Top

ಮತ್ತೆ ಡೈರೆಕ್ಟರ್​ ಕ್ಯಾಪ್​ ಹಾಕೋಕ್ಕೆ ರೆಡಿಯಾದ ಉಪೇಂದ್ರ

  • ರಿಯಲ್​ ಸ್ಟಾರ್ ಬರ್ತ್​ಡೇ ಸೆಲೆಬ್ರೇಷನ್​ಗೆ ಕೊರೊನಾ ಬ್ರೇಕ್.
  • ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ಉಪೇಂದ್ರ ಮನವಿ.
  • ಮಿಲಿಯನ್​ ಡಾಲರ್​ ಪ್ರಶ್ನೆಗೆ ಉತ್ತರ ಕೊಟ್ಟ ರಿಯಲ್​ ಸ್ಟಾರ್.

ಮತ್ತೆ ಡೈರೆಕ್ಟರ್​ ಕ್ಯಾಪ್​ ಹಾಕೋಕ್ಕೆ ರೆಡಿಯಾದ ಉಪೇಂದ್ರ
X

ಸೆಪ್ಟೆಂಬರ್​ 18 ರಿಯಲ್​ ಸ್ಟಾರ್ ಉಪೇಂದ್ರ ಹುಟ್ಟುಹಬ್ಬ. ಪ್ರತಿವರ್ಷ ಉಪ್ಪಿ ಬರ್ತ್​ಡೇಯನ್ನ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡ್ತಿದ್ದ ಫ್ಯಾನ್ಸ್​​ಗೆ, ಈ ಬಾರಿ ಕೊರೊನಾ ನಿರಾಸೆ ತಂದಿದೆ. ನೆಚ್ಚಿನ ನಟನ ಬತ್​ರ್ಡೇ ಸೆಲೆಬ್ರೇಟ್ ಮಾಡೋಕ್ಕೆ ಆಗ್ತಾ ಇಲ್ವಲ್ಲ ಅಂತ ಬೇಜಾರಲ್ಲಿರೋ ಅಭಿಮಾನಿಗಳಿಗೆ, ರಿಯಲ್​ ಸ್ಟಾರ್ ಒಂದು ಸ್ವೀಟ್​ ನ್ಯೂಸ್ ಕೊಟ್ಟು ಖುಷಿ ಪಡಿಸಿದ್ದಾರೆ. ಯಾವಾಗ ಉಪ್ಪಿ ಡೈರೆಕ್ಟ್ ಮಾಡ್ತಾರೆ ಅನ್ನೋ ಮಿಲಿಯನ್​ ಡಾಲರ್​ ಪ್ರಶ್ನೆಗೆ ಉಪ್ಪಿನೇ ಉತ್ತರ ಕೊಟ್ಟಿದ್ದಾರೆ.

ಸೆಪ್ಟೆಂಬರ್​ 18 . ರಿಯಲ್​ ಸ್ಟಾರ್​ಗೆ ಹುಟ್ಟುಹಬ್ಬದ ಸಂಭ್ರಮ. ಪ್ರತಿವರ್ಷ ಅಭಿಮಾನಿಗಳೆಲ್ಲಾ ಉಪ್ಪಿ ಮನೆಮುಂದೆ ಜಮಾಯಿಸಿ,ಮಧ್ಯರಾತ್ರಿಯಿಂದಲೇ ಅದ್ದೂರಿಯಾಗಿ ಸೆಲೆಬ್ರೇಷನ್​ ಮಾಡ್ತಾರೆ. ಆದರೆ, ಈ ಬಾರಿ ಕೊರೊನಾ ಸಮಸ್ಯೆಯಿಂದ ನೆಚ್ಚಿನ ನಟನನ್ನ ಭೇಟಿ ಮಾಡೋಕ್ಕಾಗದೇ, ಫ್ಯಾನ್ಸ್​ ನಿರಾಸೆಯಾಗಿದ್ದಾರೆ.

ಇನ್ನು ಸ್ವತ: ರಿಯಲ್​ ಸ್ಟಾರ್ ಉಪೇಂದ್ರ ಈ ಬಗ್ಗೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದು, ಈ ಬಾರಿ ಹುಟ್ಟುಹಬ್ಬದ ಆಚರಣೆ ಇರೋದಿಲ್ಲ. ನಿಮ್ಮ ಪ್ರೀತಿ ಹಾರೈಕೆ ಇರಲಿ. ನಿಮ್ಮನ್ನೆಲ್ಲಾ ಮಿಸ್ ಮಾಡಿಕೊಳ್ತಿದ್ದೀನಿ ಅಂತ ಹೇಳಿದ್ದಾರೆ. ಸಾಧ್ಯವಾದರೇ ಹುಟ್ಟುಹಬ್ಬದ ದಿನ ಸೋಶಿಯಲ್​ ಮೀಡಿಯಾ ಲೈವ್​ ಮೂಲಕ ಅಭಿಮಾನಿಗಳ ಜೊತೆ ಮಾತನಾಡೋದಾಗಿ ತಿಳಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿರೋ ರಿಯಲ್​ ಸ್ಟಾರ್, ತಮ್ಮ ನಿರ್ದೇಶನದ ಸಿನಿಮಾ ಬಗ್ಗೆ ಕೂಡ ಬಾಯ್ಬಿಟ್ಟಿದ್ದಾರೆ. ಕಳೆದ ಕೆಲ ವರ್ಷಗಳಿಂದ, ಉಪ್ಪಿ ನಿರ್ದೇಶನದ ಸಿನಿಮಾಗಾಗಿ ಕಾಯ್ತಿದ್ದ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್ ಕೊಟ್ಟಿದ್ದಾರೆ. ಈಗಾಗಲೇ ನನ್ನ ನಿರ್ದೇಶನದ ಸಿನಿಮಾ ಕೆಲಸ ಶುರುಮಾಡಿದ್ದೇನೆ. ಟೈಟಲ್​ ಮತ್ತು ಮತ್ತಿತರ ವಿಚಾರಗಳನ್ನ ಶೇರ್​ ಮಾಡಿಕೊಳ್ಳಲು ಟೈಮ್​ ಬೇಕು ಅಂತ ಹೇಳಿದ್ದಾರೆ. ಸದ್ಯ ಕೈಯ್ಯಲ್ಲಿರೋ ಸಿನಮಾಗಳ ಶೂಟಿಂಗ್​ ಕಂಪ್ಲೀಟ್ ಮಾಡಿ ಆದಷ್ಟು ಬೇಗ ನಿರ್ದೇಶನ ಮಾಡೋದಾಗಿ ಉಪ್ಪಿ ಹೇಳಿದ್ದು, ಈ ವಿಷ್ಯ ಕೇಳಿ ಫ್ಯಾನ್ಸ್​ ಥ್ರಿಲ್​ ಆಗಿದ್ದಾರೆ.

ಸದ್ಯ ರಿಯಲ್​ ಸ್ಟಾರ್, ಕಬ್ಜ, ಬುದ್ದಿವಂತ 2, ಪುಣ್ಯಾತ್ಮ, ಹೋಮ್ ಮಿನಿಸ್ಟರ್ ಸಿನಿಮಾಗಳ ಶೂಟಿಂಗ್​ ಕಂಪ್ಲೀಟ್ ಮಾಡಬೇಕಿದೆ. ಉಪ್ಪಿ ನಿರ್ದೇಶನದ ಸಿನಿಮಾ ಅಂದ್ರೆ ಅಲ್ಲೊಂದು ಕುತೂಹಲ ಇದ್ದೆ ಇರುತ್ತೆ.ಪ್ರಸ್ತುತ ಸಮಾಜದಲ್ಲಿ ನಡಿತಿರೋ ಸಾಕಷ್ಟು ವಿಚಾರಗಳ ಮೇಲೆ ಬೆಳಕು ಚೆಲ್ಲೋ ಪ್ರಯತ್ನವೂ ಇರುತ್ತೆ.ಇದನ್ನೆಲ್ಲಾ ಉಪ್ಪಿ ತಮ್ಮದೇ ಸ್ಟೈಲ್​ನಲ್ಲಿ, ಒಂದಷ್ಟು ಎಂಟರ್​​ಟೈನ್ಮೆಂಟ್​ ಜೊತೆಗೆ ತೆರೆಗೆ ತರೋಕ್ಕೆ ಒಂದಷ್ಟು ಸಮಯ ಬೇಕಾಗಿದೆ..ಹಾಗಾಗಿ ಉಪ್ಪಿ ಸಾಕಷ್ಟು ಪ್ರಿಪರೇಷನ್​ ಮಾಡಿಕೊಳ್ತಿದ್ದಾರೆ.

ಒಟ್ನಲ್ಲಿ ರಿಯಲ್​ ಸ್ಟಾರ್​ ಅಭಿಮಾನಿಗಳು ಕೇಳ್ತಿದ್ದ,ಮಿಲಿಯನ್​ ಡಾಲರ್​ ಪ್ರಶ್ನೆಗೆ ಸ್ವತಃ ಉಪೇಂದ್ರ ಉತ್ತರ ಕೊಟ್ಟಿದ್ದು, ಆದಷ್ಟು ಬೇಗ ಉಪ್ಪಿ ಮೈಕ್​ ಹಿಡಿದು ಆ್ಯಕ್ಷನ್​ ಕಟ್ ಹೇಳಬೇಕು ಅನ್ನೊದು ಅಭಿಮಾನಿಗಳ ಆಸೆ ಮಾತ್ರವಲ್ಲ. ಕನ್ನಡ ಸಿನಿಮಾ ಇಂಡಸ್ಟ್ರಿಯ ಆಶಯ.

Next Story

RELATED STORIES