ಏಳು ತಿಂಗಳ ಲಾಕ್ಡೌನ್ ಬಳಿಕ ತೆರೆಯಿತು ಥಿಯೇಟರ್ ಬಾಗಿಲು
ಇದೀಗ 3 ತಿಂಗಳ ನಂತ್ರ ಸಿಕ್ತು ವನವಾಸದಿಂದ ಸಂಪೂರ್ಣ ಮುಕ್ತಿ.!

ಬೆಂಗಳೂರು: ಅಂತೂ ಇಂತೂ ಥಿಯೇಟರ್ಗೆ ಸಿಕ್ತು ಸಂಪೂರ್ಣ ಮುಕ್ತಿ. ಥಿಯೇಟರ್ ಓಪನ್ ಆದ್ರೂಇಷ್ಟು ದಿನ ಕೇವಲ 50 ಪರ್ಸೆಂಟ್ ಪ್ರೇಕ್ಷಕರಿಗೆ ಮಾತ್ರ ಅವಕಾಶ ಇತ್ತು. ಆದರೆ ಈಗ 100 ಪರ್ಸೆಂಟ್ ಥಿಯೇಟರ್ ಫುಲ್ ಆಗೋ ಟೈಮ್ ಬಂದಿದೆ. ಈ ವಿಚಾರ ರಿಲೀಸ್ ಡೇಟ್ ಅನೌನ್ಸ್ ಮಾಡಿರೋ ಅಷ್ಟು ಚಿತ್ರತಂಡಗಳಿಗೆ ಖುಷಿ ಕೊಟ್ಟಿದೆ.
ಒಂದಲ್ಲಾ ಎರಡಲ್ಲಾ ಬರೋಬ್ಬರಿ 7 ತಿಂಗಳು ಮನರಂಜನೆಯ ಹಾಟ್ಸ್ಪಾಟ್ ಅಂತ ಕರೆಯುತ್ತಿದ್ದ ಥಿಯೇಟರ್ಗಳು ಬಾಗಿಲು ಹಾಕಿದ್ವು. 7 ತಿಂಗಳ ಕಾಲ ಥಿಯೇಟರ್ಗಳ ಬಾಗಿಲು ಮುಚ್ಚಿದ್ದು ಇತಿಹಾಸದಲ್ಲಿ ಇದೇ ಮೊದಲು. ಕೊರೊನಾ ಆರ್ಭಟಕ್ಕೆ ಕ್ಲೋಸ್ ಆಗಿದ್ದ ಚಿತ್ರಮಂದಿರಗಳು ಅಕ್ಟೋಬರ್ನಲ್ಲಿ ಓಪನ್ ಆಗಿದ್ದು ಗೊತ್ತೇಯಿದೆ.
ಅಕ್ಟೋಬರ್ನಲ್ಲಿ ಥಿಯೇಟರ್ಗಳು ರೀ ಓಪನ್ ಆದ್ರೂ, ಯಾವೊಂದು ಸಿನಿಮಾ ಕೂಡ ರಿಲೀಸ್ ಮಾಡೋ ಧೈರ್ಯ ಮಾಡಲಿಲ್ಲ. ಹಾಗಾಗಿ ಜನರನ್ನ ಚಿತ್ರಮಂದಿರದತ್ತ ಸೆಳೆಯಲು ಸ್ಟಾರ್ಗಳ ಹಳೆಯ ಸಿನಿಮಾಗಳನ್ನೇ ರೀ ರಿಲೀಸ್ ಮಾಡಲಾಯ್ತು. ಆದ್ರೂ ಥಿಯೇಟರ್ ಮುಂದೆ ಜನರೇ ಸುಳಿವೇ ಇರಲಿಲ್ಲ.
ಸಮಯ ಕಳೆದಂತೆ ಸಿನಿಪ್ರಿಯರು ಥಿಯೇಟರ್ ಕಡೆ ಬರೋ ಮನಸ್ಸು ಮಾಡಿದ್ರೂ, ಕೇವಲ 50 ಪರ್ಸೆಂಟ್ ಪ್ರೇಕ್ಷಕರಿಗೆ ಮಾತ್ರ ಅವಕಾಶ ಇತ್ತು. ಒಂದು ಸೀಟು ಗ್ಯಾಪ್ ಬಿಟ್ಟು ಮತ್ತೊಂದು ಸೀಟ್ನಲ್ಲಿ ಪ್ರೇಕ್ಷಕರು ಆಸೀನರಾಗಬೇಕಿತ್ತು. 50 ಪರ್ಸೆಂಟ್ ಜನ ಮಾತ್ರ ಥಿಯೇಟರ್ಗೆ ಬರಬೇಕು ಅನ್ನೋ ನಿಯಮದಿಂದ ಬಾಕ್ಸಾಫೀಸ್ ಕಲೆಕ್ಷನ್ ಹೊಡೆತ ಬೀಳುತ್ತೆ ಅಂತ ಹೊಸ ಸಿನಿಮಾಗಳು ಥಿಯೇಟರ್ಗೆ ಬರೋ ಮನಸ್ಸು ಮಾಡಲೇಯಿಲ್ಲ.
100 ಪರ್ಸೆಂಟ್ ಥಿಯೇಟರ್ ಓಪನ್ ಆಗಲಿ ಅಂತ ಕಾಯ್ತಿದ್ದ ಸಿನಿಮಾ ನಿರ್ಮಾಪಕರು, ಎಷ್ಟು ದಿನ ಅಂತ ಡಬ್ಬದಲ್ಲೇ ಇಟ್ಕೊಳ್ಳೋದು ಅಂತ ಇತ್ತೀಚಿನ ಕೆಲ ದಿನಗಳ ಹಿಂದೆ ಮನಸ್ಸು ಮಾಡಿ ಸಿನಿಮಾ ರಿಲೀಸ್ ಡೇಟ್ಗಳನ್ನ ಅನೌನ್ಸ್ ಮಾಡೋಕ್ಕೆ ಶುರುಮಾಡಿದರು. ಪರಭಾಷೆಯ ಸಿನಿಮಾಗಳು 50 ಪರ್ಸೆಂಟ್ ಥಿಯೇಟರ್ನಲ್ಲೇ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿತ್ತು. ಅದೇ ಧೈರ್ಯದ ಮೇಲೆ ಕನ್ನಡ ಸಿನಿಮಾಗಳನ್ನ ಕೂಡ 50 ಪರ್ಸೆಂಟ್ ಥಿಯೇಟರ್ಗಳಲ್ಲೇ ರಿಲೀಸ್ ಮಾಡೋ ನಿರ್ಧಾರ ಮಾಡಿದರು.
ಥಿಯೇಟರ್ಗಳು 50 ಪರ್ಸೆಂಟ್ ಓಪನ್ ಇದ್ರೂ ಪರವಾಗಿಲ್ಲ. ಸಿನಿಮಾ ರಿಲೀಸ್ ಮಾಡೇಬಿಡೋಣ ಅಂತ ಕನ್ನಡದ ಸ್ಟಾರ್ ಸಿನಿಮಾ ನಿರ್ಮಾಪಕರು ಬ್ಯಾಕ್ ಟು ಬ್ಯಾಕ್ ರಿಲೀಸ್ ಡೇಟ್ಗಳನ್ನ ಅನೌನ್ಸ್ ಮಾಡಿದರು. ರಾಮಾರ್ಜುನ, ಪೊಗರು, ರಾಬರ್ಟ್, ಯುವರತ್ನ ಹೀಗೆ ಸಾಲು ಸಾಲು ಚಿತ್ರಗಳು ಸದ್ಯ ಬಿಡುಗಡೆಗೆ ರೆಡಿಯಾಗಿವೆ..ಖುಷಿ ವಿಚಾರ ಏನಪ್ಪಾ ಅಂದ್ರೆ ಈ ಎಲ್ಲಾ ಸಿನಿಮಾಗಳು ರಿಲೀಸ್ ಆಗೋಕ್ಕು ಮೊದಲೇ ಕೇಂದ್ರ ಸರ್ಕಾರ 100 ಪರ್ಸೆಂಟ್ ಥಿಯೇಟರ್ ಓಫನ್ಗೆ ಅವಕಾಶ ಕೊಟ್ಟಿದೆ.
ಫೈನಲಿ 100 ಪರ್ಸೇಂಟ್ ಥಿಯೇಟರ್ಗಳು ಓಪನ್ ಆಗಿರೋದು ಕನ್ನಡ ಸಿನಿಮಾಗಳಿಗೆ ದೊಡ್ಡ ಮಟ್ಟದ ಒಳಿತಾಗಿದೆ. ಮತ್ತೆ ಸ್ಯಾಂಡಲ್ವುಡ್ನಲ್ಲಿ ಸಿನಿಮಾಗಳಿಗೆ ಸುಗ್ಗಿ ಕಾಲ ಶುರುವಾದಂತಾಗಿದೆ.