Top

ಜಗತ್ತು ನಶ್ವರ ನಾನು ಎನ್ನುವ ಅಹಂ ಬೇಡ - ನವರಸ ನಾಯಕ ಜಗ್ಗೇಶ್

ಇವತ್ತು 1-2 ದಿನ ಸಿನೆಮಾ ಓಡುವ ಮೇಲೆ ಸ್ಟಾರ್ ಡಮ್ ನಿರ್ಧಾರ ಆಗುತ್ತಿದೆ.

ಜಗತ್ತು ನಶ್ವರ ನಾನು ಎನ್ನುವ ಅಹಂ ಬೇಡ - ನವರಸ ನಾಯಕ ಜಗ್ಗೇಶ್
X

ಮೈಸೂರು: ಈ ಗಲಾಟೆ ಇಲ್ಲಿ ನಡೆಯಬೇಕಾಗಿದ್ದಲ್ಲ, ಇದು ರಾಮನಗರ ಸರ್ಕಲ್​ನಲ್ಲಿ ನಡೆಯಬಹುದು. ನನ್ನ ಚಲನವಲನಗಳನ್ನೆಲ್ಲಾ ಗಮನಿಸಿದರು ಇದನ್ನ ನಾನು ಧೃಡಪಡಿಸುತ್ತೇನೆ ಎಂದು ನಟ ಜಗ್ಗೇಶ್ ಅವರು ಬುಧವಾರ ಹೇಳಿದ್ದಾರೆ.

ಮೊನ್ನೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ ಪ್ರಕರಣದ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಬೇರೆ ಬೇರೆ ಕಾರಣಗಳಿಂದಾಗಿ ರಾಮನಗರ ಸರ್ಕಲ್​ನಲ್ಲಿ ಬರಲಿಲ್ಲ, ಬಳಿಕ ಸೆಟ್​ನಿಂದಲೇ ಯಾರೋ ನನ್ನ ಬಗ್ಗೆ ಮಾಹಿತಿ ಹಂಚಿದ್ದಾರೆ. ನಾವು ಅವನನ್ನ ಕಂಡು ಹಿಡಿಯುತ್ತೇವೆ. ಇಲ್ಲಿ ಗಲಾಟೆ ಮಾಡಿ ವಿಡಿಯೋ ಮಾಡಿ ಜಗ್ಗೇಶ್ ಮಾನ ಹರಾಜು ಹಾಕಲು ಯತ್ನಿಸಿದರು. ನಾವು ಮಾಡುವ ಗಲಾಟೆಯಿಂದ ಹೆದ್ದಾರಿ ಬಂದ್ ಆಗಿದೆ ನೋಡಿ ಅಂತ ತೋರಿಸಬೇಕಿತ್ತು. ಅದಕ್ಕಾಗಿ ಎಲ್ಲ ಪ್ಲಾನ್ ಮಾಡಿಕೊಂಡಿದ್ದರು. ಆದರೆ, ಗಲಾಟೆ ಇಲ್ಲಿ ಆಯ್ತು ಎಂದು ನಟ ಜಗ್ಗೇಶ್ ಅವರು ವಿವರಣೆ ನೀಡಿದ್ದರು.

ಚಿತ್ರರಂಗದ ಎಲ್ಲಾ ವಿಭಾಗದಲ್ಲೂ ಕೆಲಸ ಮಾಡಿದ್ದೀನಿ. ಹಾಗಾಗಿ ಚಿತ್ರರಂಗದ ಹಣೆಬರಹ ನನಗೆ ಗೊತ್ತು. ಮುಂಚೆ ನೂರು ದಿನ ಸಿನೆಮಾ ಓಡುತ್ತಿದ್ದವು. ಇವತ್ತು 1-2 ದಿನ ಸಿನೆಮಾ ಓಡುವ ಮೇಲೆ ಸ್ಟಾರ್ ಡಮ್ ನಿರ್ಧಾರ ಆಗುತ್ತಿದೆ. ಈ ಪರಿಸ್ಥಿತಿಯಿಂದ ನಮ್ಮಂತ ಸ್ಟಾರ್​ಗಳಿಗೆ ಹೆಲ್ಪ್ ಆಗುತ್ತಿದೆ. ಆದರೆ, ನಿರ್ಮಾಪಕರಿಗಲ್ಲ ಯಾವುದೇ ಸಹಾಯ ಆಗಿಲ್ಲ ಎಂದರು.

ನಾವು ಒಗ್ಗಟ್ಟಿನ ಮೂಲಮಂತ್ರದಲ್ಲಿ ಬೆಳೆದವರು. ಒಂದು ವಿಚಾರವನ್ನ ಅಳೆದು ತೂಗಿ ವಿಮರ್ಶೆ ಮಾಡಬೇಕು. ನಾನು ಹಳೇ ಕಥೆಯನ್ನ ಮತ್ತೆ ಮತ್ತೆ ಹೇಳಲು ಹೋಗಲ್ಲ. ಎಲ್ಲಾ ಮಾಧ್ಯಮಮಿತ್ರರಿಗೂ ಧನ್ಯವಾದ. ಜಾಗರೂಕತೆಯಿಂದ ಹ್ಯಾಂಡಲ್ ಮಾಡಿದ್ದೀರಾ. 20 ಹುಡುಗರು ಬಂದು ಅವತ್ತು ಗಲಾಟೆ ಮಾಡಿದರು. ಆದ್ರೂ ತೋತಾಪುರಿ ಸಿನೆಮಾ ನಿಲ್ಲಬಾರದು ಎನ್ನೋದು ನನ್ನ ಉದ್ದೇಶವಾಗಿತ್ತು. ಬಹಳ ಶಾಂತಿಯುತವಾಗಿ ಇಲ್ಲಿ ಶೂಟಿಂಗ್ ನಡೆಯುತ್ತಿತ್ತು ಎಂದು ಹೇಳಿದರು.

ನಮ್ಮನ್ನ ಬೆಳೆಸುವವರು, ಚಪ್ಪಾಳೆ ತಟ್ಟುವವರ ದೇವರು. ನಾವೇ ದೇವರು ಅಂತ ಬೋರ್ಡ್ ಹಾಕಿಕೊಂಡವರಲ್ಲ. ಚಿರು ಸರ್ಜಾ ತೀರಿಕೊಂಡಾಗ ಎಷ್ಟು ಜನ ಬಾಯಿಕೊಂಡಿರಿ(?) ಆತ ಸತ್ತು ವರ್ಷ ಆಗಿಲ್ಲ, ಎಷ್ಟು ಜನ ಅವರ ಮನೆಗೆ ಹೋಗಿ ಮನೆಯವರನ್ನ ಸಂತೈಸಿದ್ರಿ. ಜಗ್ಗೇಶ್ ಸತ್ತರೂ ಅಷ್ಟೇ ಎಲ್ಲ ಮರೆತುಹೋಗುತ್ತಾರೆ. ಜಗತ್ತು ನಶ್ವರ ನಾನು ಎನ್ನುವ ಅಹಂ ಬೇಡ. ಗಲಾಟೆ ನಡೆದ ದಿನ ನಾನು ದೊಡ್ಡದು ಮಾಡಿದ್ದರೆ ನಿರ್ಮಾಪಕನ ಬದುಕಿಗೆ ಪೆಟ್ಟು ಬಿದ್ದಿರುತ್ತಿತ್ತು. ಕೆಲ ಮಾಧ್ಯಮಗಳು ಈ ವಿಚಾರವನ್ನ ತಣ್ಣಗೆ ಮಾಡಬಹುದಿತ್ತು. ಆದರೆ, ಯಾಕೆ ಹೀಗೆ ಮಾಡಿದ್ರೋ ಗೊತ್ತಿಲ್ಲ. ದಯವಿಟ್ಟು ಈ ವಿಚಾರ ಇಲ್ಲಿಗೆ ಬಿಟ್ಟು ಬಿಡಿ ಎಂದು ಹೇಳಿ ನವರಸ ನಾಯಕ ಜಗ್ಗೇಶ್ ಅವರು ಪತ್ರಕರ್ತರ ಮರು ಪ್ರಶ್ನೆಗೆ ಉತ್ತರಿಸದೆ ಎದ್ದು ಹೋದರು

Next Story

RELATED STORIES