Top

ಬೆಂಗಳೂರಿನ ಖಾಲಿ ಖಾಲಿ ರಸ್ತೆಗಳಲ್ಲಿ ಅಪ್ಪು ಸುತ್ತಾಟ

ಪುನೀತ್​ ರಾಜಕುಮಾರ್ ರೀತಿ ಸ್ಟಂಟ್ಸ್​ ಮಾಡುವ ನಟ ಮತ್ತೊಬ್ಬರಿಲ್ಲ ಅದಕ್ಕೆ ಕಾರಣ ಅವರ ಫಿಟ್ನೆಸ್ ಮತ್ತು ಅದಕ್ಕಾಗಿ ಅವರು ಮಾಡುವ ಕಸರತ್ತು.

ಬೆಂಗಳೂರಿನ ಖಾಲಿ ಖಾಲಿ ರಸ್ತೆಗಳಲ್ಲಿ ಅಪ್ಪು ಸುತ್ತಾಟ
X

ಸ್ಯಾಂಡಲ್​​ವುಡ್​ನಲ್ಲಿ ಫಿಟ್ನೆಸ್​ ಅಂದ್ರೆ, ಪುನೀತ್​ ರಾಜ್​ಕುಮಾರ್​, ಪುನೀತ್​ ರಾಜ್​ಕುಮಾರ್​ ಅಂದ್ರೆ, ಫಿಟ್ನೆಸ್​. ಲಾಕ್​ಡೌನ್​ ಟೈಮ್​ನಲ್ಲೂ ಪವರ್​ ಸ್ಟಾರ್​ ಮನೆಯಲ್ಲಿ ಸುಮ್ಮನೆ ಕೂರಲಿಲ್ಲ. ಮನೆಯಲ್ಲಿ ವರ್ಕ್​ಔಟ್​ ಮಾಡ್ತಾ, ವೀಡಿಯೋಗಳನ್ನ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿ ಅಭಿಮಾನಿಗಳನ್ನ ಹುರಿದುಂಬಿಸುತ್ತಿದರು. ಇದೀಗ ಅಂಥದ್ದೇ ಮತ್ತೊಂದು ವೀಡಿಯೋ ಬಂದಿದೆ.

ಇದು ಪುನೀತ್​ ರಾಜ್​ಕುಮಾರ್​​ ಸೈಕಲ್​ ಏರಿ ಬೆಂಗಳೂರು ಪ್ರದಕ್ಷಿಣೆ ಹಾಕಿರುವ ವೀಡಿಯೋ. ಅಪ್ಪು ಫಿಟ್ನೆಸ್​ಗಾಗಿ ಸಮಯ ಸಿಕ್ಕಾಗಲೆಲ್ಲಾ ಸ್ನೇಹಿತರ ಸೈಕಲ್​​ ರೈಡ್​ ಹೋಗುತ್ತಾರೆ. ಹೇಳಿ ಕೇಳಿ ಪುನೀತ್​ ರಾಜ್​ಕುಮಾರ್​​ ಫಿಟ್ನೆಸ್​ ಫ್ರೀಕ್. ಸ್ಯಾಂಡಲ್​ವುಡ್​ನಲ್ಲಿ ಅವರಷ್ಟು ಫ್ಲೆಕ್ಸಿಬಲ್, ಅವರ ರೀತಿ ಸ್ಟಂಟ್ಸ್​ ಮಾಡುವ ನಟ ಮತ್ತೊಬ್ಬರಿಲ್ಲ ಅದಕ್ಕೆ ಕಾರಣ ಅವರ ಫಿಟ್ನೆಸ್ ಮತ್ತು ಅದಕ್ಕಾಗಿ ಅವರು ಮಾಡುವ ಕಸರತ್ತು. ಅದರ ಒಂದು ಭಾಗ ಈ ಸೈಕಲ್​ ಸವಾರಿ.



ಲಾಕ್​ಡೌನ್​ ಸಮಯದಲ್ಲಿ ಪುನೀತ್​ ರಾಜ್​ಕುಮಾರ್​ ಮನೆಯಲ್ಲೇ ವರ್ಕ್​ಔಟ್​ ಮಾಡಿರೋ ಸಾಕಷ್ಟು ವೀಡಿಯೋಗಳನ್ನ ನೋಡಿದ್ದೇವೆ. ಅಬ್ಬಾ ವಯಸ್ಸು ನಲವತ್ತೈದಾದರು, ಅವರು ಮಾಡುವ ಸ್ಟಂಟ್ಸ್​, ಎಕ್ಸರ್​ಸೈಜ್ ​ ಹುಬ್ಬೇರಿಸುತ್ತೆ. ಪುನೀತ್​​ ವರ್ಕೌಟ್​ ನೋಡಿ ಅಭಿಮಾನಿಗಳು ದಂಗಾಗಿದರು. ಅಷ್ಟೇ ಅಲ್ಲ, ಕೆಲವರು ಅದನ್ನ ಟ್ರೈ ಮಾಡಿದರು.

ಸಾಮಾನ್ಯವಾಗಿ ಜಿಮ್​ನಲ್ಲಿ ಬೆವರಿಳಿಸುವ ಅಪ್ಪು, ಬಾಡಿ ವೇಯ್ಟ್​ ಎಕ್ಸರ್​ಸೈಜ್ ಮಾಡೋದ್ರಲ್ಲೂ ನಿಸ್ಸೀಮರು. ಏನು ಇಲ್ಲ ಅಂದ್ರೆ, ಹೀಗೆ ಸೈಕಲ್​ ಏರಿ ಹೊರಟು ಬಿಡ್ತಾರೆ. ನಂದಿ ಬೆಟ್ಟಕ್ಕೆ ಸ್ನೇಹಿತರ ಜೊತೆ ಸೈಕಲ್​ ಸವಾರಿ ಅಂದ್ರೆ, ಅಪ್ಪುಗೆ ಅಚ್ಚುಮೆಚ್ಚು. ಆದರೆ, ಕೊರೊನಾ ಸಮಯದಲ್ಲಿ ಅದಕ್ಕೆಲ್ಲಾ ಬ್ರೇಕ್​ ಬಿದ್ದಿದೆ. ಏಕಾಂಗಿಯಾಗಿ ಬೆಳ್ಳಂ ಬೆಳಗ್ಗೆ ಮಾಸ್ಕ್​ ಧರಿಸಿ, ಬೆಂಗಳೂರು ಸುತ್ತಾಮುತ್ತಾ ಸವಾರಿ ಮಾಡಿದ್ದಾರೆ.

ಸಾಮಾನ್ಯವಾಗಿ ಪುನೀತ್​ ರಾಜ್​ಕುಮಾರ್​ ಮನೆಯಿಂದ ಹೊರ ಬಂದ್ರೆ, ಅಭಿಮಾನಿಗಳು ಮುತ್ತಿಕೊಳ್ತಾರೆ. ಇದೇ ಕಾರಣಕ್ಕೆ ಕೆಲ ಸೆಲೆಬ್ರೆಟಿಗಳು ಮಾರು ವೇಷದಲ್ಲೂ, ಮುಸುಕು ಧರಿಸಿಯೋ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ತಾರೆ. ಆದರೆ, ಕೊರೊನಾ ಹಾವಳಿಯಿಂದ ಎಲ್ಲರು ಮಾಸ್ಕ್​ ಧರಿಸುವಂತಾಗಿದೆ. ಇದು ಅಪ್ಪು ಸೈಕಲ್​ ಸವಾರಿಗೆ ಅನುಕೂಲವಾಗಿದೆ ಅನ್ಬೋದು. ಯಾಕಂದ್ರೆ, ಪುನೀತ್​ ಮಾಸ್ಕ್​ ಧರಿಸಿ ಜನರ ನಡುವೆ ಹಾದು ಹೋದರು ಯಾರು ಗುರುತಿಸಲೇಯಿಲ್ಲ.


ಸದಾಶಿವನಗರದ ತಮ್ಮ ನಿವಾಸದಿಂದ ಸೈಕಲ್ ಸವಾರಿ ಆರಂಭಿಸಿರುವ ಅಪ್ಪು, ವಸಂತನಗರ, ಚಾಲುಕ್ಯ ಸರ್ಕಲ್ ಮೂಲಕ ಸಾಗಿ ವಿಧಾನಸೌಧ, ಬಹುಮಹಡಿ ಕಟ್ಟಡ ಮುಂದಿನಿಂದ ಚಿನ್ನಸ್ವಾಮಿ ಸ್ಟೇಡಿಯಂ ಮಾರ್ಗವಾಗಿ ಎಂಜಿ ರಸ್ತೆಯಲ್ಲಿ ಟ್ರಿನಿಟಿ ಸರ್ಕಲ್​ವರೆಗೂ ಜಾಲಿ ರೈಡ್​​​ ಹೋಗಿ ಬಂದಿದ್ದಾರೆ. ಕೆಲ ದಿನಗಳಿಂದ ಬೆಂಗಳೂರಿ ರಸ್ತೆಗಳಲ್ಲಿ ಸೈಕಲ್​ ಸವಾರಿಯನ್ನ ಅಪ್ಪು ಸಖತ್​ ಎಂಜಾಯ್​ ಮಾಡುತ್ತಿದ್ದಾರೆ.

ಸದ್ಯ ಸಿನಿಮಾ ಶೂಟಿಂಗ್​ ಇಲ್ಲದ ಕಾರಣ ಆರಾಮಾಗಿ ಅಪ್ಪು ಸಮಯ ಕಳೀತಿದ್ದಾರೆ. ಇತ್ತಿಚೆಗೆ ಕೆಲ ಸಿನಿಮಾಗಳ ಶೂಟಿಂಗ್​ ಆರಂಭವಾಗಿದ್ದು, ಮುಂದಿನ ತಿಂಗಳು ಯುವರತ್ನ ಶೂಟಿಂಗ್​ ಕೂಡ ಶುರುವಾಗಲಿದೆ. ಸಂತೋಷ್​ ಆನಂದ್​ ರಾಮ್​ ನಿರ್ದೇಶನದ ಯುವರತ್ನ ಸಿನಿಮಾದಲ್ಲಿ ಕಾಲೇಜ್​ ಸ್ಟೂಡೆಂಟ್​ ಆಗಿ ಮತ್ತಷ್ಟು ಯಂಗ್​ ಲುಕ್​ನಲ್ಲಿ ಪ್ರೇಕ್ಷಕರನ್ನ ರಂಜಿಸೋಕ್ಕೆ ಪವರ್​ ಸ್ಟಾರ್​ ಬರ್ತಿದ್ಧಾರೆ.ಲ

Next Story

RELATED STORIES