Top

ಭರ್ಜರಿಯಾಗಿ ನಡಿತಿದೆ ಕೆಜಿಎಫ್‌ ಡಬ್ಬಿಂಗ್

ಡಬ್ಬಿಂಗ್‌ ಸ್ಟೂಡಿಯೋಗೆ ರಾಕಿಭಾಯ್‌ ಎಂಟ್ರಿ

ಭರ್ಜರಿಯಾಗಿ ನಡಿತಿದೆ ಕೆಜಿಎಫ್‌ ಡಬ್ಬಿಂಗ್
X

ಪ್ಯಾನ್​ ಇಂಡಿಯನ್​ ಸಿನಿಮಾ ಕೆಜಿಎಫ್​ 2ಗಾಗಿ ಗಡಿಯೊಳಗೆ ಗಡಿಯಾಚೆ ಜನ ಕಾತುರದಿಂದ ಕಾಯುತ್ತಿದ್ದಾರೆ. ಹಾಗೇ ಕೆಜಿಎಫ್​ ಅಖಾಡದಲ್ಲಿ ಏನ್​ ನಡಿತಿದೆ ಅಂತ ತಿಳ್ಕೊಳ್ಳೋ ಕುತೂಹಲವೂ ಇದೆ. ಅದರಂತೆ ನಿರ್ದೇಶಕ ಪ್ರಶಾಂತ್​ ನೀಲ್​ ಸಿನಿಮಾ ಬಗ್ಗೆ ಬಿಗ್​ ಅಪ್ಡೇಟ್​​ವೊಂದನ್ನ ಕೊಟ್ಟಿದ್ದಾರೆ.

ಕೆಜಿಎಫ್ ಚಾಪ್ಟರ್2. ಇದೊಂದು ಸಿನಿಮಾಗಾಗಿ ಇಡೀ ದೇಶವೆ ಕಾತರದಿಂದ ಕಾದು ಕುಳಿತಿದೆ. ಕೇವಲ ದೇಶ ಮಾತ್ರ ಜಗತ್ತಿನ ಮೂಲೆ ಮೂಲೆಯಲ್ಲೂ ಕೆಜಿಎಫ್ಜಪ ನಡೆಯುತ್ತಿದೆ. ಈ ಸಿನಿಮಾ ತಂಡದಿಂದ ಬರುವ ಎಲ್ಲ ಅಪ್ಡೇಟ್ಸ್​​ಗೆ ಸಿನಿಪ್ರಿಯರು ಜಾತಕ ಪಕ್ಷಿಯಂತೆ ಕಾಯ್ತಾರೆ. ನಿರ್ದೇಶಕ ಪ್ರಶಾಂತ್ ನೀಲ್ ಮತ್ತು 'ರಾಕಿಂಗ್ ಸ್ಟಾರ್' ಯಶ್ ಬಳಗದಲ್ಲಿ ಏನಾಗುತ್ತಿದೆ ಅಂತ ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳದ್ದು. ಅಂತಹ ಎಲ್ಲ ಫ್ಯಾನ್ಸ್ಗಾಗಿ ಲೇಟೆಸ್ಟ್ ಮಾಹಿತಿ ಹಂಚಿಕೊಂಡಿದೆ 'ಕೆಜಿಎಫ್ 2' ಟೀಮ್.

ಕೆಜಿಎಫ್-2 ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರ್ಜರಿಯಾಗಿ ನಡಿತಿದೆ. ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರು ಸದ್ಯ ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದರೂ, ಅಷ್ಟೇ ಫಾಸ್ಟಾಗಿ ಕೆಜಿಎಫ್-2 ಕೆಲಸಗಳನ್ನು ಮಾಡುತ್ತಿದ್ದಾರೆ. ಸದ್ಯ ಡಬ್ಬಿಂಗ್ ಕೆಲಸ ಶುರುವಾಗಿದೆ. ಈಗಾಗಲೇ ನಟಿ ಶ್ರೀನಿಧಿ ಶೆಟ್ಟಿ ಡಬ್ಬಿಂಗ್​ನಲ್ಲಿ ಭಾಗಿಯಾಗಿದ್ದು, ಇತ್ತೀಚಿಗಷ್ಟೆ ಶ್ರೀನಿಧಿ ಶೆಟ್ಟಿ ಡಬ್ಬಿಂಗ್ ಮಾಡುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಡಬ್ಬಿಂಗ್ ಸ್ಟೂಡಿಯೋಗೆ ರಾಕಿಂಗ್ ಸ್ಟಾರ್ ಎಂಟ್ರಿಯಾಗಿದೆ.

ಇನ್ನು ಯಶ್ ಜೊತೆ ಇರುವ ಫೋಟೋವನ್ನು ಕೆಜಿಎಫ್ಕ್ಯಾಪ್ಟನ್ಪ್ರಶಾಂತ್ ನೀಲ್ ಸೋಶಿಯಲ್ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 'ರಾಕಿ ಜೊತೆ ಡಬ್ಬಿಂಗ್ ಮಾಡುವುದು ಯಾವಾಗಲೂ ರಾಕಿಂಗ್ ಆಗಿರುತ್ತದೆ' ಎಂದು ಕ್ಯಾಪ್ಷನ್ ನೀಡಿದ್ದಾರೆ. ಅಂದಹಾಗೆ ಯಶ್ ಕನ್ನಡಕ್ಕೆ ಮಾತ್ರ ಡಬ್ಬಿಂಗ್ ಮಾಡುತ್ತಾರಾ ಬೇರೆ ಭಾಷೆಗೂ ಯಶ್ ಅವರೇ ಡಬ್ ಮಾಡುತ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.

ಕೆಜಿಎಫ್ಚಾಪ್ಟರ್ 2' ಚಿತ್ರದ ಶೂಟಿಂಗ್ ಈಗಾಗಲೇ ಮುಗಿದಿದೆ. ಜುಲೈ 16ರಂದು ಈ ಸಿನಿಮಾ ತೆರೆಕಾಣುವುದು ಕನ್ಫರ್ಮ್​ ಆಗಿದೆ.ಈ ನಡುವೆ ಸದ್ಯ ಈ ಚಿತ್ರದ ಕೆಲಸಗಳು ಯಾವ ಹಂತದಲ್ಲಿವೆ ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಇದೆ. ಅದಕ್ಕೆ ಪ್ರಶಾಂತ್ ನೀಲ್ ಉತ್ತರ ನೀಡಿದ್ದಾರೆ. ಸದ್ಯಕ್ಕೆ ಡಬ್ಬಿಂಗ್ ಕೆಲಸಗಳು ಭರದಿಂದ ಸಾಗುತ್ತಿವೆ. ಜುಲೈ 16 ಕೆಜಿಎಫ್ 2 ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

Next Story

RELATED STORIES