Top

ಕೆಜಿಎಫ್​ ಚಾಪ್ಟರ್​ 2 ಟೀಸರ್​ಗೆ​ ನಿರೀಕ್ಷೆಗೂ ಮೀರಿದ ಭರ್ಜರಿ ರೆಸ್ಪಾನ್ಸ್​

ಜಿಎಫ್ ಚಾಪ್ಟರ್ 2 ಟೀಸರ್ ಇಷ್ಟು ದೊಡ್ಡ ಸಕ್ಸಸ್ ಆಗಲು ಚಿತ್ರತಂಡ ಸಖತ್​ ಕಸರತ್ತು ಮಾಡಿ ಗೆದ್ದಿದೆ

ಕೆಜಿಎಫ್​ ಚಾಪ್ಟರ್​ 2 ಟೀಸರ್​ಗೆ​ ನಿರೀಕ್ಷೆಗೂ ಮೀರಿದ ಭರ್ಜರಿ ರೆಸ್ಪಾನ್ಸ್​
X

ಬೆಂಗಳೂರು: ಜನವರಿ 7ರ ರಾತ್ರಿ 9.29ಕ್ಕೆ ಹೊಂಬಾಳೆ ಫಿಲಂಸ್ ಯ್ಯೂಟ್ಯೂಬ್ ವಾಹಿನಿಯಲ್ಲಿ ತೆರೆಕಂಡಿದ್ದ ಟೀಸರ್ ಆರಂಭದ 49 ನಿಮಿಷದಲ್ಲಿ 5 ಮಿಲಿಯನ್ ವೀಕ್ಷಣ ಕಂಡಿತ್ತು. ಬಳಿಕ 12 ಗಂಟೆಯಲ್ಲಿ 25 ಮಿಲಿಯನ್ ವೀಕ್ಷಣೆ ಕಂಡಿದೆ. ಸದ್ಯ ವೀಕ್ಷಣೆ 50 ಮಿಲಿಯನ್‌ಗೂ ಅಧಿಕವಾಗಿದೆ.

ಕೆಜಿಎಫ್ ಚಾಪ್ಟರ್ 2 ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಒಟ್ಟು ಐದು ಭಾಷೆಯಲ್ಲಿ ತೆರೆಗೆ ಬರಲಿದೆ. ಡಿಸೆಂಬರ್​ 21, 2018ರಲ್ಲಿ ಚಾಪ್ಟರ್ ರಿಲೀಸ್ ಆಗಿ ಬಹಳ ದೊಡ್ಡ ಯಶಸ್ಸು ಕಂಡಿತ್ತು. ಸದ್ಯ ಈಗ ಮೊದಲ ಭಾಗಕ್ಕಿಂತ ಹೆಚ್ಚಾಗಿ ಎರಡನೇ ಭಾಗ ಭಾರೀ ಕುತೂಹಲ ಮೂಡಿಸಿದೆ.


ಇಂದು ಯಶ್ ಅವರ ಹುಟ್ಟುಹಬ್ಬ ಹೀಗಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಹಿಂದೆ ಯಾವ ಭಾರತೀಯ ಚಿತ್ರವೂ ಮಾಡದ ದಾಖಲೆಗಳನ್ನು ಕೆಜಿಎಫ್ 2 ಟೀಸರ್ ಮಾಡಿದೆ. ಕೇವಲ ಭಾರತೀಯ ಮಟ್ಟದಲ್ಲಿ ಮಾತ್ರವಲ್ಲ, ವಿಶ್ವಮಟ್ಟದಲ್ಲಿ ರೆಕಾರ್ಡ್ ಕ್ರಿಯೇಟ್ ಮಾಡಿದೆ ಅಂದ್ರೆ ತಪ್ಪಾಗಲ್ಲ. ಅಂದ್ಹಾಗೆ, ಕೆಜಿಎಫ್ ಚಾಪ್ಟರ್ 2 ಟೀಸರ್ ಇಷ್ಟು ದೊಡ್ಡ ಸಕ್ಸಸ್ ಆಗಲು ಚಿತ್ರತಂಡ ಸಖತ್​ ಕಸರತ್ತು ಮಾಡಿ ಗೆದ್ದಿದೆ.

ಇನ್ನು ಹಿಂದೆ ಕೆಜಿಎಫ್​ ಚಾಪ್ಟರ್​ ಒಂದು ಐದು ಪ್ರತ್ಯೇಕ ಟೀಸರ್ ಬಿಡುಗಡೆ ವೀಕ್ಷಣೆ ಹಂಚಿಕೆ ಆಗಿತ್ತು. ಅದರೆ, ಈಗ ಚಾಪ್ಟರ್ 2ರ ಟೀಸರ್ ವಿಚಾರದಲ್ಲಿ ಚಿತ್ರತಂಡ ಸ್ವಲ್ಪ ತಲೆ ಉಪಯೋಗಿಸಿದೆ. ಐದು ಪ್ರತ್ಯೇಕ ಟೀಸರ್ ರಿಲೀಸ್ ಮಾಡುವ ಬದಲು ಯೂನಿವರ್ಸಲ್ ಆಗಿ ಒಂದೇ ಟೀಸರ್ ಬಿಡುಗಡೆ ಮಾಡೋಣ ಎಂಬ ನಿರ್ಧಾರಕ್ಕೆ ಬಂದಿದೆ. ಅದರ ಪರಿಣಾಮ ಈಗ ಟೀಸರ್ ಅಷ್ಟೇ ಯಶಸ್ಸು ಸಾಧಿಸಿದೆ.

Next Story

RELATED STORIES