ನೈಜ ಘಟನೆಯಾಧಾರಿತ ಸಿನಿಮಾಗೇ ರಾಜಕೀಯ ರಂಗು
ತನುಜಾ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದ ಬಿಎಸ್ವೈ

ಸಿನಿಮಾರಂಗಕ್ಕೂ ರಾಜಕೀಯ ರಂಗಕ್ಕೂ ಒಂಥರಾ ನಂಟು. ಸಿನಿಮಾಮಂದಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರೋದು ಇದೆ. ಪೊಲಿಟಿಶಿಯನ್ಸ್ ಸಿನಿಮಾಗಳಲ್ಲಿ ನಟಿಸಿರೋದು ಇದೆ. ಇದೀಗ ಹಾಲಿ ಸಚಿವ ಸುಧಾಕರ್ರವರು ಕೂಡ ಸಿನಿಮಾವೊಂದರಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡುತ್ತಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಹೊಸ ತಂಡದ ಹೊಸ ಸಿನಿಮಾಗಳು ಸೆಟ್ಟೇರ್ತಾನೆ ಇರುತ್ತೆ. ಆದರೆ, ಅದರಲ್ಲಿ ಕೆಲವು ಸಿನಿಮಾಗಳು ಹೆಚ್ಚು ಗಮನ ಸೆಳೆಯುತ್ತೆ. ಅಂತದ್ದೇ ಒಂದು ಸಿನಿಮಾ ತನುಜಾ.
ಬಹುಶಃ ನಿಮಗೆಲ್ಲಾ ನೆನಪಿರಬಹುದು. ಇತ್ತೀಚೆಗೆ ಕೊರೊನಾ ಕಾರಣದಿಂದ ಒಂದು ಬಾರಿ ನೀಟ್ ಪರೀಕ್ಷೆ ವಂಚಿತಳಾಗಿದ್ದ ತನುಜಾ, ಎಂಬ ಶಿಕಾರಿಪುರದ ವಿದ್ಯಾರ್ಥಿನಿ ಆನಂತರ ಆಕೆಯ ಶಿಕ್ಷಕರು, ಸಿಎಂ ಹಾಗೂ ಸಚಿವರಾದ ಸುಧಾಕರ್ರವರ ಸಹಾಯದಿಂದ 2ನೇ ಅವಕಾಶದಲ್ಲಿ ಪರೀಕ್ಷೆ ಬರೆದು ವೈದ್ಯಕೀಯ ಸೀಟು ಗಿಟ್ಟಿಸಿಕೊಂಡಿದರು. ಇದೀಗ ಇದೇ ನೈಜಕಥೆ ಸಿನಿಮಾ ಆಗುತ್ತಿದೆ.
ಆಂದ್ಹಾಗೇ ತನುಜಾ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ನ್ನ ಸಿಎಂ ಬಿಎಸ್ವೈ ಬಿಡುಗಡೆ ಮಾಡಿದ್ದಾರೆ ಹಾಗೂ ಸಚಿವರಾದ ಸುಧಾಕರ್ ತಮ್ಮದೇ ರಿಯಲ್ ಪಾತ್ರವನ್ನ ಸಿನಿಮಾದಲ್ಲಿ ಪ್ಲೇ ಮಾಡುತ್ತಿದ್ದಾರೆ.
ಅಂದ್ಹಾಗೇ ಈ ಚಿತ್ರಕ್ಕೆ ಹರೀಶ್ ಆ್ಯಕ್ಷನ್ ಕಟ್ ಹೇಳ್ತಿದ್ದು, ಲೀಡ್ ರೋಲ್ನಲ್ಲಿ ಸಪ್ತ ಪಾವೂರು ನಟಿಸುತ್ತಿದ್ದಾರೆ. ಹಾಗೂ ರವೀಂದ್ರನಾಥ್ ಕ್ಯಾಮರವರ್ಕ್, ಪ್ರದೋತನ ಸಂಗೀತ ಚಿತ್ರಕ್ಕಿದೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಶುರುವಾಗಲಿದೆ.