟೇರಿದ್ದ ಫ್ಯಾಂಟಮ್ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ರೆಡಿಯಾಗಿದೆ. ಈ ಮಧ್ಯೆ ಈ ಸಿನಿಮಾದ ಶೀರ್ಷಿಕೆ ಬಗ್ಗೆ ಊಹಾಪೋಹ ಕೇಳಿ ಬಂದಿತ್ತು. ಜೊತೆಗೆ ಫ್ಯಾಂಟಮ್ ಹೆಸರು ಬದಲಾವಣೆ ಆಗಲಿದೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿತ್ತು.
ಅಂತೆ-ಕಂತೆಗಳಿಗೆಲ್ಲಾ ಉತ್ತರ ಸಿಕ್ಕಿದ್ದು, ಫ್ಯಾಂಟಮ್ ಚಿತ್ರದ ಹೆಸರು ಬದಲಾಗಿದೆ. ಆ ಟೈಟಲ್ ಬದಲಾಗಿ ಚಿತ್ರದಲ್ಲಿ ಸುದೀಪ್ ಅವರ ಪಾತ್ರದ ಹೆಸರು ವಿಕ್ರಾಂತ್ ರೋಣ ಇದನ್ನೇ ಚಿತ್ರಕ್ಕೆ ಮರುನಾಮಕರಣ ಮಾಡಲಾಗಿದೆ.

ಈ ಬಗ್ಗೆ ಈ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಅವರು ಅಧಿಕೃತ ಘೋಷಣೆ ಮಾಡಿದ್ದು. ಈ ವಿಚಾರದೊಟ್ಟಿಗೆ ಕಿಚ್ಚ ಸುದೀಪ್ ಅವರಿಗೆ ವಿಶೇಷವಾದ ಗೌರವ ಸಲ್ಲಿಸಲು ಮೆಗಾ ಪ್ಲಾನ್ ಮಾಡಿರುವುದನ್ನು ಸಹ ತಿಳಿಸಿದ್ದಾರೆ.
ಫ್ಯಾಂಟಮ್ ಟೈಟಲ್ ಬದಲು ವಿಕ್ರಾಂತ್ ರೋಣ ಹೆಸರು ಬದಲಾಗಿರುವ ಹಿನ್ನೆಲೆ, ಜನವರಿ 31ರಂದು ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫ ಮೇಲೆ ವಿಕ್ರಾಂತ್ ರೋಣ ಟೈಟಲ್ ಲೋಗೋ ಹಾಗೂ ಸುದೀಪ್ ಅವರ ಪೋಟೋ ಅನಾವರಣಗೊಳಿಸಲಿದ್ದಾರೆ. ಈ ಕಾರ್ಯಕ್ರಮ ಕಾರ್ಯಕ್ರಮ ಕಿಚ್ಚ ಕ್ರಿಯೇಷನ್ಸ್ ಯ್ಯೂಟೂಬ್ ಚಾನಲ್ನಲ್ಲಿ ನೇರ ಪ್ರಸಾರವಾಗಲಿದೆ.
ಬುರ್ಜ್ ಖಲೀಫ ಮೇಲೆ ವಿಕ್ರಾಂತ್ ರೋಣ⁰⁰! Phantom is now #VikrantRona. World's first movie to reveal Title Logo+180secs sneak peek on Burj Khalifa Jan 31st#VikrantRonaOnBurjKhalifa @VikrantRona ⁰@KicchaSudeep @jackmanjunath @alankar_pandian @Shaliniartss Invenio Films Zakir Khan pic.twitter.com/sHGSTB69j7
— Anup Bhandari (@anupsbhandari) January 21, 2021