ದುಬೈನಲ್ಲಿ ಆರಡಿ ಕಟೌಟ್ಗೆ ಅದ್ದೂರಿ ಸ್ವಾಗತ
ವಿಶ್ವದ ಎತ್ತರ ಕಟ್ಟಡದಲ್ಲಿ ಲಾಂಚ್ ಆಗಲಿದೆ ಟೈಟಲ್ ಲೋಗೋ

ಸ್ಯಾಂಡಲ್ವುಡ್ನ ಬಾದ್ಶಾ ಕಿಚ್ಚ ಸುದೀಪ್ ಕಟೌಟ್, ವಿಶ್ವದ ಅತಿ ಎತ್ತರದ ಕಟ್ಟಡದಲ್ಲಿ ರಾರಾಜಿಸೋಕ್ಕೆ ಕೌಂಟ್ಡೌನ್ ಶುರುವಾಗಿದೆ. ಈ ಅದ್ದೂರಿ ಕಾರ್ಯಕ್ರಮಕ್ಕಂತ್ಲೇ ಈಗಾಗಲೇ ಕಿಚ್ಚ ದುಬೈ ಸೇರಿದ್ದು ಆಗಿದೆ. ಹಾಗಾದ್ರೆ ಕನ್ನಡದ ಆರಡಿ ಕಟೌಟ್ಗೆ ದುಬೈನಲ್ಲಿ ಹೇಗಿತ್ತು ವೆಲ್ಕಂ. ಸ್ಯಾಂಡಲ್ವುಡ್ನ ಮೋಸ್ಟ್ ಎಕ್ಸ್ಪೆಕ್ಡೆಡ್ ಫ್ಯಾಂಟಂ ಸಿನಿಮಾ ಈಗ ವಿಕ್ರಾಂತ್ ರೋಣ ಆಗಿರೋದು ಗೊತ್ತೇಯಿದೆ.
ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ವಿಚಾರದಲ್ಲಿ ಸೌಂಡ್ ಮಾಡ್ತಾನೇ ಇದೆ. ಫಸ್ಟ್ ಲುಕ್ನಿಂದ ಹಿಡಿದು ಪಾತ್ರಗಳನ್ನು ಪರಿಚಯ ಮಾಡುವರೆಗೂ ಚಿತ್ರತಂಡ ವಿಭಿನ್ನ ಕಾನ್ಸೆಪ್ಟ್ ಪ್ಲಾನ್ ಮಾಡ್ತಾ ಬಂದಿದೆ.. ವಿಕ್ರಾಂತ್ ರೋಣನ ಹೊಸ ಕ್ರಿಯಿಟಿವಿಗಳನ್ನು ನೋಡಿ ಫ್ಯಾನ್ಸ್ ಕೂಡ ಫಿದಾ ಆಗಿದ್ರು. ಇದೀಗ ವಿಆರ್ ಮತ್ತೊಮ್ಮೆ ಸುದ್ದಿಯಲ್ಲಿದೆ.
ಖುರ್ಜ್ ಖಲೀಫಾ ವಿಶ್ವದ ಅತ್ಯಂತ ಎತ್ತರದ ಕಟ್ಟಡ. ದುಬೈನಲ್ಲಿರುವ ಈ ಕಟ್ಟಡದಲ್ಲಿ ಇದೀಗ ವಿಕ್ರಾಂತ್ ರೋಣನ ಪ್ರಪಂಚ ಅನಾವರಣಗೊಳ್ಳಲಿದೆ. ವಿಕ್ರಾಂತ್ ರೋಣ ಟೈಟಲ್ ಲೋಗೋ ಲಾಂಚ್ ಆಗುತ್ತಿದೆ. ಇದೇ ಜನವರಿ 31 ರಂದು ಈ ಅದ್ದೂರಿ ಕಾರ್ಯಕ್ರಮ ನೆರವೇರಲಿದೆ.
ಅಂದ್ಹಾಗೇ ಈ ಮೂಲಕ ಬುರ್ಜ್ ಖಲೀಫಾ ಹತ್ತಿದ ಮೊದಲ ಕನ್ನಡ ಚಿತ್ರ ಅನ್ನೋ ಖ್ಯಾತಿಗೆ ವಿಕ್ರಾಂತ್ ರೋಣ ಪಾತ್ರವಾಗಲಿದೆ. ಈ ಹಿಂದೆ ಬುರ್ಜ್ ಖಲೀಫಾದಲ್ಲಿ ಹಾಲಿವುಡ್ನ ಸಿನಿಮಾಗಳಾದ 'ವಂಡರ್ ವುಮನ್- 1984', 'ಮಾರ್ವೆಲ್' ಸೇರಿದಂತೆ ಕೆಲ ಸಿನಿಮಾಗಳ ಟೀಸರ್ ಮತ್ತು ಟ್ರೇಲರ್ಗಳು ಪ್ರದರ್ಶನವಾಗಿದ್ದವು. ಇವುಗಳ ಸಾಲಿಗೆ ಈಗ ಕನ್ನಡದ ಸಿನಿಮಾ ಸಹ ಸೇರಿಕೊಂಡಿದೆ.ಅಂದ್ಹಾಗೇ ಚಿತ್ರದ ಟೈಟಲ್ ಲೊಗೋ ಲಾಂಚ್ ಜೊತೆಗೆ ಚಿತ್ರದ ಝಲಕ್ ಕೂಡ ರಿಲೀಸ್ ಆಗುತ್ತಿದೆ.
ಕಿಚ್ಚ ಸುದೀಪ್ ಸಿನಿಯಾನಕ್ಕೆ 25 ವರ್ಷ ತುಂಬಿದೆ. ಸುದೀಪ್ ಸಿನಿಯಾನದ ಬೆಳ್ಳಿ ಹಬ್ಬದ ಸಂಭ್ರಮ ಕೂಡ ಬುರ್ಜ್ ಖಲೀಫಾದಲ್ಲೇ ನಡೆಯುತ್ತೆ ಅನ್ನೋ ಮಾತುಗಳು ಕೂಡ ಕೇಳಿ ಬರ್ತಿದೆ. ವಿಕ್ರಾಂತ್ ರೋಣನ ಟೈಟಲ್ ಲೋಗೋ ಲಾಂಚ್ ಜೊತೆಗೆ ಕಿಚ್ಚನ ಸಿನಿ ಜರ್ನಿಯ ಸೆಲೆಬ್ರೇಷನ್ ಕೂಡ ನಡೆಯೋ ಸಾಧ್ಯತೆ ಇದೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜನವರಿ 27 ರಂದು ದುಬೈ ತಲುಪಿದ್ದಾರೆ. ದುಬೈ ಇಂಟರ್ ನ್ಯಾಷನಲ್ ಏರ್ಪೋರ್ಟ್ಗೆ ಬಂದಿಳಿದ ಸುದೀಪ್ರನ್ನ ದುಬೈ ಸಂಸ್ಕೃತಿಯಂತೆ ವೆಲ್ಕಂ ಮಾಡಿಕೊಂಡಿದ್ದಾರೆ.
ಕಿಚ್ಚ ಸುದೀಪ್ ವಿಮಾನ ಇಳಿತಿದ್ದ ಹಾಗೇ, ದುಬಾರಿ ಕಾರಿನಲ್ಲಿ ಹೊಟೇಲ್ ಕಡೆ ಪ್ರಯಾಣ ಬೆಳೆಸಿದ್ದಾರೆ. ಕಿಚ್ಚ ಬರ್ತೀದ್ದ ಹಾಗೇ ಹೂಗುಚ್ಛ ನೀಡಿ, ಹೂಮಾಲೆ ಹಾಕಿ, ವಿಶೇಷವಾದ ಉಡುಗೊರೆಯನ್ನು ನೀಡಿ ಸ್ವಾಗತ ಕೋರಲಾಗಿದೆ. ಸದ್ಯ ಈ ವಿಡಿಯೋ ಹಾಗೂ ಫೋಟೋಗಳು ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಜನವರಿ 31ರಂದು ಬೆಳಿಗ್ಗೆ ಇರುವಂತಹ ಈ ಕಾರ್ಯಕ್ರಮಕ್ಕೆ ಕಿಚ್ಚ 29ರಂದೇ ಫ್ಲೈಟ್ ಹತ್ತಿದ್ದಾರೆ. ಸದ್ಯ ಎಲ್ಲೆಡೆ ಕೊರೊನಾ ಲಾಕ್ಡೌನ್ ನಿಯಮಗಳು ಜಾರಿಯಲ್ಲಿದ್ದು, ನಿಯಮದಂತೆ 4 ದಿನ ಮುಂಚಿತವಾಗಿ ದುಬೈ ನಾಡಿಗೆ ತಲುಪಿದ್ದಾರೆ ಕಿಚ್ಚ.