ಪೊಗರು ರಿಲೀಸ್ಗೆ ಎರಡು ಡೇಟ್ ಲಾಕ್..!
ಪೋಸ್ಟ್ಪೋನ್ ಆಗುತ್ತಾ ಪೊಗರು ರಿಲೀಸ್..?

ಅಂತೂ ಇಂತೂ ಮೋಸ್ಟ್ ಎಕ್ಸ್ಪೆಕ್ಡೆಡ್ ಪೊಗರು ಸಿನಿಮಾ ರಿಲೀಸ್ಗೆ ಡೇಟ್ ಫಿಕ್ಸ್ ಆಯ್ತು. ಇದೇ ಜನವರಿ 29ಕ್ಕೆ ಪೊಗರು ಥಿಯೇಟರ್ ಅಂಗಳಕ್ಕೆ ಅಪ್ಪಳಿಸೋಕ್ಕೆ ರೆಡಿಯಾಗಿದೆ. ಆದರೆ, ಇದರಲ್ಲೂ ಒನ್ ಸ್ಮಾಲ್ ಟ್ವಿಸ್ಟ್ ಇದೆ. ಪೊಗರು ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಸದ್ದು ಮಾಡ್ತಾನೇ ಬಂದಿದೆ. ಅದರಲ್ಲೂ ಡೈಲಾಗ್ ಟೀಸರ್ ಮತ್ತು ಖರಾಬು ಸಾಂಗ್ ರಿಲೀಸ್ ಆದ್ಮೆಲಂತೂ ಪೊಗರು ಕ್ರೇಜ್ ಮೌಂಟ್ ಎವರೆಸ್ಟ್ ಎತ್ತರಕ್ಕೇರಿ ಬಿಟ್ಟಿದೆ. ಹಾಡು, ಟ್ರೇಲರ್ಗಳು ದೊಡ್ಡ ಮಟ್ಟದ ಸದ್ದು ಮಾಡಿವೆ.
ಇನ್ನು ತಮಿಳು ಮತ್ತು ತೆಲುಗಿನಲ್ಲೂ ಪೊಗರು ಸಿನಿಮಾದ ಡೈಲಾಗ್ ಟ್ರೇಲರ್ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ. ಟಾಲಿವುಡ್ ಮತ್ತು ಕಾಲಿವುಡ್ನಲ್ಲಿ ಪೊಗರು ಪ್ರಳಯವನ್ನೇ ಎಬ್ಬಸಿದೆ. ಪಂಚಿಂಗ್ ಡೈಲಾಗ್ಗೆ ತಮಿಳು ಮತ್ತು ತೆಲುಗು ಪ್ರೇಕ್ಷಕರು ಜೈ ಎಂದಿದ್ದಾರೆ. ಈ ನಡುವೆ ಪೊಗರು ಟೀಮ್ನಿಂದ ಬ್ರೇಕಿಂಗ್ ನ್ಯೂಸ್ವೊಂದು ಹೊರಬಿದ್ದಿದೆ.
ಪೊಗರು, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹು ನಿರೀಕ್ಷಿತ ಸಿನಿಮಾ. ಚಂದವನದಲ್ಲಿ ಮಾತ್ರವಲ್ಲ ಕಾಲಿವುಡ್ ಟಾಲಿವುಡ್ನಲ್ಲೂ ಹೊಸ ಅಲೆ ಸೃಷ್ಟಿಸಿರೋ ಪೊಗರು ರಿಲೀಸ್ಗೆ ಮುಹೂರ್ತ ಫಿಕ್ಸ್ ಆಗಿದೆ. ಜನವರಿ 29ರ ಮೇಲೆ ಪೊಗರು ಟೀಮ್ ಕಣ್ಣಿಟ್ಟಿದೆ. ಈ ಮುಂಚೆ ಡಿಸೆಂಬರ್ 25 ತಪ್ಪಿದ್ರೆ ಜನವರಿ ತಿಂಗಳ ಸಂಕ್ರಾಂತಿಗೆ ಬಂದು, ಸಿನಿ ಕ್ರಾಂತಿ ಮಾಡುತ್ತೇವೆ ಅಂತಿದ್ದ ಪೊಗರು ಚಿತ್ರತಂಡ ಈಗ ಕೊನೆಗೂ ಒಂದು ಡೇಟ್ ಅನ್ನ ಫಿಕ್ಸ್ ಮಾಡಿದೆ. ಜನವರಿ 29ರಂದು ಪೊಗರು ತೆರೆಗೆ ಅಪ್ಪಳಿಸೋದು ಕನ್ಫರ್ಮ್ ಅಂತ ಹೇಳಾಗುತ್ತಿದೆ. ಆದರೆ, ಇಲ್ಲೂ ಒಂದು ಟ್ವಿಸ್ಟ್ ಇದೆ.
ಜನವರಿ 29ರಂದು ತೆರೆಗೆ ಬರಲು ರೆಡಿಯಾಗಿರೋ ಪೊಗರು ಮತ್ತೆ ಪೋಸ್ಟ್ ಪೋನ್ ಆಗುವ ಸಾಧ್ಯತೆ ಇದೆ. ಹೀಗಾಗಿ ಅಭಿಮಾನಿಗಳು ಸ್ವಲ್ಪ ತಾಳ್ಮೆಯಿಂದ ಕಾಯಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಜನವರಿ 29ಕ್ಕೆ ಪೊಗರು ಆರ್ಭಟ ಶುರುವಾಗಲಿದೆ. ಒಂದು ವೇಳೆ ಅಂದು ರಿಲೀಸ್ ಆಗದೇ ಇದ್ರೆ ಮತ್ತೊಮ್ಮೆ ಪೊಗರು ರಿಲೀಸ್ ಡೇಟ್ ಪೋಸ್ಟ್ಪೋನ್ ಆಗೋ ಸಾಧ್ಯತೆ ದಟ್ಟವಾಗಿದೆ. ಹಾಗಂತ ಅಭಿಮಾನಿಗಳು ತಿಂಗಳಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಇಲ್ಲ. ಕೇವಲ ಒಂದು ವಾರ ಕಾದ್ರೆ ಸಾಕು. ಕಾರಣ ಪೊಗರು ಟೀಮ್ ಮತ್ತೊಂದು ಡೇಟ್ ಅನ್ನು ಲಾಕ್ ಮಾಡಿದೆ. ಜನವರಿ 29ರಂದು ಒಂದು ವೇಳೆ ಸಿನಿಮಾ ರಿಲೀಸ್ ಆಗದೆ ಇದ್ರೆ ಫೆಬ್ರವರಿ 6ರಂದು ಪೊಗರು ತೆರೆಗೆ ಅಪ್ಪಳಿಸೋದು ಗ್ಯಾರೆಂಟಿ.