ಅಭಿಮಾನಿಗಳಿಗೆ ರೈಡರ್ ಆ್ಯಕ್ಷನ್ ಟೀಸರ್ ಗಿಫ್ಟ್
ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು: ಸ್ಯಾಂಡಲ್ವುಡ್ ಜಾಗ್ವಾರ್ ಸ್ಟಾರ್ ನಿಖಿಲ್ ಕುಮಾರಸ್ವಾಮಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕುಟುಂಬದವರ ಜೊತೆ ಸಿಂಪಲ್ಲಾಗಿ ಬರ್ತ್ಡೇ ಸೆಲೆಬ್ರೇಟ್ ಮಾಡಿಕೊಂಡಿರೋ ಅವರು, ಅಭಿಮಾನಿಗಳನ್ನ ಮೀಟ್ ಮಾಡೋಕ್ಕೆ ಆಗದೇ ಹೋದರು, ಗಿಫ್ಟ್ ಅಂತೂ ಕೊಟ್ಟಿದ್ದಾರೆ. ನಿಖಿಲ್ ಅಭಿನಯದ ರೈಡರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸೋಶೀಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ನಿಖಿಲ್ ಅವರು ಕೊರೊನಾ ಸಮಸ್ಯೆಯಿಂದ ಮನೆಯಲ್ಲಿಯೇ ಕುಟುಂಬದವರ ಜೊತೆ ಕೇಕ್ ಕತ್ತರಿಸಿ ಹಾಗೂ ಕೆಲವೇ ಕೆಲವು ಅಭಿಮಾನಿಗಳ ಜೊತೆಗೂಡಿ ಸಿಂಪಲ್ಲಾಗಿ ಬರ್ತ್ಡೇ ಸೆಲೆಬ್ರೇಟ್ ಮಾಡಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲೂ ನಿಖೀಲ್ಗೆ ಶುಭಾಶಯಗಳ ಮಹಾಪೂರವೇ ಹರಿದುಬರ್ತಿದೆ.
ನಿಖಿಲ್ ಹುಟ್ಟುಹಬ್ಬದ ಪ್ರಯುಕ್ತ ರೈಡರ್ ಸಿನಿಮಾ ಟೀಸರ್ ರಿಲೀಸ್ ಆಗಿದೆ. ಇದು ಕಂಪ್ಲೀಟ್ ಆ್ಯಕ್ಷನ್ ಟೀಸರ್ ಆಗಿದ್ದು, ನಿಖಿಲ್ ಔಟ್ ಅಂಡ್ ಔಟ್ ಮಾಸ್ ಲುಕ್ನಲ್ಲಿ ಮಿಂಚಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ರೆಡಿಯಾಗುತ್ತಿರೋದರಿಂದ, ಎರಡು ಟೈಟಲ್ನಲ್ಲಿ ಟೀಸರ್ಅನ್ನು ರಿಲೀಸ್ ಮಾಡಲಾಗಿದೆ. 45 ಸೆಕೆಂಡ್ಗಳ ಈ ಟೀಸರ್ ಈಗಾಗ್ಲೇ ಸಿನಿಪ್ರಿಯರ ಮನ ಗೆದ್ದಿದೆ.
ಅಂದ್ಹಾಗೇ ಚಿತ್ರದಲ್ಲಿ ಬಹುದೊಡ್ಡ ತಾರಾಬಳಗವೇ ಇದ್ದು, ನಿಖಿಲ್ ಕುಮಾರಸ್ವಾಮಿಗೆ ಜೋಡಿಯಾಗಿ ಕಶ್ಮಿರಾ ಅವರು ಕಾಣಿಸಿಕೊಳ್ತಿದ್ದು, ದತ್ತಣ್ಣ, ಅಚ್ಯುತ್ ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ, ಅನುಷಾ ರೈ ಹೀಗೆ ಸಾಕಷ್ಟು ಕಲಾವಿದರಿದ್ದಾರೆ.
ಅಂದ್ಹಾಗೇ ರೈಡರ್ ನಿಖಿಲ್ ಅಭಿನಯದ 4 ನೇ ಸಿನಿಮಾ ಆಗಿದ್ದು, ಲಹರಿ ಫಿಲಮ್ಸ್ ನಿರ್ಮಾಣ ಮಾಡುತ್ತಿದ್ರೆ, ತೆಲುಗಿನ ನಿರ್ದೇಶಕ ವಿಜಯ್ ಕುಮಾರ್ ಕೊಂಡ ರೈಡರ್ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಸದ್ಯ ರಿಲೀಸ್ ಆಗಿರೋ ಆ್ಯಕ್ಷನ್ ಟೀಸರ್ , ಸಿನಿಮಾ ಮೇಲೆ ಕುತೂಹಲ ಹೆಚ್ಚಿಸಿದೆ..